ನಮಗೆ ಹೆಣ್ಣು ಕೊಡೋಕೆ ಹಿಂದೆ ಮುಂದೆ ನೋಡ್ತಾರೆ -ಅವಿವಾಹಿತ ನಟರ ಗೋಳಿನ ಕಥೆ

ನಮಗೆ ಹೆಣ್ಣು ಕೊಡೋಕೆ ಹಿಂದೆ ಮುಂದೆ ನೋಡ್ತಾರೆ -ಅವಿವಾಹಿತ ನಟರ ಗೋಳಿನ ಕಥೆ

ಬೆಂಗಳೂರು: ಸ್ಯಾಂಡಲ್​ವುಡ್​ನ ನಶೆ ಸುದ್ದಿ ಸಂಬಂಧಗಳನ್ನೇ ಅನುಮಾನಿಸುವಂತೆ ಮಾಡಿದೆ ಎಂದು ನಟರೊಬ್ಬರು ಗಾಂಧಿನಗರದ ಗಾಂಜಾ ಘಾಟಿನಲ್ಲೊಂದು ಗೋಳಿನ ಕಥೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ಗೂ ಡ್ರಗ್ಸ್ ಮಾಫಿಯಾಗೂ​ ನಂಟಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಅವಿವಾಹಿತ ನಟರಿಗೆ ಸಂಕಷ್ಟ ಎದುರಾಗಿದೆ. ಹೌದು, ಸ್ಯಾಂಡಲ್​ವುಡ್‌ನ ನಟರ ವೈಯಕ್ತಿಕ ಜೀವನಕ್ಕೆ ಹೊಡೆತ ಬಿದ್ದಿದೆ ಎಂದು ಉಡುಂಬ ಸಿನಿಮಾದ ನಟ ಪವನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಯಾಂಡಲ್​​ವುಡ್ ಸಿನಿಮಾ ನಟರಿಗೆ ಹೆಣ್ಣು ಸಿಗೋದೆ ಕಷ್ಟ. ಸಿನಿಮಾದವರು ಅಂದ್ರೆ ಮೊದಲೇ ಭಯ ಬೀಳುತ್ತಿದ್ದರು. ಈಗ ಹೆಣ್ಣು […]

KUSHAL V

|

Aug 30, 2020 | 10:37 AM

ಬೆಂಗಳೂರು: ಸ್ಯಾಂಡಲ್​ವುಡ್​ನ ನಶೆ ಸುದ್ದಿ ಸಂಬಂಧಗಳನ್ನೇ ಅನುಮಾನಿಸುವಂತೆ ಮಾಡಿದೆ ಎಂದು ನಟರೊಬ್ಬರು ಗಾಂಧಿನಗರದ ಗಾಂಜಾ ಘಾಟಿನಲ್ಲೊಂದು ಗೋಳಿನ ಕಥೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ಗೂ ಡ್ರಗ್ಸ್ ಮಾಫಿಯಾಗೂ​ ನಂಟಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ಅವಿವಾಹಿತ ನಟರಿಗೆ ಸಂಕಷ್ಟ ಎದುರಾಗಿದೆ. ಹೌದು, ಸ್ಯಾಂಡಲ್​ವುಡ್‌ನ ನಟರ ವೈಯಕ್ತಿಕ ಜೀವನಕ್ಕೆ ಹೊಡೆತ ಬಿದ್ದಿದೆ ಎಂದು ಉಡುಂಬ ಸಿನಿಮಾದ ನಟ ಪವನ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸ್ಯಾಂಡಲ್​​ವುಡ್ ಸಿನಿಮಾ ನಟರಿಗೆ ಹೆಣ್ಣು ಸಿಗೋದೆ ಕಷ್ಟ. ಸಿನಿಮಾದವರು ಅಂದ್ರೆ ಮೊದಲೇ ಭಯ ಬೀಳುತ್ತಿದ್ದರು. ಈಗ ಹೆಣ್ಣು ಕೊಡೋರು ಅನುಮಾನದಿಂದ ನೋಡ್ತಿದ್ದಾರೆ ಎಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿರುವ ನಟ ಪವನ್ ತಮ್ಮ ನೋವು ತೋಡಿಕೊಂಡಿದ್ದಾರೆ.

ನಟರನ್ನು ನಂಬೋದಾದ್ರು ಹೇಗೆ ಎಂಬ ವಾತಾವರಣ‌ ಸೃಷ್ಟಿಯಾಗಿದೆ. ನಟನೆಂಬ ಕಾರಣಕ್ಕೆ ಹುಡುಗಿ ಕುಟುಂಬದವರಿಗೆ ಆತಂಕ ಶುರುವಾಗಿದೆ. ಮುಂದಿನ ತಿಂಗಳು ನನ್ನ ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಆದರೆ ಈಗ, ಶೂಟಿಂಗ್ ಬೇಡ, ಸಿನಿಮಾನೂ ಬೇಡ ಅಂತಿದ್ದಾರೆ ಅಂತಾ ಡ್ರಗ್ಸ್ ಜಾಲದ ಕಥೆ ಕೇಳಿ ನಟರ ಕುಟುಂಬಗಳಲ್ಲಿ ಆತಂಕ ಮನೆಮಾಡಿದೆಯಂತೆ ಅಂತಾ ಪವನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಗೂಳಿಹಟ್ಟಿ, ಉಡುಂಬ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರೋ ನಟ ಪವನ್ ಸದ್ಯ ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ನಟಿಸ್ತಿದ್ದಾರೆ.

ಹೊಸ ನಟರಿಂದ ಈ ರೀತಿಯಾಗಿ ಆಗುತ್ತಿದೆ ಎಂಬ ಆರೋಪವನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರೋದಕ್ಕೆ ಪವನ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಆರೋಪದಿಂದ ನಮ್ಮನ್ನು ನಂಬುತ್ತಿಲ್ಲ. ಇಂದ್ರಜಿತ್ ಅವರ ಹೇಳಿಕೆಯಿಂದ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪವನ್ ಹೇಳಿದ್ದಾರೆ. ಹೊಸ ನಟರು ಎಂದು ಹೇಳುವ ಬದಲು ಈ ಜಾಲದಲ್ಲಿ ಭಾಗಿಯಾಗಿರುವ ನಟರ ಹೆಸರನ್ನು ಹೇಳಲಿ. ಅದನ್ನು ಬಿಟ್ಟು ಹೊಸ ನಟರು ಎಂದು ಹೇಳುವುದು ಸರಿಯಲ್ಲ.

ಇಂದ್ರಜಿತ್ ನೇರವಾಗಿ ಹೆಸರು ಹೇಳಿದರೆ ತನಿಖೆ ನಡೆಯುತ್ತೆ. ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲಿ. ಅದನ್ನು ಬಿಟ್ಟು ಹೊಸ ನಟರೆಂದು ಹೇಳುವುದು ಬೇಡ ಎಂದು ನಟ ಪವನ್ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada