Petrol/Diesel Price: ಸತತ 13ನೇ ದಿನವೂ ಪೆಟ್ರೋಲ್ ದರ 39 ಪೈಸೆ ಹೆಚ್ಚಳ.. ಜನಸಾಮಾನ್ಯರ ಕೆಂಗಣ್ಣು

Petrol Diesel Rate: ಪ್ರತಿದಿನವೂ ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ಜನರು ಬೇಸತ್ತಿದ್ದಾರೆ. ಸತತ 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದ್ದು, ಪ್ರತಿ ಲೀ. ಪೆಟ್ರೋಲ್ ಬೆಲೆ 39 ಪೈಸೆ ಹಾಗೂ ಲೀ. ಡೀಸೆಲ್ ಬೆಲೆ 37 ಪೈಸೆ ಏರಿಕೆಯಾಗಿದೆ.

  • TV9 Web Team
  • Published On - 9:42 AM, 21 Feb 2021
Petrol/Diesel Price: ಸತತ 13ನೇ ದಿನವೂ ಪೆಟ್ರೋಲ್ ದರ 39 ಪೈಸೆ ಹೆಚ್ಚಳ.. ಜನಸಾಮಾನ್ಯರ ಕೆಂಗಣ್ಣು
ಸಾಂದರ್ಭಿಕ ಚಿತ್ರ

ಬೆಂಗಳೂರು: ದರ ದರನೆ ಇಂಧನ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಈ ಕುರಿತಂತೆ ಜನರಿಗೆ ಯಾವುದೇ ಸಿಹಿ ಸುದ್ದಿ ಕಾಣಸಿಗುವಂತಿಲ್ಲ. ಕಳೆದ ಹನ್ನೆರಡು ದಿನಗಳಿಂದ ಪೈಸೆಯಷ್ಟು ಇಂಧನದ ಬೆಲೆ ಏರುತ್ತಲೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಪರ್ಯಾಯ ಮಾರ್ಗವೇನಿದೆ ಎಂಬುದುದೇ ಜನರ ನಡುವಿರುವ ಪ್ರಶ್ನೆ. ಸತತ 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಇದೀಗ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 39 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 37 ಪೈಸೆಯಷ್ಟು ಏರಿಕೆಯಾಗಿದೆ.

ಭಾರತದಲ್ಲಿ ಇಂಧನದ ಬೆಲೆ ಬೇಡಿಕೆ ಹೆಚ್ಚಾದಂತೆಯೇ ಕಚ್ಚಾ ತೈಲದ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೇ ದಾರಿಯಲ್ಲಿ ಸಾಗುತ್ತಿದ್ದರೆ ಪೆಟ್ರೋಲ್​ ದರ ಶತಕ ಬಾರಿಸುವುದು ಗ್ಯಾರೆಂಟಿ. ನಿನ್ನೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ 93.61 ರೂ. ಇತ್ತು. ಶತಕ ಬಾರಿಸಲು ಇನ್ನೇನು 6 ರೂ.ಗಳ ಅಂತರದಲ್ಲಿ ಶತಕ ಬಾರಿಸಲು ಮುಂದಾದಂತೆ ಕಾಣುತ್ತಿದೆ. ಡೀಸೆಲ್ ಬೆಲೆ 81.84ರೂ ಇದೆ.

ಜನಸಾಮಾನ್ಯರ ಕೆಂಗಣ್ಣು
ಪೆಟ್ರೋಲ್​, ಡೀಸೆಲ್ ದರ ಏರಿಕೆಯತ್ತ ಸಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿರುವುದಂತೂ ನಿಜ. ವಾಹನ ಸವಾರರು ದುಬಾರಿ ಬೆಲೆ ನೋಡಿ ಸಾರ್ವಜನಿಕ ಬಸ್​ಗಳಲ್ಲಿ ಪ್ರಯಾಣ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಕಾರಣ ಪೆಟ್ರೋಲ್​ ದರ ಏರಿಕೆ ಎಂಬುದೊಂದೇ ಅವರ ಪ್ರತಿಕ್ರಿಯೆ. ಅದೆಷ್ಟೋ ಧರಣಿಗಳು, ಪ್ರತಿಭಟನೆಗಳು ನಡೆದಿವೆ. ಆದರೆ ಸರ್ಕಾರ ಯಾವುದೇ ರೀತಿಯಲ್ಲಿ ಪೆಟ್ರೋಲ್​ ದರ ಇಳಿಕೆಗೆ ವಾಲುವಂತೆ ಕಾಣುತ್ತಿಲ್ಲ ಎನ್ನುತ್ತಿದ್ದಾರೆ.

ಲಾಕ್​ಡೌನ್​ ಸಮಯಯಲ್ಲಿ ಪೆಟ್ರೋಲ್,ಡೀಸೆಲ್​ ದರ
ಕೊರೊನಾ ಎಂಬ ಮಹಾಮಾರಿ ವಿಶ್ವದಾದ್ಯಂತ ಹರಡಿತ್ತು. ಸಾಂಕ್ರಾಮಿಕ ರೋಗವಾದ್ದರಿಂದ ಪರ್ಯಾಯ ಮಾರ್ಗವಾಗಿ ಲಾಕ್​ಡೌನ್​ ಘೋಷಿಸಲಾಯಿತು. ಈ ಮಧ್ಯೆ ಜನರ ಓಡಾಟಗಳು ಕಡಿಮೆ ಇದ್ದವು. ಆಗ ತೈಲ ಬೆಲೆ ಏರಿಕೆ ಪ್ರಮಾಣ ಬಳಕೆದಾದರ ಮೇಲೆ ಆಗಿರಲಿಲ್ಲ. ಕಚ್ಚಾ ತೈಲದ ಬೆಲೆಯೂ ಕುಸಿತದ ಹಾದಿಯಲ್ಲಿದ್ದರಿಂದ ಇಂಧನದ ಬೆಲೆಯೂ ಕುಸಿತ ಕಂಡಿತ್ತು. ಇದೀಗ ಕೊರೊನಾಗೆ ಲಸಿಕೆಗಳು ದೊರೆತಿದ್ದು, ದೇಶದ ಆರ್ಥಿಕ ಚಟುವಟಿಕೆಗಳು ಮೊದಲಿನಂತೆ ಆರಂಭಗೊಳ್ಳಲು ಪ್ರಾರಂಭಿಸಿದೆ. ಇದೀಗ ಇಂಧನದ ಬೆಲೆಯು ಗರಿಗೆದರುತ್ತಾ ಸಾಗುತ್ತಿದೆ.

ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೆಟ್ರೋಲ್, ಡೀಸೆಲ್ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿ, ಇದೊಂದು ದುಃಖಕರ ಸಂಗತಿ, ಇಂಧನದ ಬೆಲೆ ತೀವ್ರ ಏರಿಕೆಯು ಬೇಸರದ ಸಂಗತಿಯಾಗಿದೆ ಎಂದಿದ್ದಾರೆ. ಪೆಟ್ರೋಲ್​ ಡೀಸೆಲ್ ಬೆಲೆಯನ್ನು ತೈಲ ಕಂಪನಿಗಳು ನಿರ್ಧರಿಸುತ್ತವೆ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತ ಕ್ಷೇಪ ಮಾಡುವುದಿಲ್ಲ. ಬೆಲೆ ಏರಿಕೆಯಿಂದ ಇಂದು ಒಂದು ರೀತಿಯ ಧರ್ಮ ಸಂಕಟ ಎದುರಾಗಿದೆ. ಈ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಚೆ ನಡೆಸಬೇಕಿದೆ ಎಂದು ಮಾತನಾಡಿದ್ದಾರೆ.

ಇಂದು ಸುಂಕ ₹31.80

ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ರೂ. 31.80 ಮತ್ತು ಡೀಸೆಲ್ ಮೇಲೆ 31.80 ರೂ ಅಬಕಾರಿ ಸುಂಕ ಹಾಕಿದೆ. ಯುಪಿಎ ಕಾಲದಲ್ಲಿ ಪೆಟ್ರೋಲ್ ಮೇಲೆ 9.20 ರೂ ಮತ್ತು ಡೀಸೆಲ್ ರೂ 3.46 ರಷ್ಟು ಇತ್ತು.

ಇದನ್ನೂ ಓದಿ: Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್​

ಇದನ್ನೂ ಓದಿ: Petrol/Diesel Price: ಪೆಟ್ರೋಲ್ ದರ ಸಾರ್ವತ್ರಿಕ ದಾಖಲೆ -31 ಪೈಸೆ ಹೆಚ್ಚಳ, ಇಳಿಕೆಯ ಮಾತೇ ಇಲ್ಲ!