ಹಾವೇರಿ ಜಿಲ್ಲೆಯಲ್ಲಿ ಪಾಳುಬಿದ್ದ ಎರಡು ಗರಡಿಮನೆಗಳು; ಕಸರತ್ತಿಗೆ ಬಳಸುತ್ತಿದ್ದ ಪರಿಕರಗಳೆಲ್ಲ ಮಾಯ

ಯುವಕರು ಹಾಗೂ ಪೈಲ್ವಾನರಿಗೆ ದೈಹಿಕ ಕಸರತ್ತು ನಡೆಸಲು ಗರಡಿಮನೆಗಳು ಹೆಚ್ಚಾಗಿ ಬಳಕೆ ಆಗುತ್ತಿದ್ದವು. ಆದರೆ ಈಗ ಆಧುನಿಕತೆಯ ಭರಾಟೆಯಲ್ಲಿ ಬಹುತೇಕರು ಗರಡಿಮನೆ ಬದಲು ಜಿಮ್​ಗಳತ್ತ ಮುಖ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಪಾಳುಬಿದ್ದ ಎರಡು ಗರಡಿಮನೆಗಳು; ಕಸರತ್ತಿಗೆ ಬಳಸುತ್ತಿದ್ದ ಪರಿಕರಗಳೆಲ್ಲ ಮಾಯ
ಹಾವೇರಿ ಜಿಲ್ಲೆಯ ಗರಡಿಮನೆ
Follow us
preethi shettigar
| Updated By: Lakshmi Hegde

Updated on:Feb 21, 2021 | 11:22 AM

ಹಾವೇರಿ: ಒಂದು ಕಾಲದಲ್ಲಿ ಪೈಲ್ವಾನ್​ರನ್ನು ತಯಾರು ಮಾಡುತ್ತಿದ್ದ ಗರಡಿಮನೆಗಳು ಈಗ ಕಣ್ಮರೆ ಆಗುತ್ತಿವೆ. ಬಡ ಪೈಲ್ವಾನ್​ರಿಗಂತೂ ಕಸರತ್ತು ನಡೆಸಲು ಹೇಳಿ ಮಾಡಿಸಿದ ತಾಣಗಳಾಗಿದ್ದ ಗರಡಿಮನೆಗಳು ಆಧುನಿಕತೆಯ ಭರಾಟೆಯಲ್ಲಿ ಬಿದ್ದು ಹೋಗುತ್ತಿವೆ. ಹಾವೇರಿ ನಗರದಲ್ಲಿದ್ದ ಎರಡು ಗರಡಿಮನೆಗಳಿಗ ಸಂಪೂರ್ಣ ಹಾಳಾಗಿ ಹೋಗಿದ್ದು, ಒಂದು ಗರಡಿಮನೆ ನೆಲಸಮ ಮಾಡಲಾಗಿದೆ. ಮತ್ತೊಂದು ಗರಡಿಮನೆ ಅವಸಾನದ ಅಂಚಿನಲ್ಲಿದೆ. ಇನ್ನೂ ಗರಡಿಮನೆಯಲ್ಲಿ ಕಸರತ್ತು ನಡೆಸಲು ಬಳಸುತ್ತಿದ್ದ ಪರಿಕರಗಳೆಲ್ಲಾ ಮಾಯವಾಗುತ್ತಿವೆ.

ಕಸರತ್ತಿನ ತಾಣಗಳು ಒಂದು ಕಾಲದಲ್ಲಿ ಗ್ರಾಮ ಮತ್ತು ನಗರಗಳ ಯುವಜನತೆ ದೈಹಿಕ ಆರೋಗ್ಯಕ್ಕಾಗಿ ಗರಡಿಮನೆಗಳನ್ನು ಅವಲಂಬಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಂತೂ ಗರಡಿಮನೆಗಳು ದೈಹಿಕ ಕಸರತ್ತಿನ ತಾಣಗಳಾಗಿದ್ದವು. ವಿಶೇಷವಾಗಿ ಕುಸ್ತಿ ಫೈಲ್ವಾನರನ್ನು ತಯಾರು ಮಾಡಲು ಗರಡಿಮನೆಗಳು ಬಳಕೆ ಆಗುತ್ತಿದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಗರಡಿಮನೆಗಳಲ್ಲಿ ಒಂದೆರಡು ಗಂಟೆಗಳ ಕಾಲ ದೈಹಿಕ ಕಸರತ್ತು ನಡೆಸುತ್ತಿದ್ದರು. ಹೀಗಾಗಿ ಯುವಕರು ದಷ್ಟಪುಷ್ಟವಾಗಿ ಸದೃಢ ದೇಹವನ್ನು ಹೊಂದಿರುತ್ತಿದ್ದರು.

ಕಣ್ಮರೆ ಆಗುತ್ತಿರುವ ಗರಡಿಮನೆಗಳು: ಗರಡಿಮನೆಗಳ ಸಂಖ್ಯೆ ಇದೀಗ ಕಡಿಮೆ ಆಗುತ್ತಿದೆ. ಹಾವೇರಿ ನಗರ ಒಂದರಲ್ಲೇ ಇದ್ದ ಎರಡು ಗರಡಿಮನೆಗಳಲ್ಲಿ ಒಂದು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಅದನ್ನು ಕೆಡವಲಾಗಿದೆ. ಇನ್ನೊಂದು ಗರಡಿಮನೆ ಇದ್ದು, ಅಲ್ಲಿ ದೈಹಿಕ ಕಸರತ್ತಿಗೆ ಬಳಕೆ ಆಗುತ್ತಿದ್ದ ಗರಡಿಮನೆಯ ಪರಿಕರಗಳು ಎಲ್ಲೆಂದರಲ್ಲಿ ಬಿದ್ದು ಮಾಯವಾಗಿವೆ. ಮೊದಲು ಈ ಬಗ್ಗೆ ಇದ್ದ ಕಾಳಜಿ ಈಗ ಕಡಿಮೆ ಆಗುತ್ತಿರುವುದರಿಂದಲೇ ಗರಡಿಮನೆಗಳು ಕಣ್ಮರೆ ಆಗುತ್ತಿವೆ.

gymnasium

ಗರಡಿಮನೆಯ ಪರಿಕರಗಳು ರಸ್ತೆಯಲ್ಲಿ ಬಿದ್ದಿರುವ ದೃಶ್ಯ

ಗರಡಿಮನೆ ಬದಲು ಜಿಮ್: ಯುವಕರು ಹಾಗೂ ಪೈಲ್ವಾನರಿಗೆ ದೈಹಿಕ ಕಸರತ್ತು ನಡೆಸಲು ಗರಡಿಮನೆಗಳು ಹೆಚ್ಚಾಗಿ ಬಳಕೆ ಆಗುತ್ತಿದ್ದವು. ಆದರೆ ಈಗ ಆಧುನಿಕತೆಯ ಭರಾಟೆಯಲ್ಲಿ ಬಹುತೇಕರು ಗರಡಿಮನೆ ಬದಲು ಜಿಮ್​ಗಳತ್ತ ಮುಖ ಮಾಡಿದ್ದಾರೆ. ಜಿಮ್‌ಗಳಲ್ಲಿ ಆಧುನಿಕ ವ್ಯಾಯಾಮದ ಪರಿಕರಗಳಿದ್ದು, ಯುವಕರು ಸಮಯ ಸಿಕ್ಕಾಗಲೆಲ್ಲ ಜಿಮ್​ಗಳಲ್ಲಿ ತಾಲೀಮು ನಡೆಸುತ್ತಾರೆ. ಸದ್ಯ ಗರಡಿಮನೆ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಜಿಮ್​​ಗಳಲ್ಲಿ ದುಬಾರಿ ಬೆಲೆ ಇದ್ದರೂ ಯುವಕರು ಆಧುನಿಕತೆಗೆ ಮಾರುಹೋಗಿ ಜಿಮ್ ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

gymnasium

ನೆಲಸಮವಾಗಿರುವ ಗರಡಿಮನೆ

ಆಧುನಿಕ ತಂತ್ರಜ್ಞಾನ ಮತ್ತು ಜಿಮ್‌ಗಳಿಂದಾಗಿ ಗರಡಿ ಮನೆಗಳು ಮೂಲೆಗುಂಪಾಗುತ್ತಿವೆ. ಇಂದಿನ ಯುವಜನತೆ ಜಿಮ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಮಗೆಲ್ಲ ದೈಹಿಕ‌ ಕಸರತ್ತು ನಡೆಸಲು ಗರಡಿಮನೆಗಳು ಅನುಕೂಲವಾಗಿದ್ದವು. ಈಗಲೂ ಬಡ ಯುವಕರಿಗೆ ದೈಹಿಕ ಕಸರತ್ತು ನಡೆಸಲು ಗರಡಿಮನೆಗಳು ಬಳಕೆ ಆಗುತ್ತಿವೆ. ಹೀಗಾಗಿ ಗರಡಿಮನೆಗಳನ್ನು ಅಭಿವೃದ್ಧಿಪಡಿಸಿ ಉಳಿಸಬೇಕಾಗಿದೆ ಎಂದು ಸ್ಥಳೀಯರಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಯುವಕರೆಲ್ಲಾ ಸೇರಿಕೊಂಡು ಗರಡಿಮನೆಯಲ್ಲಿ ವ್ಯಾಯಾಮ, ತಾಲೀಮು ಮಾಡುತ್ತಿದ್ದೆವು. ಆದರೆ ಗರಡಿಮನೆಗೆ ಬರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿ ವ್ಯಾಯಾಮ, ದೈಹಿಕ ತಾಲೀಮು ಮಾಡುವುದನ್ನು ಬಿಟ್ಟಿದ್ದೇವೆ. ಗರಡಿಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಸದೃಢರಾಗಿದ್ದ ತಮಗೆ ಈಗ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಕುಸ್ತಿಪಟು ಪ್ರದೀಪ ಡೊಳ್ಳಿನ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಸ್ವಾಸ್ಥ್ಯ ಸಮಾಜ, ಸದೃಢ ಯುವಕರ ಪಡೆಗಳನ್ನು ಗರಡಿಮನೆಗಳು ತಯಾರು ಮಾಡುತ್ತಿದ್ದವು. ಕುಸ್ತಿ ಫೈಲ್ವಾನರನ್ನು ತಯಾರಿಸುವ ಕಾರ್ಖಾನೆಗಳಂತೆ ಕೆಲಸ ಮಾಡುತ್ತಿದ್ದವು. ಆದರೆ ಈಗ ಗರಡಿಮನೆಗಳು ಕಣ್ಮರೆಯಾಗಿ, ಜಿಮ್‌ಗಳತ್ತ ಯುವಕರು ಮುಖಮಾಡುತ್ತಿದ್ದಾರೆ. ಸದ್ಯ ಸರ್ಕಾರ ಕಣ್ಮರೆ ಆಗುತ್ತಿರುವ ಗರಡಿಮನೆಗಳನ್ನು ರಕ್ಷಿಸಬೇಕಿದೆ. ದುಶ್ಚಟಗಳಿಗೆ ದಾಸರಾಗುತ್ತಿರುವ ಯುವಜನತೆಯನ್ನು ಮತ್ತೆ ಗರಡಿಮನೆಗಳತ್ತ ಕರೆತರಬೇಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಮ್ ಮಾಲೀಕರಿಂದ ಬೃಹತ್ ಪ್ರತಿಭಟನೆಗೆ ಸಜ್ಜು

Published On - 11:21 am, Sun, 21 February 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್