AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratha Saptami 2021: ರಥ ಸಪ್ತಮಿ ಹಿನ್ನೆಲೆ; ಅರಮನೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

ಈ ವರ್ಷದ ರಥ ಸಪ್ತಮಿ ಆಚರಣೆಯ ಹಿನ್ನೆಲೆಯಲ್ಲಿ ಅರಮನೆಯ ಮುಂದಿನ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಯಿತು.

Ratha Saptami 2021: ರಥ ಸಪ್ತಮಿ ಹಿನ್ನೆಲೆ; ಅರಮನೆ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ
ರಥಸಪ್ತಮಿ ಹಿನ್ನೆಲೆ ಅರಮನೆ ಆವರಣದ ಎದುರು ಸೂರ್ಯ ನಮಸ್ಕಾರ
Follow us
shruti hegde
|

Updated on:Feb 21, 2021 | 12:12 PM

ಮೈಸೂರು: ಈ ವರ್ಷದ ರಥ ಸಪ್ತಮಿ ಆಚರಣೆಯ ಹಿನ್ನೆಲೆಯಲ್ಲಿ ಅರಮನೆಯ ಮುಂದಿನ ಆವರಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಯಿತು. ಯೋಗ ಫೌಂಡೇಶನ್ ವತಿಯಿಂದ ಕಾರ್ಯಕ್ರಮ ಜರುಗಿತು. ಪ್ರತಿ ವರ್ಷವೂ ಕೂಡಾ ಅರಮನೆ ಎದುರು ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷವೂ ಕೂಡಾ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನೂರಾರು ಯೋಗ ಪಟುಗಳು ಭಾಗವಹಿಸಿದ್ದರು.

ಸೂರ್ಯನ ನಮಿಸಿ ಮಂತ್ರ ಪಠಿಸುವುದು ವಾಡಿಕೆ ಈ ದಿನ ಧಾರ್ಮಿಕರು ನವಗ್ರಹಗಳ ಪೂಜೆ, ಹೋಮವನ್ನು ಮಾಡುತ್ತಾರೆ. ಹೋಮ, ಹವನ ಮಾಡಲಾಗದವರು, ಓಂ ಸೂರ್ಯದೇವಾಯ ವಿದ್ಮಹೇ ಆದಿತ್ಯಾಯ ಧೀಮಹಿ | ತನ್ನೋ ಸೂರ್ಯ ಪ್ರಚೋದಯಾತ್’ಎಂದು ಸೂರ್ಯನನ್ನೂ ಹಾಗೂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ| ಗುರುಃ ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಎಂದು ನವಗ್ರಹಗಳನ್ನೂ ವಂದಿಸುತ್ತಾರೆ. ವಿಶೇಷವಾಗಿ ಸೂರ್ಯನಿಗೆ ನಮಸ್ಕಾರ ಮಾರುತ್ತಾರೆ.

ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವೇ ರಥಸಪ್ತಮಿ. ಭೂಮಿಗೆ ಬೆಳಕನ್ನೂ, ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯ ಉತ್ತರಾಯಣದತ್ತ ಚಲಿಸುವ ಪರ್ವ. ರಥಸಪ್ತಮಿಯ ದಿನ ಮುಂಜಾನೆ ಶಿರದ ಮೇಲೆ, ಉಭಯ ಭುಜಗಳ ಮೇಲೆ ಒಟ್ಟು 7 ಎಕ್ಕದೆಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು ಸಂಪ್ರದಾಯ. ಹೀಗೆ ಮಾಡುವುದರಿಂದ ಏಳೇಳು ಜನ್ಮದಲ್ಲಿ ಮಾಡಿದ ಪಾಪಗಳೂ, ರೋಗ, ಶೋಕಾದಿ ಉಪದ್ರವಗಳು ಪರಿಹಾರವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಇದು ಸಾಂಪ್ರದಾಯಿಕವಾಗಿ ಬಂದ ಆಚರಣೆಯೂ ಹೌದು.

mysuru rathasaptami suryanamaskara

ರಥ ಸಪ್ತಮಿ ಹಿನ್ನೆಲೆ ಅರಮೆನೆ ಆವರಣದ ಎದುರು ಯೋಗ ಫೌಂಡೇಶನ್ ವತಿಯಿಂದಸೂರ್ಯ ನಮಸ್ಕಾರ ನಡೆಸಲಾಯಿತು

ಪುರಾಣಗಳ ಪ್ರಕಾರ ಸೂರ್ಯ ಗ್ರಹಣದ ದಿನದಂತೆ ಮಾಘಶುದ್ಧ ಸಪ್ತಮಿ ಅರುಣೋದಯ ಕಾಲದಲ್ಲಿ ಕೂಡ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ. ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀರಾಮಚಂದ್ರ ಕೂಡ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣ ಹೇಳುತ್ತದೆ.

ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ರಥ ಸಮರ್ಪಣೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂದನ್ ಸಾಯಿ ಸರಸ್ವತಿಯವರು ರಥ ಸಮರ್ಪಣೆ ಮಾಡಿದ್ದಾರೆ. ರಥ ಸಪ್ತಮಿ ಹಿನ್ನೆಲೆಯಲ್ಲಿ ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಸಮರ್ಪಿಸಲಾಗಿದೆ. ಈ ಸುವರ್ಣ ರಥ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪುಗೊಂಡಿದೆ.

ಇದನ್ನೂ ಓದಿ: Ratha Saptami 2021: ಇಂದು ರಥ ಸಪ್ತಮಿ ಹಬ್ಬ; ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ

ಇದನ್ನೂ ಓದಿ: Ratha Saptami 2021: ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿ, ಮೇಲುಕೋಟೆಗೆ ಸುವರ್ಣ ರಥ ಸಮರ್ಪಿಸಿದ ಮಧುಸೂದನ್

Published On - 12:11 pm, Sun, 21 February 21

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
VIDEO: ಚಮೀರ... ಚಮೀರ... ಚಮೀರ... ಇದು ದುಷ್ಮಂತನ ಕ್ಯಾಚ್
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಆಂಧ್ರಪ್ರದೇಶ, ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು
ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?
ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ಕೇರೆ ಹಾವು! ಆಮೇಲೇನಾಯ್ತು?