ಮೆಡಿಕಲ್-ಇಂಜಿನಿಯರಿಂಗ್ ಸೀಟ್ ಗೋಲ್‌ಮಾಲ್: IT ದಾಳಿಯಲ್ಲಿ 402 ಕೋಟಿ ರೂ. ತೆರಿಗೆ ವಂಚನೆ ಪತ್ತೆ

IT Raids: ರಾಜ್ಯಾದ್ಯಂತ 9 ಶಿಕ್ಷಣ ಸಂಸ್ಥೆಗಳ ಮೇಲೆ IT ದಾಳಿ ನಡೆದಿದ್ದು 56 ಬೇರೆ ಬೇರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಮೆಡಿಕಲ್ ಸೀಟ್, ಇಂಜಿನಿಯರಿಂಗ್ ಸೀಟ್ ಸ್ಕ್ಯಾಮ್ ಸಹ ಬಯಲಾಗಿದ್ದು ಬ್ರೋಕರ್ಸ್‌ ಜೊತೆ ಸೇರಿ ಶಿಕ್ಷಣ ಸಂಸ್ಥೆಗಳಿಂದ ಅಕ್ರಮ ನಡೆದಿರುವುದಾಗಿ ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

  • TV9 Web Team
  • Published On - 23:04 PM, 18 Feb 2021
ಮೆಡಿಕಲ್-ಇಂಜಿನಿಯರಿಂಗ್ ಸೀಟ್ ಗೋಲ್‌ಮಾಲ್: IT ದಾಳಿಯಲ್ಲಿ 402 ಕೋಟಿ ರೂ. ತೆರಿಗೆ ವಂಚನೆ ಪತ್ತೆ
ಸಂಗ್ರಹ ಚಿತ್ರ

ಬೆಂಗಳೂರು: ಮೆಡಿಕಲ್-ಇಂಜಿನಿಯರಿಂಗ್ ಸೀಟ್ ಗೋಲ್‌ಮಾಲ್ ಸಂಬಂಧಿಸಿದಂತೆ ನಡೆದ IT ದಾಳಿ ಬಗ್ಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. ರಾಜ್ಯಾದ್ಯಂತ 9 ಶಿಕ್ಷಣ ಸಂಸ್ಥೆಗಳ ಮೇಲೆ IT ದಾಳಿ ನಡೆದಿದ್ದು 56 ಬೇರೆ ಬೇರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಮೆಡಿಕಲ್ ಸೀಟ್, ಇಂಜಿನಿಯರಿಂಗ್ ಸೀಟ್ ಸ್ಕ್ಯಾಮ್ ಸಹ ಬಯಲಾಗಿದ್ದು ಬ್ರೋಕರ್ಸ್‌ ಜೊತೆ ಸೇರಿ ಶಿಕ್ಷಣ ಸಂಸ್ಥೆಗಳಿಂದ ಅಕ್ರಮ ನಡೆದಿರುವುದಾಗಿ ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ಇತ್ತ, IT ರೇಡಲ್ಲಿ 30 ಕೋಟಿ ಮೌಲ್ಯದ 81 ಕೆ.ಜಿ ಚಿನ್ನ ಸೀಜ್​ ಆಗಿದೆ. ಹಾಗಾಗಿ, ಬಹುಕೋಟಿ ತೆರಿಗೆ ವಂಚನೆ ಪತ್ತೆ ಹಚ್ಚಿದ IT ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ. ಸದ್ಯ, 15 ಕೋಟಿ 90 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಚಿನ್ನಾಭರಣ, ವಜ್ರ ಸೇರಿ 41 ಕೆ.ಜಿ ಬೆಳ್ಳಿ ಆಭರಣವನ್ನು ಜಪ್ತಿ ಮಾಡಲಾಗಿದೆ.

ಇದಲ್ಲದೆ, ಬೇನಾಮಿ ಹೆಸರಲ್ಲಿರುವ 35 ಐಷಾರಾಮಿ ಕಾರುಗಳು ಪತ್ತೆಯಾಗಿದ್ದು 2.39 ಕೋಟಿ ಮಾರ್ಕೆಟ್ ಮೌಲ್ಯದ ವಿದೇಶ ಆಸ್ತಿ ಸಹ ಪತ್ತೆಯಾಗಿದೆ. ಈ ನಡುವೆ, 402 ಕೋಟಿ 78 ಲಕ್ಷ ರೂಪಾಯಿ ತೆರಿಗೆ ವಂಚನೆ ಸಹ ನಡೆದಿರುವುದು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದೆ. MBBS, ದಂತ ವೈದ್ಯ, ಪಿ.ಜಿ ಸೀಟ್ ಬ್ಲಾಕಿಂಗ್ ಹಗರಣ ಸಹ ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ಪತ್ತೆಯಾಗಿದ್ದು ಬ್ರೋಕರ್ ಮೂಲಕ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಆಕಾಶ್ ಮೆಡಿಕಲ್ ಕಾಲೇಜು ಮೇಲೆ ಐಟಿ ದಾಳಿ: ಶಿಫ್ಟ್​ಗಳಲ್ಲಿ ಅಧಿಕಾರಗಳಿಂದ ತಪಾಸಣೆ

ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಅವ್ಯವಹಾರ: ಬೆಳಗ್ಗೆಯಿಂದ ರಾಜ್ಯದಲ್ಲಿ ಐಟಿ ದಾಳಿ, ತಾಜಾ ಏನು?

ಇದನ್ನೂ ಓದಿ: IT Raid: ಖಾಸಗಿ ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್​ ಟ್ರೀಟ್​ಮೆಂಟ್, ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ​