Ratha Saptami 2021: ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿ, ಮೇಲುಕೋಟೆಗೆ ಸುವರ್ಣ ರಥ ಸಮರ್ಪಿಸಿದ ಮಧುಸೂದನ್

ಇಂದು ರಥ ಸಪ್ತಮಿ. ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಗುತ್ತಿದೆ. ನೂರಾರು ಯೋಗ ಪಟುಗಳು ಸೂರ್ಯ ವಂದನೆ ಮಾಡಿ ಸೂರ್ಯನಿಗೆ ನಮಸ್ಕರಿಸಿದ್ದಾರೆ.

Ratha Saptami 2021: ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿ, ಮೇಲುಕೋಟೆಗೆ ಸುವರ್ಣ ರಥ ಸಮರ್ಪಿಸಿದ ಮಧುಸೂದನ್
ಮೈಸೂರು ಯೋಗ ಒಕ್ಕೂಟ ಆಯೋಜಿಸಿದ್ದ ರಥ ಸಪ್ತಮಿ ವಿಶೇಷ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Follow us
ಆಯೇಷಾ ಬಾನು
| Updated By: shruti hegde

Updated on:Feb 21, 2021 | 12:08 PM

ಮೈಸೂರು: ಇಂದು ರಥ ಸಪ್ತಮಿ. ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಗುತ್ತಿದೆ. ನೂರಾರು ಯೋಗ ಪಟುಗಳು ಸೂರ್ಯ ವಂದನೆ ಮಾಡಿ ಸೂರ್ಯನಿಗೆ ನಮಸ್ಕರಿಸಿದ್ದಾರೆ. ಮೈಸೂರು ಯೋಗ ಒಕ್ಕೂಟದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಭಗವಾನ್ ಸೂರ್ಯನಾರಾಯಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಗಳನ್ನು ಮಾಡಿ ರಥ ಸಪ್ತಮಿ ದಿನವನ್ನು ಆಚರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಭಾಗಿಯಾಗಿದ್ದು ಈ ವೇಳೆ ದೇವಾಲಯದಲ್ಲಿ ವಿಶೇಷ  ಪೂಜೆ ಸಲ್ಲಿಸಿದ್ದಾರೆ.

Ratha Saptami Yaduveer Krishnadatta Chamaraja Wadiyar

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಭಾಗಿಯಾಗಿದ್ದು ಈ ವೇಳೆ ದೇವಾಲಯದಲ್ಲಿ ವಿಶೇಷ  ಪೂಜೆ ಸಲ್ಲಿಸಿದರು

ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ರಥ ಸಮರ್ಪಣೆ ಇನ್ನು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂದನ್ ಸಾಯಿ ಸರಸ್ವತಿಯವರು ರಥ ಸಮರ್ಪಣೆ ಮಾಡಿದ್ದಾರೆ. ರಥ ಸಪ್ತಮಿ ಹಿನ್ನೆಲೆಯಲ್ಲಿ ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಸಮರ್ಪಿಸಿದ್ದಾರೆ. ಈ ಸುವರ್ಣ ರಥ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪುಗೊಂಡಿದೆ.

Ratha Saptami

ಮೇಲುಕೋಟೆ ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂಧನ್ ಸಾಯಿ ಸರಸ್ವತಿಯವರು ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಸಮರ್ಪಿಸಿದ್ದಾರೆ

ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವೇ ರಥಸಪ್ತಮಿ. ಭೂಮಿಗೆ ಬೆಳಕನ್ನೂ, ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯ ಉತ್ತರಾಯಣದತ್ತ ಚಲಿಸುವ ಪರ್ವ. ಮಾಘ ಮಾಸದಲ್ಲಿ ಸೂರ್ಯೋದಯಕ್ಕೂ ಮೊದಲು ಮಾಡುವ ಸ್ನಾನ ಅತ್ಯಂತ ಶ್ರೇಷ್ಠ. ಮಾಘ ಶುಕ್ಲದ ಸಪ್ತಮಿಯಂದೇ ಸೂರ್ಯ ದೇವರು ಜನಿಸಿದ್ದಂತೆ. ಅಂದು ಪ್ರಥಮ ಸೂರ್ಯ ಕಿರಣಗಳು ಸಂಗಮವಾಗುವ ಜಲದ ಮೇಲೆ ಬಿದ್ದಾಗ ಅದು ದಿವ್ಯಶಕ್ತಿಯಿಂದ ಕೂಡಿದ ತೀರ್ಥವಾಗುತ್ತದೆ. ಆ ತೀರ್ಥದಲ್ಲಿ ಮಾಡುವ ಸ್ನಾನಕ್ಕೆ ಅಂಥ ಶಕ್ತಿ ಇರುತ್ತದೆ ಎಂಬುದು ಹಲವರ ನಂಬಿಕೆ.

ಮಂತ್ರ ಪಠಿಸಿ, ಸೂರ್ಯನ ನಮಿಸಿ ರಥ ಸಪ್ತಮಿಯ ಪವಿತ್ರ ದಿನದಂದು ಹೇಮಗಿರಿ, ಶ್ರೀರಂಗಪಟ್ಟಣ, ಶಿಕಾರಿಪುರ, ಇಡುಗುಂಜಿ, ಕೊಪ್ಪಳ, ಹುಲುಕುಡಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬ್ರಹ್ಮ ರಥೋತ್ಸವ, ಜಾತ್ರೆಗಳೂ ಜರುಗುತ್ತವೆ. ಈ ದಿನ ಧಾರ್ಮಿಕರು ನವಗ್ರಹಗಳ ಪೂಜೆ, ಹೋಮವನ್ನು ಮಾಡುತ್ತಾರೆ. ಹೋಮ, ಹವನ ಮಾಡಲಾಗದವರು, ಓಂ ಸೂರ್ಯದೇವಾಯ ವಿದ್ಮಹೇ ಆದಿತ್ಯಾಯ ಧೀಮಹಿ | ತನ್ನೋ ಸೂರ್ಯ ಪ್ರಚೋದಯಾತ್’ಎಂದು ಸೂರ್ಯನನ್ನೂ ಹಾಗೂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ| ಗುರುಃ ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಎಂದು ನವಗ್ರಹಗಳನ್ನೂ ವಂದಿಸುತ್ತಾರೆ.

ಪುರಾಣಗಳ ಪ್ರಕಾರ ಸೂರ್ಯ ಗ್ರಹಣದ ದಿನದಂತೆ ಮಾಘಶುದ್ಧ ಸಪ್ತಮಿ ಅರುಣೋದಯ ಕಾಲದಲ್ಲಿ ಕೂಡ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ. ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀರಾಮಚಂದ್ರ ಕೂಡ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣ ಹೇಳುತ್ತದೆ.

Ratha Saptami

ಮೇಲುಕೋಟೆ ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂಧನ್ ಸಾಯಿ ಸರಸ್ವತಿಯವರು ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಸಮರ್ಪಿಸಿದ್ದಾರೆ

ಇದನ್ನೂ ಓದಿ:Ratha Saptami 2021: ಇಂದು ರಥಸಪ್ತಮಿ ಹಬ್ಬ; ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ

Published On - 8:38 am, Fri, 19 February 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್