Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ಬೆಲೆ; ಇದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದ ಪ್ರಧಾನಿ ಮೋದಿ

Petrol Diesel Rate | ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ರಾಜಸ್ಥಾನದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿ ನಾಟ್​ಔಟ್​ನಲ್ಲಿ ಮುನ್ನುಗ್ಗುತ್ತಿದೆ. ಆದ್ರೆ ತೈಲಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರದ ನೀತಿಗಳ ಕಡೆಗೆ ಪ್ರಧಾನಿ ಮೋದಿ ಬೊಟ್ಟು ಮಾಡಿದ್ದಾರೆ.

ಭಾರತದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ಬೆಲೆ; ಇದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಆಯೇಷಾ ಬಾನು
|

Updated on:Feb 18, 2021 | 9:50 AM

ದೆಹಲಿ: ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹಿಡಿತಕ್ಕೆ ಸಿಗದೆ ಮುನ್ನುಗ್ಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ನೋಡಿ ಜನರ ಕಣ್ಣು ತಿರುಗ್ತಿದೆ. ಅನೇಕ ಕಡೆ ಇಂಧನ ದರ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.  ಈ ಹೊತ್ತಲ್ಲೇ ರಾಜಸ್ಥಾನದಲ್ಲಿ ತೈಲಬೆಲೆ ಶತಕ ಬಾರಿಸಿದ್ದು, ಪ್ರಜೆಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ.

ಭಾರತದಲ್ಲಿ ಶತಕ ಬಾರಿಸಿತು ‘ಪೆಟ್ರೋಲ್’ ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ದರ ಸತತವಾಗಿ ಏರಿಕೆ ಆಗುತ್ತಲೇ ಇದೆ.‌ ಕಳೆದ 9 ದಿನಗಳಿಂದ್ಲೂ ನಿರಂತರವಾಗಿ ಪೆಟ್ರೋಲ್‌ ಡೀಸೆಲ್ ದರದಲ್ಲಿ ಏರಿಕೆ‌ ಕಂಡಿದೆ. ದುಬಾರಿ ದುನಿಯಾಗೆ ಜನ ಬೇಸತ್ತು ಹೋಗಿದ್ದಲ್ಲದೆ, ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕ್ತ್ತಿದ್ದಾರೆ. ತೈಲ ಮಾರಾಟ ಕಂಪನಿಗಳು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುತ್ತಿವೆ. ಇದರಿಂದಾಗಿ ದೇಶದಲ್ಲಿ ಇದೇ ಮೊದಲ ಬಾರಿ ಕೆಲವೆಡೆ ಪೆಟ್ರೋಲ್‌ ಬೆಲೆ 100ರ ಗಡಿ ದಾಟಿದೆ. ಬ್ರ್ಯಾಂಡೆಡ್ ಪೆಟ್ರೋಲ್ ಬೆಲೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಕೆಲವೆಡೆ ಈಗಾಗ್ಲೇ 100ರ ಗಡಿ ದಾಟಿದೆ. ಇತಿಹಾಸದಲ್ಲೇ‌ ಮೊದಲ ಬಾರಿ ಮಾಮೂಲಿ ಪೆಟ್ರೋಲ್‌ ದರವೂ 100 ಗಡಿ ದಾಟಿ ದಾಖಲೆ ಬರೆದಿದೆ.

ತೈಲ ಬೆಲೆಗೆ ಬ್ರೇಕ್ ಇಲ್ವಾ? ಸ್ಥಳ                ಪೆಟ್ರೋಲ್ ರೇಟ್ ರಾಜಸ್ಥಾನ‌       ₹100.13 ದೆಹಲಿ              ₹89.54 ಮುಂಬೈ          ₹96 ಬೆಂಗಳೂರು    ₹92.54

ಇಷ್ಟೇ ಅಲ್ಲ ಡೀಸೆಲ್ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಕಳೆದ‌ 9 ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ 2.59 ರೂನಷ್ಟು ಹಾಗೂ ಡೀಸೆಲ್ ಬೆಲೆ 2.82ರೂಗಳಷ್ಟು ಹೆಚ್ಚಳ ಕಂಡಿದೆ. ಇದು ಈಗಾಗಲೇ ಕೊರೊನಾ ಕಷ್ಟ ಎದುರಿಸುತ್ತಿರುವ ಜನಸಾಮಾನ್ಯರಿಗೆ ಶಾಕ್ ಮೇಲೆ ಶಾಕ್ ನೀಡಿದೆ.

ತೈಲ ದರ ಏರಿಕೆಗೆ ಪ್ರಧಾನಿ ಸಮರ್ಥನೆ ಹೌದು, ನಿರಂತರವಾಗಿ ಪೆಟ್ರೋಲ್, ಡೀಸೆಲ್ ಏರಿಕೆಯಾದ್ರೂ ಪ್ರಧಾನಿ ಮೋದಿ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ನಿನ್ನೆ ಮೊದಲ ಬಾರಿಗೆ ಪೆಟ್ರೋಲ್ ದರ ಏರಿಕೆ ಬಗ್ಗೆ ಮಾತನಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಹಿಂದಿನ ಸರ್ಕಾರಗಳೆ ಹೊಣೆ ಎಂದಿದ್ದಾರೆ. ಅಲ್ದೆ ಹಿಂದಿನ ಸರ್ಕಾರಗಳು ಇಂಧನ ಆಮದಿನ ಅವಲಂಬನೆ ಕಡಿಮೆ ಮಾಡುವತ್ತ ಗಮನ ಹರಿಸಿದ್ದರೆ, ಈಗ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ ಎಂದಿದ್ದಾರೆ.

ಇನ್ನೂ ದೇಶದಾದ್ಯಂತ ಏಕರೂಪದ ದರ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ನೈಸರ್ಗಿಕ ಅನಿಲವನ್ನ ಜಿಎಸ್‌ಟಿ ವ್ಯಾಪ್ತಿಗೆ ತರಲು ಭಾರತ ಬದ್ಧವಾಗಿದೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ. ಒಟ್ನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಇದು ಕೇಂದ್ರದ ವಿರುದ್ಧ ಜನರ ಮುನಿಸಿಗೂ ಕಾರಣವಾಗಿದೆ.

ಇದನ್ನೂ ಓದಿ:ಸತತ 9ನೇ ದಿನ ಪೆಟ್ರೋಲ್ ದರ ಏರಿಕೆ.. 25 ಪೈಸೆ ಹೆಚ್ಚಳ!

Published On - 7:18 am, Thu, 18 February 21

ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು