IPL 2021 Auction Live Streaming: ಐಪಿಎಲ್ 2021 ಹರಾಜು ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಆರಂಭ

IPL 2021 Auction Live Streaming: ಐಪಿಎಲ್ 2021 ಹರಾಜು ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಆರಂಭ
IPL 2021

IPL 2021 Auction LIVE Streaming online, Time, Venue: ಐಪಿಎಲ್ 2021 ಹರಾಜು ಇಂದು (ಫೆಬ್ರವರಿ 18, ಗುರುವಾರ) ಕೆಲವೇ ಕ್ಷಣಗಳಲ್ಲಿ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಹರಾಜಿನಲ್ಲಿ ಯಾವ ಆಟಗಾರರು ಯಾವ್ಯಾವ ತಂಡದ ಪಾಲಾಗಲಿದ್ದಾರೆ? ಯಾರು ಎಷ್ಟು ಮೊತ್ತಕ್ಕೆ ಖರೀದಿಯಾಗಲಿದ್ದಾರೆ? ಎಂಬ ವಿಚಾರ ಸದ್ಯ ಕುತೂಹಲ ಮೂಡಿಸಿವೆ.

Skanda

|

Feb 18, 2021 | 2:19 PM

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) 14 ನೇ ಆವೃತ್ತಿಯ ಆಟಗಾರರ ಹರಾಜು (IPL 2021 Auction) ಇಂದು (ಫೆಬ್ರವರಿ 18, ಗುರುವಾರ ) ಚೆನ್ನೈನಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ ಒಂದು ದಿನದಲ್ಲೇ ಪ್ರಕ್ರಿಯೆ ಮುಗಿಯಲಿದ್ದು, ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕೊರೊನಾ ಆತಂಕ ಇನ್ನೂ ಸಂಪೂರ್ಣ ನಿವಾರಣೆ ಆಗದಿರುವ ಕಾರಣ ಬಿಸಿಸಿಐ ನಿಯಮಗಳ (IPL 2021 Auction Rules) ಪ್ರಕಾರ, ಫ್ರ್ಯಾಂಚೈಸಿ ಮಾಲೀಕರಿಗೆ ಹರಾಜಿನಲ್ಲಿ ಪಾಲ್ಗೊಳ್ಳುವ ಮುನ್ನ ಆರ್​ಟಿ-ಪಿಸಿಆರ್ ಪರೀಕ್ಷೆಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ನೇರ ಪ್ರಸಾರ ವೀಕ್ಷಣೆ ಹೇಗೆ? ಐಪಿಎಲ್ 2021 ಹರಾಜು ಪ್ರಕ್ರಿಯೆ ಕಾರ್ಯಕ್ರಮದ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡಲು ಲಭ್ಯವಿರಲಿದೆ. 2020ರ ಐಪಿಎಲ್​ ಹರಾಜು ಮತ್ತು ಪಂದ್ಯ ಸ್ಟಾರ್​ಸ್ಪೋರ್ಟ್ಸ್ ನೆಟ್ವರ್ಕ್​ನ ಟಿವಿ ಮತ್ತು ಡಿಜಿಟಲ್​ ಪ್ಲಾಟ್​ಫಾರ್ಮ್​ಗಳಲ್ಲಿ ವೀಕ್ಷಿಸಲು ಅವಕಾಶ ಒದಗಿಸಲಾಗಿತ್ತು.

ಎಷ್ಟು ಆಟಗಾರರು ಹರಾಜಿನಲ್ಲಿದ್ದಾರೆ? ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದ 1,114 ಆಟಗಾರರ ಪೈಕಿ ಒಟ್ಟು 292 ಆಟಗಾರರು ಹರಾಜಿನಲ್ಲಿ ಇರಲ್ಲಿದ್ದಾರೆ. ಈ ಎಲ್ಲಾ 292 ಆಟಗಾರರನ್ನು ಹರಾಜು ಮಾಡಲಾಗುತ್ತಿದ್ದು, ಯಾವ ತಂಡಗಳು ಯಾವ ಆಟಗಾರರತ್ತ ಆಸಕ್ತಿ ತೋರಿಸಿ ಖರೀದಿಗೆ ಮುಂದಾಗಲಿವೆ ಎಂಬುದು ಸಂಜೆಯ ವೇಳೆಗೆ ಗೊತ್ತಾಗಲಿದೆ.

ಹರಾಜು ಪ್ರಕ್ರಿಯೆ ಹೇಗೆ? ಹರಾಜಿನಲ್ಲಿ ಒಟ್ಟು 62 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಾಗಿದೆ. ಹೀಗಾಗಿ ತಂಡದಲ್ಲಿರುವ ಹಣವನ್ನು ಬಳಸಿಕೊಂಡು ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ. ಪ್ರತಿಯೊಬ್ಬ ಆಟಗಾರನು ನಿರ್ದಿಷ್ಟ ಮೂಲ ಬೆಲೆಯನ್ನು ಹೊಂದಿದ್ದು, ಅದಕ್ಕಿಂತ ಕಡಿಮೆ ಬೆಲೆಗೆ ಅವರನ್ನು ಖರೀದಿಸುವುದು ಸಾಧ್ಯವಿಲ್ಲ. ಆದರೆ, ತಂಡಗಳು ನಿರ್ದಿಷ್ಟ ಆಟಗಾರರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಅಧಿಕ ಮೊತ್ತ ನೀಡಿ ತಮ್ಮತ್ತ ಸೆಳೆದುಕೊಳ್ಳಬಹುದು. ವಿದೇಶಿ ಆಟಗಾರರು ತಮ್ಮದೇ ಆದ ಮೂಲ ಬೆಲೆಯನ್ನು ನಿಗದಿಪಡಿಸಿದರೆ, ಭಾರತೀಯ ಆಟಗಾರರ ಮೂಲ ಬೆಲೆಯನ್ನು ಬಿಸಿಸಿಐ ಜೊತೆ ಚರ್ಚೆ ನಡೆಸಿ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

ಐಪಿಎಲ್ ಫ್ರಾಂಚೈಸಿಗಳ ಬಳಿಯಿರುವ ಹಣವೆಷ್ಟು?

ಎಲ್ಲಾ ಎಂಟು ಫ್ರಾಂಚೈಸಿಗಳು ಹೊಂದಿರುವ ಹಣದ ಸಂಪೂರ್ಣ ಪಟ್ಟಿ ಇಲ್ಲಿದೆ.

Franchise Remaining Purse Available Slot Overseas Slot
ಚೆನ್ನೈ ಸೂಪರ್ ಕಿಂಗ್ಸ್ ರೂ 19.90 ಕೋಟಿ 6 1
ಡೆಲ್ಲಿ ಕ್ಯಾಪಿಟಲ್ಸ್​ ರೂ 13.40 ಕೋಟಿ 8 3
ಪಂಜಾಬ್ ಕಿಂಗ್ಸ್ ರೂ 53.20 ಕೋಟಿ 9 5
ಕೋಲ್ಕತಾ ನೈಟ್ ರೈಡರ್ಸ್ ರೂ 10.75 ಕೋಟಿ 8 2
ಮುಂಬೈ ಇಂಡಿಯನ್ಸ್  ರೂ 15.35 ಕೋಟಿ 7 4
ರಾಜಸ್ಥಾನ್ ರಾಯಲ್ಸ್ ರೂ 37.85 ಕೋಟಿ 9 3
ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 35.40 ಕೋಟಿ 14 3
ಸನ್‌ರೈಸರ್ಸ್ ಹೈದರಾಬಾದ್ ರೂ 10.75 ಕೋಟಿ 3 1

ಇದನ್ನೂ ಓದಿ: ಐಪಿಎಲ್ 2021 ಹರಾಜು ಪ್ರಕ್ರಿಯೆ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ನೇರ ಪ್ರಸಾರ? ಇಲ್ಲಿದೆ ಮಾಹಿತಿ

Follow us on

Most Read Stories

Click on your DTH Provider to Add TV9 Kannada