Rail Roko: ರೈಲು ಪ್ರಯಾಣಿಕರೇ.. ಎಚ್ಚರ! ಇಂದಿನ ಪ್ರಯಾಣವನ್ನು ಒಂದು ದಿನ ಮುಂದೂಡಿ

Rail Roko: ಸಾರ್ವಜನಿಕರೇ, ನೀವಿಂದು ರೈಲು ಪ್ರಯಾಣ ಹಮ್ಮಿಕೊಮಡಿದ್ದೀರೇ? ಹಾಗಾದರೆ ಇಂದಿನ ಪ್ರಯಾಣನ್ನು ಒಂದು ದಿನ ಮುಂದೂಡಲು ಸಾಧ್ಯವೇ ಎಂದು ಯೋಚಿಸಿ. ರೈತರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಭಾಗವಾಗಿ ಇಂದು ದೇಶಾದ್ಯಂತ ರೈಲು ತಡೆಗೆ ಕರೆ ಕೊಟ್ಟಿದ್ದಾರೆ.

Rail Roko: ರೈಲು ಪ್ರಯಾಣಿಕರೇ.. ಎಚ್ಚರ! ಇಂದಿನ ಪ್ರಯಾಣವನ್ನು ಒಂದು ದಿನ ಮುಂದೂಡಿ
ಕೋಲಾರ ರೈಲು ನಿಲ್ದಾಣದಲ್ಲಿ ರೈತ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Feb 18, 2021 | 11:49 AM

ಬೆಂಗಳೂರು: ಇಂದು ಎಲ್ಲಾದರೂ ರೈಲು ಪ್ರಯಾಣ ಮಾಡಲು ಆಲೋಚಿಸಿದ್ದೀರೇ..? ಹಾಗಾದರೆ ಒಂದು ಕ್ಷಣ ನಿಲ್ಲಿ, ನೀವು ನಿಮ್ಮ ಪ್ರಯಾಣವನ್ನು ಒಂದು ದಿನ ಮುಂದೂಡುವುದು ಉತ್ತಮ. ದೆಹಲಿಯಲ್ಲಿ ನಡೆಯುತ್ತಿರುವ ಪಂಜಾಬ್ ರೈತರ ಕೃಷಿ ತಿದ್ದುಪಡಿ ಕಾಯ್ದೆ (New Farm Laws) ವಿರೋಧಿ ಹೋರಾಟದಿಂದ ಇಂದು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ರೈಲು ಸಂಚಾರ ಸ್ಥಗಿತಗೊಳ್ಳುವ ಸಂಭವವಿದೆ (Rail Roko). ಈಗಾಗಲೇ ರಾಜ್ಯದ ದಾವಣೆಗೆರೆ ರೈಲು ನಿಲ್ದಾಣ ಸೇರಿದಂತೆ ಹಲವು ರೈಲು ನಿಲ್ದಾಣಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ರೈತರ ಹೋರಾಟದ (Farmers Protest) ಮುಂದುವರೆದ ಭಾಗವಾಗಿ ರೈತ ಸಂಘಟನೆಗಳು ಕೃಷಿ ಕಾಯ್ದೆ ವಿರೋಧಿಸಿ ರೈಲು ರೋಕೋಗೆ ಕರೆ ನೀಡಿದ್ದು, ದೇಶದ ಪಂಜಾಬ್, ಹರಿಯಾಣ, ದೆಹಲಿ, ಕೇರಳ, ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳುವ ಸಂಭವ ಅಧಿಕವಾಗಿದೆ. ಆದರೆ ಕರ್ನಾಟಕದಲ್ಲಿ ಎಂದಿನಂತೆ ರೈಲು ಸಂಚಾರ ನಡೆಯಲಿದೆ ಎಂದು ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಕರೆ ಕೊಟ್ಟವರು ಯಾರು? ಈಗಾಗಲೇ 80 ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ದೆಹಲಿ ಚಲೋ ವಿವಿಧ ತಿರುವುಗಳನ್ನು ಪಡೆದಿದೆ. ದೆಹಲಿ ಚಲೋವನ್ನು ಇಲ್ಲಿಯವರೆಗೂ ಮುಂದುವರೆಸಿಕೊಂಡು ಬರುತ್ತಿರುವ 40 ರೈತ ಸಂಭಟನೆಗಳ ಸಂಯುಕ್ತ ಮಂಡಳಿ ‘ಸಂಯುಕ್ತ ಕಿಸಾನ್ ಮೋರ್ಚಾ’ ಈ ರೈಲು ತಡೆಗೆ ಕರೆ ಕೊಟ್ಟಿದೆ. ಯಾವುದೇ ಕ್ಷಣ ರೈಲು ತಡೆ ಚಳುವಳಿ ತೀವ್ರವಾಗುವ ಹಿನ್ನೆಲೆಯಲ್ಲಿ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಳಗಳ ರಾಜ್ಯಗಳಲ್ಲಿ ಭದ್ರತೆಯಲ್ಲಿ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ? ಕರ್ನಾಟಕದ ವಿವಿಧ ನಗರಗಳಲ್ಲೂ ವಿವಿಧ ಸಂಘಟನೆಗಳು ರೈಲುಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸುವುದಾಗ ಘೋಷಿಸಿವೆ. ರಾಯಚೂರಿನಲ್ಲಿ ರೈತರು ರೈಲು ತಡೆ ಚಳವಳಿ ನಡೆಸಲಿದ್ದಾರೆ. ರೈತ ಸಂಘಟನೆಗಳು ಯಾದಗಿರಿಯ ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇನ್ನು ವಿಜಯಪುರದಲ್ಲಿ ಬೆಳಗ್ಗೆ 8 ಗಂಟೆಗೆ ರೈತರು ಬಸವ ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಧಾರವಾಡದಲ್ಲಿಂದು ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆವರೆಗೆ ರೈಲು ತಡೆ ಚಳವಳಿ ನಡೆಯಲಿದ್ದು, ದಲಿತ, ಕಾರ್ಮಿಕ ಸಂಘಟನೆಗಳು ರೈತರಿಗೆ ಸಾಥ್ ನೀಡಲಿವೆ. ಕೊಪ್ಪಳದಲ್ಲಿ 12 ಗಂಟೆ ನಂತರ ರೈಲು ಸಂಚಾರ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ. ಗದಗ ರೈಲ್ವೆ ನಿಲ್ದಾಣದಲ್ಲಿ ರೈತ ಸಂಘಟನೆಗಳು ರೈಲು ರೋಕೋ ಚಳವಳಿ ನಡೆಸಲಿವೆ.

KOLAR RAIL ROKO

ಪ್ರತಿಭಟನೆಯ ಬಿಸಿ ಕಾವೇರುವ ಎಲ್ಲ ಸಾಧ್ಯತೆಗಳಿವೆ

ಚಿಕ್ಕಬಳ್ಳಾಪುರ,ತುಮಕೂರು, ಧಾರವಾಡ..ಇನ್ನೂ ಎಲ್ಲೆಲ್ಲಿ? ಮೈಸೂರು ಮತ್ತು ಕೊಪ್ಪಳದಲ್ಲಿ 12 ಗಂಟೆ ನಂತರ ರೈಲು ಸಂಚಾರ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ. ಗದಗ ರೈಲ್ವೆ ನಿಲ್ದಾಣದಲ್ಲಿ ರೈತ ಸಂಘಟನೆಗಳು ರೈಲು ರೋಕೋ ಚಳವಳಿ ನಡೆಸಲಿವೆ. ಗದಗದಲ್ಲೂ ರೈಲು ತಡೆ ಚಳವಳಿ ನಡೆಯಲಿದೆ. ಹಾವೇರಿಯಲ್ಲಿ ರೈಲು ತಡೆಗೆ ರೈತ ಸಂಘದ ಕಾರ್ಯಕರ್ತರು ನಿರ್ಧರಿಸಿದ್ದಾರೆ. ದಾವಣಗೆರೆ, ತುಮಕೂರಿನಲ್ಲಿ ಹಸಿರು ಸೇನೆ ನೇತೃತ್ವದಲ್ಲಿಂದು ರೈಲು ತಡೆ ಚಳವಳಿ ನಡೆಯಲಿದೆ. ಕೋಲಾರದ ಬಂಗಾರಪೇಟೆ ರೈಲು ನಿಲ್ದಾಣದ ಎದುರು ಪೊರಕೆ ಚಳವಳಿ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಚಿಕ್ಕಬಳ್ಳಾಪುರದಲ್ಲಿ ಮಧ್ಯಾಹ್ನ 12ಗಂಟೆಗೆ ರೈಲು ರೋಕೋ ಚಳವಳಿ ನಡೆಯಲಿದೆ. ಹಾವೇರಿ ನಗರ ಮತ್ತು ರಾಣೆಬೆನ್ನೂರು ನಗರದ ರೈಲ್ವೆ ನಿಲ್ದಾಣದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಬಣದ ರಾಜ್ಯ ರೈತಸಂಘದ ಕಾರ್ಯಕರ್ತರಿಂದ ರೈಲು ತಡೆ ನಡೆಸಲು ನಿರ್ಧರಿಸಲಾಗಿದೆ.

ರೈಲು ತಡೆ ಪ್ರತಿಭಟನೆಯನ್ನು ಶಾಂತಿಯುವಾಗಿ ನಡೆಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸಹಕರಿಸಿ ಎಂದು ರೈಲ್ವೇ ಇಲಾಖೆಯ ಮಾಧ್ಯಮ ವಕ್ತಾರರೋರ್ವರು ತಿಳಿಸಿದ್ದಾರೆ. ‘ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಶಾಂತಿಯನ್ನು ಕದಡಬಾರದು, ಈಗಾಗಲೇ ಜಿಲ್ಲಾಡಳಿತಗಳ ಜತೆ ಚರ್ಚಿಸಿ ಜಿಲ್ಲಾಕೇಂದ್ರಗಳಲ್ಲಿ ನಿಯಂತ್ರಣಾ ಕೊಠಡಿಯನ್ನು ತೆರೆಯಲು ಸಿದ್ಧತೆ ನಡೆಸಿದ್ದೇವೆ. ಪ್ರತಿಭಟನೆಯ ಕುರಿತು ಗುಪ್ತಚರ ವಿಭಾಗದಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಿಂದ ಮಾಹಿತಿ ಕಲೆಹಾಕಿದ್ದೇವೆ ಎಂದು ರೈಲ್ವೇ ಸುರಕ್ಷತಾ ದಳದ ನಿರ್ದೇಶಕ ಅರುಣ್ ಕುಮಾರ್ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

20 ಸಾವಿರ ಆರ್‌ಪಿಎಸ್‌ಎಫ್ ಸಿಬ್ಬಂದಿ ನೇಮಕ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ 20 ಹೆಚ್ಚುವರಿ ರೈಲ್ವೆ ಸಂರಕ್ಷಣಾ ವಿಶೇಷ ಪಡೆ 20 ಸಾವಿರ ಆರ್‌ಪಿಎಸ್‌ಎಫ್ ಸಿಬ್ಬಂದಿಗಳನ್ನು ನೇಮಿಸಿದೆ. ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನಾವು ಪ್ರತಿಭಟನಾಕಾರರ ಮನವೊಲಿಸಲು ಬಯಸುತ್ತೇವೆ. ನಮಗೆ ನಾಲ್ಕು ಗಂಟೆಗಳ ಅವಕಾಶ ಇದೆ. ರೈಲ್ ರೋಕೋ ಶಾಂತಿಯುತವಾಗಿ ನಡೆಯಬೇಕೆಂದು ಬಯಸುತ್ತೇವೆ. ಇಲ್ಲದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ರೈಲ್ವೆ ಸಂರಕ್ಷಣಾ ವಿಶೇಷ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Farmers Protest ಫೆ.18 ಕರ್ನಾಟಕದಾದ್ಯಂತ ರೈಲು ಸೇವೆ ಬಂದ್?

ಏ ಹಿಂದಿ ಮೇ ನಕೊ: ದೆಹಲಿಯಲ್ಲೂ ಹಿಂದಿಯಲ್ಲಿ ಮಾತಾಡಲ್ಲ ಎಂದ ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು