ಕೇರಳದಲ್ಲಿ ಹೆಚ್ಚಾದ ಕೊರೊನಾ: ಆದೇಶವಿದ್ದರೂ ಚೆಕ್‌ಪೋಸ್ಟ್‌ಗಳಲಿಲ್ಲ ಭದ್ರತೆ, ತಪಾಸಣೆ ಇಲ್ಲದೆ ಎಂದಿನಂತೆ ಸಂಚಾರ

ಕೇರಳದಲ್ಲಿ ಹೆಚ್ಚಾದ ಕೊರೊನಾ: ಆದೇಶವಿದ್ದರೂ ಚೆಕ್‌ಪೋಸ್ಟ್‌ಗಳಲಿಲ್ಲ ಭದ್ರತೆ, ತಪಾಸಣೆ ಇಲ್ಲದೆ ಎಂದಿನಂತೆ ಸಂಚಾರ
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್​ಪೋಸ್ಟ್​

ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಪ್ರವೇಶಿಸುವ ವಾಹನ ಸವಾರರಿಗೆ ತಪಾಸಣೆ ಕಡ್ಡಾಯ ಮಾಡಿ ಆದೇಶ ನೀಡಲಾಗಿದೆ. ಆದ್ರೆ ಇಂದು ಗಡಿಗಳಲ್ಲಿ ಈ ಯಾವುದೇ ಆದೇಶವನ್ನು ಪಾಲಿಸುತ್ತಿಲ್ಲ. ಎಂದಿನಂತೆ ಕೇರಳದಿಂದ ಬಂದ ವಾಹನಗಳು ಮಂಗಳೂರು, ಮೈಸೂರನ್ನು ಪ್ರವೇಶಿಸುತ್ತಿವೆ.

Ayesha Banu

|

Feb 21, 2021 | 9:24 AM

ಮಂಗಳೂರು: ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಿಂದ ಮಂಗಳೂರಿಗೆ ಕೇವಲ 4 ಗಡಿಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು ತಲಪಾಡಿ, ಸಾರಡ್ಕ, ಮೇಣಾಲ, ಜಾಲ್ಸೂರು ಓಪನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಹಾಗೂ ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯರಿಂದ ತಪಾಸಣೆ ಮಾಡಲಾಗುತ್ತ. ಉಳಿದಂತೆ ಎಲ್ಲ ಕಡೆ ಜಿಲ್ಲಾಡಳಿತ ಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ನಿತ್ಯ ಪ್ರಯಾಣಿಸುವ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ 72 ಗಂಟೆ ಒಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಬಸ್​ಗಳಲ್ಲಿ ಪ್ರಯಾಣಿಸುವವರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದಿದ್ದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ನಿತ್ಯ ಪ್ರಯಾಣಿಸುವ ಪ್ರಯಾಣಿಕರು 15 ದಿನಕ್ಕೊಮ್ಮೆ ನೆಗೆಟಿವ್ ವರದಿ ಚೆಕ್ ಪೋಸ್ಟ್​ಗಳಲ್ಲಿ ಸಲ್ಲಿಸಬೇಕು. ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಆದ್ರೆ ಕೇರಳದಿಂದ ಬರುವ ಆಂಬ್ಯುಲೆನ್ಸ್​ಗಳಿಗೆ ಯಾವುದೇ ನಿರ್ಬಂಧ ಇರಲ್ಲ. ನಾಳೆಯಿಂದ(ಫೆ.22) ಈ ಎಲ್ಲ ಆದೇಶ ಕಾರ್ಯಗತ ಸಾಧ್ಯತೆ. ಫೆ.20ರಂದು ಈ ಆದೇಶ ಹೊರಡಿಸಲಾಗಿತ್ತು. ಆದ್ರೆ ಇದು ಇಂದೂ ಕೂಡ ಯಥಾಸ್ಥಿತಿಯಲ್ಲಿದೆ. ಇಂದು ಎಂದಿನಂತೆ ಅಂತರಾಜ್ಯ ವಾಹನಗಳು ಓಡಾಡುತ್ತಿವೆ. ನಾಳೆಯಿಂದ ಈ ಆದೇಶ ಪ್ರಕ್ರಿಯೆ ಜಾರಿಯಾಗುವ ಸಾಧ್ಯತೆ ಇದೆ.

ಬಾವಲಿ ಚೆಕ್​ಪೋಸ್ಟ್​ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇನ್ನು ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಆದರೂ ರಾಜ್ಯದ ಗಡಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್​ಪೋಸ್ಟ್​ನಲ್ಲಿ ಎಂದಿನಂತೆ ವಾಹನ ಸಂಚಾರ ನಡೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದ 8 ರವರೆಗೆ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಹನ ಸವಾರರ ಗಲಾಟೆ ಮಾಡಿದ್ದಾರೆ. ವಿಧಿಯಿಲ್ಲದೆ ಅಧಿಕಾರಿಗಳು ವಾಹನಗಳನ್ನು ಬಿಟ್ಟಿದ್ದಾರೆ. ಆದರೆ ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಂದಿಲ್ಲ. ಹೀಗಾಗಿ ಕೇರಳ-ಕರ್ನಾಟಕ ಗಡಿ ಭಾಗದ ಬಾವಲಿ ಚೆಕ್​ಪೋಸ್ಟ್ ಬಳಿ ಯಾವುದೇ ತಪಾಸಣೆ ಇಲ್ಲದೆ ವಾಹನಗಳನ್ನು ಬಿಡಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಅಸಹಾಯಕರಾಗಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ: ಕೇರಳ-ಮೈಸೂರು ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada