ಮಂಡ್ಯ: ರೈತ ಎಂಬ ಕಾರಣಕ್ಕೆ ಎಲ್ಲೂ ಹೆಣ್ಣು ಸಿಗದಿದ್ದಕ್ಕೆ ಅಸಮಾಧಾನಗೊಂಡ ಯುವ ರೈತನೊಬ್ಬ ಸಚಿವ ಸಿ.ಪಿ.ಯೋಗೇಶ್ವರ್ ಬಳಿ ತನ್ನ ಅಳಲು ತೋಡಿಕೊಂಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ರೈತ ದೇಶದ ಬೆನ್ನೆಲುಬು ಅಂತಾರೆ ಆದ್ರೆ ಅದೇ ರೈತನಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟಕರ. ರೈತರ ಮನೆಯಲ್ಲಿ ಕೆಲಸ ಹೆಚ್ಚಿರುತ್ತೆ, ಹಾಗೂ ದುಡಿಮೆ ಸಹ ಜವರಾಯನ ಜೂಜಾಟದಂತೆ ಅಂತ ಹೆಣ್ಣು ಹೆತ್ತವರು ರೈತರಿಗೆ ತಮ್ಮ ಮಗಳನ್ನು ಕೊಡಲು ಹಿಂದೆ ಮುಂದೆ ನೋಡ್ತಾರೆ. ಇದರಂತೆಯೇ ಮದುವೆಯಾಗಲು ಹೆಣ್ಣು ಸಿಗದೆ ನೊಂದಿದ್ದ ರೈತ ಕರೆ ಮಾಡಿ ತನ್ನ ನೋವನ್ನು ಸಚಿವ ಸಿ.ಪಿ.ಯೋಗೇಶ್ವರ್ ಬಳಿ ಹಂಚಿಕೊಂಡಿದ್ದಾನೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ನಿವಾಸಿ ಪ್ರವೀಣ್ ಎಂಬ ರೈತ ಫೋನ್ ಮೂಲಕ ಕರೆ ಮಾಡಿ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಇರುವವರಿಗೆ ಮಾತ್ರ ಹೆಣ್ಣು ಕೊಡ್ತಾರೆ.
ರೈತ ಎಂಬ ಕಾರಣಕ್ಕೆ ಎಲ್ಲೂ ನನಗೆ ಹೆಣ್ಣು ಸಿಗುತ್ತಿಲ್ಲ. ಹೀಗಾಗಿ ಅಂತರ್ ಜಾತಿಗೆ ನೀಡುವ ಪ್ರೋತ್ಸಾಹ ಧನದ ರೀತಿಯಲ್ಲಿ ರೈತನನ್ನು ಮದುವೆಯಾಗುವ ಹೆಣ್ಣಿಗೆ ಸರ್ಕಾರಿ ಯೋಜನೆ ರೂಪಿಸಿ ಎಂದು ರೈತ ಪ್ರವೀಣ್, ಸಚಿವರಿಗೆ ಸಲಹೆ ನೀಡಿದ್ದಾರೆ. ಜೊತೆಗೆ ಮಕ್ಕಳಿಗೂ ಸರ್ಕಾರಿ ಸೌಲಭ್ಯ ನೀಡಿದ್ದು ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡುವಂತೆ ಸಚಿವರಿಗೆ ಮನವಿ ಮಾಡಿಕೊಂಡಿದ್ದಾನೆ. ಸದ್ಯ ಯುವಕನ ಮಾತಿಗೆ ಯೋಗೇಶ್ವರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ.
ಇದನ್ನೂ ಓದಿ: ನಮಗೆ ಹೆಣ್ಣು ಕೊಡೋಕೆ ಹಿಂದೆ ಮುಂದೆ ನೋಡ್ತಾರೆ -ಅವಿವಾಹಿತ ನಟರ ಗೋಳಿನ ಕಥೆ