Petrol Price Today: ಸತತ 9ನೇ ದಿನ ಪೆಟ್ರೋಲ್ ದರ ಏರಿಕೆ.. 25 ಪೈಸೆ ಹೆಚ್ಚಳ!

Petrol Diesel Rate: ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 25 ಪೈಸೆ ಏರಿಕೆ ಹಾಗೂ ಲೀಟರ್ ಡೀಸೆಲ್ ಬೆಲೆ 25 ಪೈಸೆಯಷ್ಟು ಹೆಚ್ಚಳವಾಗಿದೆ.

  • TV9 Web Team
  • Published On - 8:32 AM, 17 Feb 2021
Petrol Price Today: ಸತತ 9ನೇ ದಿನ ಪೆಟ್ರೋಲ್ ದರ ಏರಿಕೆ.. 25 ಪೈಸೆ ಹೆಚ್ಚಳ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಸತತವಾಗಿ 9ನೇ ದಿನವೂ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯತ್ತ ಜಿಗಿದಿದೆ. ಪೆಟ್ರೋಲ್​ ಬೆಲೆ 25 ಪೈಸೆ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್​ಗೆ ₹89.54 ಹಾಗೂ ಡೀಸೆಲ್​ ಕೂಡಾ 25 ಪೈಸೆ ಹೆಚ್ಚಳವಾಗಿದ್ದು, ಲೀಟರ್​ ಡೀಸೆಲ್​ ಬೆಲೆ ₹79.95 ಆಗಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಬೆಲೆ ಏರಿಕೆ ಕಾಣುವ ರಾಜಸ್ಥಾನದಲ್ಲಿ.. ಇಂದು ಪೆಟ್ರೋಲ್​ ಬೆಲೆ ಲೀಟರಿಗೆ 96 ರೂಪಾಯಿಯಿದ್ದು, ಶತಕದತ್ತ ಮುನ್ನುಗ್ಗುತ್ತಿದೆ.

ಪೆಟ್ರೋಲ್​, ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯತ್ತ ಸಾಗುತ್ತಲೇ ಇದೆ. ಸತತವಾಗಿ 9ನೇ ದಿನವೂ ಕೂಡಾ ಬೆಲೆಯಲ್ಲಿ ಹೆಚ್ಚಳವಾಗಿದೆ. ತೈಲ ದರ ಏರಿಕೆ ಪರಿಣಾಮ ಜನರ ಜೀವನದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಸಾರ್ವಕಾಲಿಕವಾಗಿ ದಾಖಲೆಯತ್ತ ತೈಲದ ಬೆಲೆ ಏರುತ್ತಿರುವುದನ್ನು ನೋಡುತ್ತಿದ್ದರೆ, ಪ್ರತಿ ಲೀ. ಪೆಟ್ರೋಲ್ ಬೆಲೆ 100 ರೂ.ಗೆ ತಲುವುದರ ಬಗ್ಗೆ ಯಾವುದೇ ಸಂದೇಹವಿಲ್ಲ.

ಇದನ್ನೂ ಓದಿ: Petrol Price Today: ಇಂದೂ ಏರಿದ ಪೆಟ್ರೋಲ್ ದರ.. 30 ಪೈಸೆ ಹೆಚ್ಚಳ!

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದೀಗ ಇದೇ ಬೆನ್ನಲ್ಲೇ ಆಹಾರ ಧಾನ್ಯ, ಬೇಳೆಕಾಳು, ಹಣ್ಣು, ತರಕಾರಿಗಳ ಬೆಲೆಯೂ ಕೂಡ ಹೆಚ್ಚಳವಾಗಿದೆ. ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯ ದರವೂ ದಿಢೀರ್ ಏರಿಕೆಯಾಗುತ್ತಿದೆ.