ಗ್ರಾ.ಪಂ. ಚುನಾವಣೆಯಲ್ಲಿ ತಾಯಿಯನ್ನು ಗೆಲ್ಲಿಸಿದ್ದ ಮಗನ ಹತ್ಯೆ ಕೇಸ್: ಐವರು ಅರೆಸ್ಟ್; ಐವರು ಇನ್ನೂ ನಾಪತ್ತೆ
ರಾಯಚೂರು: ಪಂಚಾಯತ್ಗಳು ತಳಮಟ್ಟದ ಅಧಿಕಾರ ಕೇಂದ್ರಗಳು ಎಂದವರುಂಟು. ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯದ ಕನಸು (Mahatma Gandhi Gram Swaraj) ಕಂಡವರು. ಅಂದರೆ ತಳಮಟ್ಟದಲ್ಲಿ ಗ್ರಾಮ ಪಂಚಾಯತ್ಗಳಿಂದಲೇ ಅಧಿಕಾರ ಕೇಂದ್ರವಿರಲಿ ಎಂದು ಬಯಸಿದವರು. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಗ್ರಾಮ ಪಂಚಾಯತ್ತಿ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗ್ರಾಮ ಸ್ವರಾಜ್ಯದ ಕನಸುಗಳಿಗೆ ಎಳ್ಳುನೀರು ಬಿಟ್ಟಂತಾಗಿದೆ. ಇದಕ್ಕೆ ಉದಾಹರಣೆಗಳು ಅನೇಕ. ಚುನಾವಣೆಗೂ ಮುಂಚೆಯೂ ಮತದಾನಕ್ಕೇ ಅವಕಾಶ ನೀಡದೆ ಅಭ್ಯರ್ಥಿಗಳನ್ನು ಹರಾಜು ಕೂಗಿ ಗೆಲ್ಲಿಸುವುದು. ಎಲ್ಲಿಗೆ ಬಂತು ಪ್ರಜಾಪ್ರಭುತ್ವ ಎಂಬುದು ಇದರಿಂದ […]
ರಾಯಚೂರು: ಪಂಚಾಯತ್ಗಳು ತಳಮಟ್ಟದ ಅಧಿಕಾರ ಕೇಂದ್ರಗಳು ಎಂದವರುಂಟು. ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯದ ಕನಸು (Mahatma Gandhi Gram Swaraj) ಕಂಡವರು. ಅಂದರೆ ತಳಮಟ್ಟದಲ್ಲಿ ಗ್ರಾಮ ಪಂಚಾಯತ್ಗಳಿಂದಲೇ ಅಧಿಕಾರ ಕೇಂದ್ರವಿರಲಿ ಎಂದು ಬಯಸಿದವರು. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಗ್ರಾಮ ಪಂಚಾಯತ್ತಿ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗ್ರಾಮ ಸ್ವರಾಜ್ಯದ ಕನಸುಗಳಿಗೆ ಎಳ್ಳುನೀರು ಬಿಟ್ಟಂತಾಗಿದೆ. ಇದಕ್ಕೆ ಉದಾಹರಣೆಗಳು ಅನೇಕ. ಚುನಾವಣೆಗೂ ಮುಂಚೆಯೂ ಮತದಾನಕ್ಕೇ ಅವಕಾಶ ನೀಡದೆ ಅಭ್ಯರ್ಥಿಗಳನ್ನು ಹರಾಜು ಕೂಗಿ ಗೆಲ್ಲಿಸುವುದು. ಎಲ್ಲಿಗೆ ಬಂತು ಪ್ರಜಾಪ್ರಭುತ್ವ ಎಂಬುದು ಇದರಿಂದ ದಿಟವಾಗುತ್ತದೆ. ಇನ್ನು ಅದರಾಚೆಗೆ ಮತದಾನ ನಡೆದು ಫಲಿತಾಂಶಗಳು ಹೊರಬಿದ್ದ ನಂತರ ನಡೆದಿರುವ ಪೈಶಾಚಿಕ ಕೃತ್ಯಗಳನ್ನು ನೋಡಿದರೆ… ಗ್ರಾಮ ಪಂಚಾಯತ್ (Gram Panchayat Election) ಪರಿಕಲ್ಪನೆ ಇದೇನಾ ಎಂದು ಮೂಗುಮುರಿಯುವಂತಾಗುತ್ತದೆ. ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಅನೇಕ ಹತ್ಯೆಗಳೇ ನಡೆದಿವೆ. ಆ ಪರಿಯ ದ್ವೇಷ ಯಾಕಾಗಿ ಎಂಬುದು ತಿಳಿಯದಾಗಿದೆ. ದುರದೃಷ್ಟವೆಂದರೆ ಈ ಅಮಾನವೀಯ ಕೃತ್ಯಗಳಿಗೆ ಕೊನೆ ಎಂಬುದು ಇಲ್ಲದಂತಾಗಿದೆ. ಮಳೆ ನಿಂತರೂ ಹನಿ ಬೀಳುವಂತೆ ಚುನಾವಣೆ/ಮತದಾನ/ಫಲಿತಾಂಶ ಮುಗಿದ್ದಿದ್ದರೂ ಆ ಸಮಯದಲ್ಲಿ ಕಂಡುಬಂದ ದ್ವೇಷ/ಹಗೆತನದಿಂದ ಸಾವುಗಳು/ಪ್ರತೀಕಾರಗಳು ಘಟಿಸುತ್ತಲೇ ಇವೆ. ತಾಜಾ ಘಟನೆಯೊಂದು ನಡೆದಿದೆ, ನೋಡಿ. ಇಲ್ಲಿ ದ್ವೇಷ/ಹಗೆತನಗಳು ಕರುಳುಬಳ್ಳಿಯನ್ನೇ ಸುತ್ತಿಕೊಂಡು, ಕುರುಳುಕುಡಿಯನ್ನು ಸಾಯಿಸಿದೆ. ಇದು ಗ್ರಾಮ ಸ್ವರಾಜ್ಯದ ಕರುಣಾಜನಕ ಕಥೆಯೆನ್ನದೆ ಬೇರೆ ದಾರಿಯಿಲ್ಲ..
ಗ್ರಾ.ಪಂ. ಚುನಾವಣೆಯಲ್ಲಿ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಮಗನ ಹತ್ಯೆ ನಡೆದಿತ್ತು. ಆ ಕೇಸ್ಗೆ ಸಂಬಂಧಿಸಿದಂತೆ ಗುಡದನಾಳದ ಐವರು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳದ ಜಗದೀಶ್, ದುರ್ಗಪ್ಪ, ಶರಣಬಸವ, ಯಲ್ಲಮ್ಮ ಮತ್ತು ಹನಮಂತಿ ಸೆರೆಯಾದವರು.
ಹತ್ಯೆಯ ವೃತ್ತಾಂತ: ಗುಡದನಾಳ ಗ್ರಾಮದಲ್ಲಿ ಶರಣಬಸವ (35) ಎಂಬ ಯುವಕನ ಕೊಲೆಯಾಗಿತ್ತು. ಫೆಬ್ರವರಿ 13ರ ರಾತ್ರಿ 10 ಜನರ ಗುಂಪು ದಾಳಿ ನಡೆಸಿ ಆತನ ಹತ್ಯೆಗೈದಿದ್ದರು. ಹಲ್ಲೆ ನಡೆಸಿ ಪರಾರಿಯಾಗಿದ್ದ ಐವರನ್ನು ಈಗ ಬಂಧಿಸಲಾಗಿದ್ದು ಇನ್ನು ಐವರಿಗಾಗಿ ಶೋಧ ಕಾರ್ಯ ನಡೆದಿದೆ. ಲಿಂಗಸುಗೂರ ಠಾಣೆಯಲ್ಲಿ ಹತ್ತು ಜನರ ವಿರುದ್ದ ಕೊಲೆ ಕೇಸ್ ದಾಖಲಾಗಿತ್ತು.
ಘಟನೆಯ ವೃತ್ತಾಂತ: ರಾಜಕೀಯ ವೈಷಮ್ಯ ಹಿನ್ನೆಲೆ ಇಬ್ಬರ ನಡುವೆ ಜಗಳವಾಗಿ ಓರ್ವನ ಕೊಲೆಯಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ (ಫೆಬ್ರವರಿ 15) ಜಗದೀಶ್ ಮತ್ತು ಶರಣಬಸವ ಮಧ್ಯೆ ಮಾರಾಮಾರಿ ನಡೆದಿತ್ತು. ಹೊಡೆದಾಟದಲ್ಲಿ ಗುಡದನಾಳದ ಶರಣಬಸವ (35) ಎಂಬುವವರು ಮೃತಪಟ್ಟಿದ್ದಾರೆ. ಜಗದೀಶ್ಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರಕರಣ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತನ ತಾಯಿ ಹಣಂತಮ್ಮ ಹೊನ್ನಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದರು. ಹನಮಂತಮ್ಮನ ವಿರುದ್ದ ಸ್ಪರ್ಧಿಸಿದ್ದ ಪಾರ್ವತಿ ಸೋತಿದ್ದರು. ಇದೇ ವೈಷಮ್ಯದಿಂದ ಕಳೆದ ರಾತ್ರಿ ಘರ್ಷಣೆ ನಡೆದಿತ್ತು. ಕೊಲೆ ಆರೋಪಿ ಜಗದೀಶ್ ಸೇರಿ 10 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
Published On - 10:54 am, Thu, 18 February 21