ಮೀಸಲಾತಿಗೆ ಆಗ್ರಹಿಸಿ ಮೊಳಗಿದ ರಣಕಹಳೆ: ವೇದಿಕೆ ಮೇಲೆ ನಿಂತು ಹಸಿರು ಶಾಲ್ ಬೀಸಿ ನೆರೆದಿದ್ದವರನ್ನ ಹುರಿದುಂಬಿಸಿದ ಜಯಮೃತ್ಯುಂಜಯಶ್ರೀ, ಸಿಎಂ ನಿವಾಸಕ್ಕೆ ಪೊಲೀಸ್ ಭದ್ರತೆ

ಮೀಸಲಾತಿಗೆ ಆಗ್ರಹಿಸಿ ಮೊಳಗಿದ ರಣಕಹಳೆ: ವೇದಿಕೆ ಮೇಲೆ ನಿಂತು ಹಸಿರು ಶಾಲ್ ಬೀಸಿ ನೆರೆದಿದ್ದವರನ್ನ ಹುರಿದುಂಬಿಸಿದ ಜಯಮೃತ್ಯುಂಜಯಶ್ರೀ, ಸಿಎಂ ನಿವಾಸಕ್ಕೆ ಪೊಲೀಸ್ ಭದ್ರತೆ
ಬಸವ ಜಯಮೃತ್ಯುಂಜಯ ಶ್ರೀಗಳು

ಈಗಾಗಲೇ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಜನಸಾಗರವೇ ಹರಿದುಬರುತ್ತಿದೆ. ವೇದಿಕೆ ಮೇಲೆ ಬಂದ ಜಯಮೃತ್ಯುಂಜಯಶ್ರೀಗಳು ಮೈ ಮೇಲಿದ್ದ ಹಸಿರು ಶಾಲು ಬೀಸಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಈ ವೇಳೆ ವಚನಾನಂದ ಸ್ವಾಮೀಜಿ, ಮಠಾಧೀಶರು, ಮುಖಂಡರು ಜೊತೆಯಲ್ಲಿದ್ದರು.

Ayesha Banu

|

Feb 21, 2021 | 10:52 AM

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಜ.14ರಿಂದ ಶುರುವಾದ ಪಾದಯಾತ್ರೆ ಅಂತಿಮ ಘಟ್ಟ ತಲುಪಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು 11ಗಂಟೆಗೆ ಬೃಹತ್ ಸಮಾವೇಶ ನಡೆಯುತ್ತಿದೆ. ಈಗಾಗಲೇ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಜನಸಾಗರವೇ ಹರಿದುಬರುತ್ತಿದೆ. ವೇದಿಕೆ ಮೇಲೆ ಬಂದ ಜಯಮೃತ್ಯುಂಜಯಶ್ರೀಗಳು ಮೈ ಮೇಲಿದ್ದ ಹಸಿರು ಶಾಲು ಬೀಸಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಈ ವೇಳೆ ವಚನಾನಂದ ಸ್ವಾಮೀಜಿ, ಮಠಾಧೀಶರು, ಮುಖಂಡರು ಜೊತೆಯಲ್ಲಿದ್ದರು. ಸಮಾವೇಶಕ್ಕೂ ಮುನ್ನ ವಚನಾನಂದ ಸ್ವಾಮೀಜಿಯನ್ನ ಬಿಜೆಪಿ ಶಾಸಕರು ಭೇಟಿಯಾಗಲಿದ್ದಾರೆ.

ಮಧ್ಯಾಹ್ನದೊಳಗೆ ನಮಗೆ 2A ಮೀಸಲಾತಿ ನೀಡಬೇಕು ಮಧ್ಯಾಹ್ನದೊಳಗೆ ನಮಗೆ 2A ಮೀಸಲಾತಿ ನೀಡಬೇಕು. ಮೀಸಲಾತಿ ನೀಡದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಜಯಮೃತ್ಯುಂಜಯಶ್ರೀ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಸಿಗುವವರೆಗೂ ಬೆಂಗಳೂರು ಬಿಟ್ಟು ಹೋಗಲ್ಲ. ಸಮಾವೇಶಕ್ಕೆ ಬಂದವರೇ ನ್ಯಾಯವನ್ನು ಕೇಳುತ್ತಿದ್ದಾರೆ. ಅವರಿಗೆ ನ್ಯಾಯ ಸಿಗೋವರೆಗೂ ನಾನು ಬಿಡೋದಿಲ್ಲ. ಮಧ್ಯಾಹ್ನದೊಳಗೆ ಸಿಎಂ ಬಿಎಸ್‌ವೈ ಒಪ್ಪಿಗೆ ನೀಡಬೇಕು. ಒಪ್ಪಿಗೆ ನೀಡದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುತ್ತೇವೆ. ಮಾರ್ಚ್ 4ರ ನಂತರ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿತ್ತೇವೆ ಎಂದು ಟಿವಿ9ಗೆ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬಿಜೆಪಿ‌ ಸರ್ಕಾರ ನಮ್ಮ ಬೇಡಿಕೆಯನ್ನ ಈಡೇರಿಸುವ ವಿಶ್ವಾಸ ಇವತ್ತು ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ಸಮಾವೇಶ ನಡಿಯುತ್ತಿದೆ. ಈ ಸಮಾವೇಶದಲ್ಲಿ ನಾವೆಲ್ಲ ಭಾಗಿ ಆಗುತ್ತಿದ್ದೇವೆ. ಬಿಜೆಪಿ‌ ಸರ್ಕಾರ ನಮ್ಮ ಬೇಡಿಕೆಯನ್ನ ಈಡೇರಿಸುವ ವಿಶ್ವಾಸವಿದೆ. ಒಂದೊಮ್ಮೆ ಭರವಸೆ ಈಡೇರಿಸದಿದ್ದರೆ ಎಲ್ಲ ಹಿರಿಯರು ಒಂದೆಡೆ ಸೇರಿ ಮುಂದಿನ ನಿರ್ಧಾರ ಮಾಡ್ತೇವೆ ಎಂದು ಟಿವಿ9ಗೆ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ತಿಳಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಗೆ ಪೊಲೀಸ್ ಭದ್ರತೆ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾವೇಶ ಹಿನ್ನೆಲೆಯಲ್ಲಿ ಇಂದು ಹಲವು ಮುಖಂಡರು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಸಮಾವೇಶ ಸ್ಥಳಕ್ಕೆ ಕಮಲ್ ಪಂತ್ ಭೇಟಿ, ಪರಿಶೀಲನೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಮಾವೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಮಾವೇಶದ ವೇದಿಕೆಯ ಹಿಂಭಾಗದಲ್ಲಿ ಮಾತುಕತೆ ನಡೆಸಿದ್ದಾರೆ.

panchamasali convocation

ವೇದಿಕೆ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡಿದ ವಚನಾನಂದ ಸ್ವಾಮೀಜಿ, ಮಠಾಧೀಶರು, ಮುಖಂಡರು

panchamasali convocation

ವೇದಿಕೆ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡಿದ ವಚನಾನಂದ ಸ್ವಾಮೀಜಿ, ಮಠಾಧೀಶರು, ಮುಖಂಡರು

ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಪಂಚಮಸಾಲಿ ಪರಾಕ್ರಮ.. 10 ಲಕ್ಷ ಜನ, ಇಂದು ಫೈನಲ್ ಫೈಟ್

Follow us on

Related Stories

Most Read Stories

Click on your DTH Provider to Add TV9 Kannada