SAARC Workshop on COVID-19 Management ಕೊರೊನಾ ನಿರ್ವಹಣೆ ಕಾರ್ಯಾಗಾರ: ನೆರೆಯ 10 ದೇಶಗಳ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

PM Narendra Modi to address SAARC international workshop on covid-19 management ಕೊರೊನಾ ನಿರ್ವಹಣೆ ಕಾರ್ಯಾಗಾರವನ್ನು ಉದ್ದೇಶಿಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾಷಣ ಮಾಡಲಿದ್ದಾರೆ. ಗಮನಾರ್ಹವೆಂದರೆ ಪ್ರಧಾನಿ ನರೇಂದ್ರ ಮೋದಿ ಭಾರತದ ನೆರೆಹೊರೆಯ 10 ದೇಶಗಳನ್ನು(SAARC) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

  • TV9 Web Team
  • Published On - 12:57 PM, 18 Feb 2021
SAARC Workshop on COVID-19 Management ಕೊರೊನಾ ನಿರ್ವಹಣೆ ಕಾರ್ಯಾಗಾರ: ನೆರೆಯ 10 ದೇಶಗಳ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ನರೇಂದ್ರ ಮೋದಿ

ದೆಹಲಿ: ಕೊರೊನಾ ನಿರ್ವಹಣೆ ಕಾರ್ಯಾಗಾರವನ್ನು ಉದ್ದೇಶಿಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾಷಣ ಮಾಡಲಿದ್ದಾರೆ. ಗಮನಾರ್ಹವೆಂದರೆ ಪ್ರಧಾನಿ ನರೇಂದ್ರ ಮೋದಿ ಭಾರತದ ನೆರೆಹೊರೆಯ 10 ದೇಶಗಳನ್ನು(Members of the South Asian Association for Regional Cooperation-SAARC) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೊನಾ ನಿರ್ವಹಣೆಯ ಅನುಭವ, ಉತ್ತಮ ಕ್ರಮಗಳು ಮತ್ತು ಮುಂದಿನ ಹೆಜ್ಜೆ ಸಂಬಂಧ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ದಾಖಲಾರ್ಹ ಸಂಗತಿಯೆಂದರೆ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಭಾರಿ ಯಶಸ್ಸು ಕಂಡಿದೆ. ವರ್ಷದ ಹಿಂದೆ ಕೊರೊನಾ ಮಹಾಮಾರಿ ಕಾಲಿಟ್ಟಾಗ ಭಾರತದ ಮೇಲೆ ಅದರ ಪ್ರಭಾವ ಹೆಚ್ಚಾಗಿ ಇರಲಿದೆ. ಭಾರತವು ಹೆಚ್ಚು ಸಾವು ನೋವು ಕಾಣಲಿದೆ ಎಂದು ಇಡೀ ಜಗತ್ತು ಹೇಳಿತ್ತು. ಆದರೆ ಈಗ ವರ್ಷದ ಬಳಿಕ ಕೊರೊನಾ ಕಾಟದ ಪರಿಸ್ಥಿತಿ ನೋಡಿದರೆ ಜಗತ್ತಿನ ಅತಿರಥ ಮಹಾರಥ ರಾಷ್ಟ್ರಗಳು ಹೆಚ್ಚು ಸಾವು ನೋವುಗಳನ್ನು ಕಂಡಿವೆ.

ಹಾಗೆ ನೋಡಿದರೆ ಭಾರತದಲ್ಲಿಯೇ ಸಾವುನೋವಿನ ಪ್ರಮಾಣ ನಗಣ್ಯವಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ದಿಢೀರ್​ ಕ್ರಮಗಳೇ ಕಾರಣ ಎಂದು ಜಗತ್ತು ತಲೆದೂಗಿದೆ. ಅದಾದ ನಂತರವೂ ಕೊರೊನಾ ವ್ಯಾಕ್ಸಿನ್​ ಅನ್ನು ಕ್ಷಿಪ್ರವಾಗಿ ಕಂಡುಹಿಡಿದು ದೇಶವಾಸಿಗಳಿಗೆ ಅಭಯ ನೀಡಿತು. ಅಷ್ಟೇ ಅಲ್ಲ. ಅದನ್ನು ಹತ್ತಾರು ವಿದೇಶಗಳಿಗೂ ಕಳುಹಿಸಿ, ಅಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ನೆರವಾಗಿದೆ. ಈ ಹಿನ್ನೆಲೆಯಲ್ಲಿ ಯಶಸ್ಸಿನ ಗಾಥೆಯನ್ನು ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಹತ್ತು ದೇಶಗಳ ಜೊತೆ ಹಂಚಿಕೊಳ್ಳುವ ಸಾಧ್ಯತೆಯಿದೆ. International workshop on COVID-19 management titled- ‘Experience, Good Practices & the Way Forward’ on February 18 with members of the South Asian Association for Regional Cooperation (SAARC) ಎಂಬುದು ಕಾರ್ಯಗಾರದ ವಿಷಯವಾಗಿದೆ.

ಇದನ್ನೂ ಓದಿ: ದೇಶದಲ್ಲಿ 2ನೇ ಬಲಿ ಪಡೆದ ಕಿಲ್ಲರ್ ಕೊರೊನಾ: ವೈರಸ್ ಕಂಟ್ರೋಲ್​ಗೆ ಎಲ್ಲಾ ಬಂದ್!