Petrol/Diesel Price: ಪೆಟ್ರೋಲ್ ದರ ಸಾರ್ವತ್ರಿಕ ದಾಖಲೆ -31 ಪೈಸೆ ಹೆಚ್ಚಳ, ಇಳಿಕೆಯ ಮಾತೇ ಇಲ್ಲ!

Petrol Diesel Rate: ಇದೀಗ ಶುಕ್ರವಾರವೂ ಕೂಡಾ ಇಂಧನದ ಬೆಲೆ ಏರಿಕೆಯತ್ತ ಸಾಗಿದ್ದು. ದೆಹಲಿಯಲ್ಲಿ ಇಂದು ಪೆಟ್ರೋಲ್​ 31 ಪೈಸೆ ಹಾಗೂ ಡೀಸೆಲ್ 33 ಪೈಸೆ ಹೆಚ್ಚಳವಾಗಿದೆ.

Petrol/Diesel Price: ಪೆಟ್ರೋಲ್ ದರ ಸಾರ್ವತ್ರಿಕ ದಾಖಲೆ -31 ಪೈಸೆ ಹೆಚ್ಚಳ, ಇಳಿಕೆಯ ಮಾತೇ ಇಲ್ಲ!
ಏರುತ್ತಲೇ ಇದೆ ಇಂಧನದ ದರ (ಪಿಟಿಐ ಚಿತ್ರ)
Follow us
shruti hegde
| Updated By: Digi Tech Desk

Updated on:Feb 19, 2021 | 11:14 AM

ದೆಹಲಿ: ದೆಹಲಿಯಲ್ಲಿ ಮತ್ತೆ ಪೆಟ್ರೋಲ್​ ದರ ಏರಿಕೆಯತ್ತ ಜಿಗಿದಿದ್ದು 31 ಪೈಸೆ ಏರಿಕೆ ಕಂಡಿದೆ. ಇದೀಗ ಪ್ರತಿ ಲೀಟರ್ ಪೆಟ್ರೋಲ್ ದರ ₹90.19 ಆಗಿದೆ. ಹಾಗೆಯೇ ಡೀಸೆಲ್ ದರ ಕೂಡಾ ಏರಿಕೆಯತ್ತ ಮುಖ ಮಾಡಿದ್ದು, 33 ಪೈಸೆ ಏರಿಕೆಯಾಗಿದೆ. ಡೀಸೆಲ್​ ದರ ₹80.60 ಆಗಿದೆ. ಸತತವಾಗಿ ಒಂದು ವಾರದದಿಂದ ಏರಿಕೆಯತ್ತ ಮುಖ ಮಾಡುತ್ತಲೇ ಇರುವ ಪೆಟ್ರೋಲ್​, ಡೀಸೆಲ್ ದರವನ್ನು ನೋಡುತ್ತಾ ಜನರು ಬೇಸತ್ತಿದ್ದಾರೆ. ಅದೆಷ್ಟೋ ಪ್ರತಿಭಟನೆಗಳು, ಧರಣಿಗಳು ನಡೆಯುತ್ತಿದ್ದರೂ ಕೂಡಾ ತೈಲದ ಬೆಲೆ ಇಳಿಕೆಯತ್ತ ಮುಖ ಮಾಡುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪೆಟ್ರೋಲ್​ ದರ ನೂರರ ಗಡಿಯತ್ತ ದಾಟಿ ಗುಮ್ಮನಂತೆ ಕುಳಿತಿದೆ. ಬೆಂಗಳೂರಿನಲ್ಲೂ ಶೀಘ್ರವೇ ಶತಕ ಬಾರಿಸಲಿದೆ ಎಂದು ಅಂದಾಜಿಸಲಾಗಿದೆ.

ಮುಂಬೈಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕ್ರಮವಾಗಿ 35 ಪೈಸೆ ಮತ್ತು 30 ಪೈಸೆ ಹೆಚ್ಚಾಗಿದೆ. ಹೆಚ್ಚಳದ ನಂತರ ಡೀಸೆಲ್ ಬೆಲೆ ಲೀಟರ್‌ಗೆ 87.67 ರೂ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 96.62 ರೂ ಆಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್​ ದರ ಶತಕದ ಹಾದಿಯನ್ನು ತಲುಪಿ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 92.37 ರೂ, ಡೀಸೆಲ್ ಲೀಟರ್‌ಗೆ 85.74 ರೂ. ಬೆಲೆಗಳ ಪಟ್ಟುಹಿಡಿದ ಏರಿಕೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿದ್ದು, ಸಾಮಾನ್ಯ ಜನರ ಮೇಲಿನ ಹೊರೆ ಯನ್ನು ತಪ್ಪಿಸಲು ತೆರಿಗೆಯನ್ನು ತಕ್ಷಣ ಕಡಿತಗೊಳಿಸಬೇಕೆಂದು ಒತ್ತಾಯಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂದೂ ಕೂಡಾ ದರ ಏರಿಕೆಯತ್ತ ಸಾಗಿದ್ದು, ಪೆಟ್ರೋಲ್​ ದರ ₹93.21 ಹಾಗೂ ಡೀಸೆಲ್ ₹85.44 ಆಗಿದೆ.

ದಿನೇ ಏರುತ್ತಿರುವ ಪೆಟ್ರೋಲ್​ ಮತ್ತು ಡೀಸೆಲ್ ದರ ಏರಿಕೆಯ ಬಗ್ಗೆ ಹಾಗೂ 100ರ ಗಡಿ ದಾಟಿರುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದರು. ಹಿಂದಿನ ಸರಕಾರಗಳು ಇಂಧನ ಆಮದು ಅವಲಂಬನೆಯ ಬಗ್ಗೆ ಕಡಿಮೆ ಮಾಡುವ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ ಇದು ಮಧ್ಯಮ ವರ್ಗದವರಿಗೆ ಹೊರೆಯಾದಂತಾಗಿದೆ. ಇದಕ್ಕೆ ಹಿಂದಿನ ಸರಕಾರಗಳೇ ಹೊಣೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: Petrol Price: ರಾಜಸ್ಥಾನದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ.. ಸಿಲಿಕಾನ್ ಸಿಟಿಯೂ ಶತಕದ ಹಾದಿಯತ್ತ!

ಇದನ್ನೂ ಓದಿ: ಭಾರತದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ಬೆಲೆ; ಇದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದ ಪ್ರಧಾನಿ ಮೋದಿ

Published On - 9:57 am, Fri, 19 February 21