Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ತೆರವು; ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಣೆ

Puducherry Lieutenant Governor: ವಿ. ನಾರಾಯಣ ಸ್ವಾಮಿ ಅವರ ಕಾಂಗ್ರೆಸ್ ಸರ್ಕಾರದಿಂದ ಶಾಸಕರು ರಾಜೀನಾಮೆ ನೀಡಿದ್ದರಿಂದ ಪುದುಚ್ಚೇರಿ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾದ ಬೆನ್ನಲ್ಲೇ ಕಿರಣ್ ಬೇಡಿ ಅವರನ್ನು ಗವರ್ನರ್ ಸ್ಥಾನದಿಂದ ತೆರವುಗೊಳಿಸಲಾಗಿದೆ.

  • TV9 Web Team
  • Published On - 11:23 AM, 17 Feb 2021
Kiran Bedi: ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಕಿರಣ್ ಬೇಡಿ ತೆರವು; ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಣೆ
ಕಿರಣ್ ಬೇಡಿ

ಪುದುಚೇರಿ: ಮಂಗಳವಾರ ರಾತ್ರಿ ಕಿರಣ್ ಬೇಡಿ ಅವರನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಬದಲಿಸಿ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಗವರ್ನರ್ ಸ್ಥಾನದಿಂದ ತೆರವುಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ ಕಿರಣ್ ಬೇಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದು ಉತ್ತಮ ಅನುಭವ ಆಗಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ನಮ್ಮ ತಂಡವು ಸಾರ್ವಜನಿಕರ ಹಿತಾಸಕ್ತಿಗಾಗಿ ಶ್ರಮವಹಿಸಿತ್ತು ಎಂದಿದ್ದಾರೆ.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದು ನನಗೆ ಜೀವಮಾನದ ಅನುಭವವನ್ನು ನೀಡಿದೆ. ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು. ತಮ್ಮ ತಂಡದ ಶ್ರಮವನ್ನು ಶ್ಲಾಘಿಸಿದ ಬೇಡಿ, ನನ್ನ ಅವಧಿಯಲ್ಲಿನ ಕೆಲಸದ ಬಗ್ಗೆ ನಾನು ತೃಪ್ತಿಹೊಂದಿದ್ದೇನೆ. ಜನರಿಗಾಗಿ ಟೀಂ ರಾಜ್ ನಿವಾಸ್ (ಕಿರಣ್ ಬೇಡಿ ಅವರ ಕಚೇರಿ) ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.

ವಿ. ನಾರಾಯಣ ಸ್ವಾಮಿ ಅವರ ಕಾಂಗ್ರೆಸ್ ಸರ್ಕಾರದಿಂದ ಶಾಸಕರು ರಾಜೀನಾಮೆ ನೀಡಿದ್ದರಿಂದ ಪುದುಚೇರಿ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾದ ಬೆನ್ನಲ್ಲೇ ಕಿರಣ್ ಬೇಡಿ ಅವರನ್ನು ಗವರ್ನರ್ ಸ್ಥಾನದಿಂದ ತೆರವುಗೊಳಿಸಲಾಗಿದೆ.

ಇದನ್ನೂ ಓದಿ: Kiran Bedi: ಪುದುಚ್ಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್​ ಬೇಡಿ ತೆರವು

ಕಿರಣ್ ಬೇಡಿ ಅವರನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ತೆರವುಗೊಳಿಸಲು ರಾಷ್ಟ್ರಪತಿ ನಿರ್ದೇಶಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ವಕ್ತಾರ ಅಜಯ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದರು. ತೆಲಂಗಾಣದ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರಿಗೆ ಪುದುಚೇರಿ ಗವರ್ನರ್ ಸ್ಥಾನದ ಹೆಚ್ಚುವರಿ ಹೊಣೆಯನ್ನು ರಾಷ್ಟ್ರಪತಿ ನೀಡಿದ್ದಾರೆ.