Manya Singh: ಅಮ್ಮನ ಮುಡಿಗೆ ಮಿಸ್ ಇಂಡಿಯಾ ಕಿರೀಟ, ಅಪ್ಪನ ಆಟೋದಲ್ಲಿಯೇ ಸಂಚಾರ: ಹೆತ್ತವರ ತ್ಯಾಗಕ್ಕೆ ಮಗಳ ‘ಮಾನ್ಯ’ತೆ

ಮಿಸ್​ ಇಂಡಿಯಾ 2020 ರನ್ನರ್​ ಅಪ್​ ಖ್ಯಾತಿ ಪಡೆದರೂ ಕೂಡಾ ಸರಳತೆ ಮೆರೆದು ತನ್ನ ತಂದೆಯ ಆಟೋ ರಿಕ್ಷಾದಲ್ಲಿ ತೆರಳಿದ ಮಾನ್ಯಾ ಸಿಂಗ್.

  • TV9 Web Team
  • Published On - 13:28 PM, 17 Feb 2021
Manya Singh: ಅಮ್ಮನ ಮುಡಿಗೆ ಮಿಸ್ ಇಂಡಿಯಾ ಕಿರೀಟ, ಅಪ್ಪನ ಆಟೋದಲ್ಲಿಯೇ ಸಂಚಾರ: ಹೆತ್ತವರ ತ್ಯಾಗಕ್ಕೆ ಮಗಳ 'ಮಾನ್ಯ'ತೆ
ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಮಾನ್ಯಾ ಸಿಂಗ್

ಸಾಧನೆಯ ಹಾದಿ ಹಿಡಿಯುವ ಮನಸ್ಸಿದ್ದರೆ, ಸಾಧನೆಯತ್ತ ಗುರಿ ತಲುಪಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾದವರು ಮಿಸ್​ ಇಂಡಿಯಾ 2020ರ ರನ್ನರ್​ ಅಪ್​ ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿ ಮಾನ್ಯಾ ಸಿಂಗ್. ಮಿಸ್​ ಇಂಡಿಯಾ ಎಂಬ ಹಿರಿಮೆಗೆ ಪಾತ್ರರಾದರೂ ಕೂಡಾ ತಮ್ಮ ಕಾಲೇಜಿನ ಸನ್ಮಾನ ಕಾರ್ಯಕ್ರಮದಲ್ಲಿ ತಂದೆಯ ಆಟೋದಲ್ಲೇ ತೆರಳಿ ಸರಳ ಜೀವನವನ್ನು ತೋರ್ಪಡಿಸಿದ್ದಾರೆ ಮಾನ್ಯಾ ಸಿಂಗ್. ಹಾಗೂ ಸಮಾರಂಭದಲ್ಲಿ ತನ್ನ ಮುಡಿಗೇರಿದ್ದ ಕಿರೀಟವನ್ನು ಅಮ್ಮನ ಮುಡಿಗೇರಿಸಿದರು. ಆನಂದ ಪರವಶರಾಗಿ ಮಾನ್ಯಾ ಸಿಂಗ್ ಅಮ್ಮ, ತನ್ನ ಮಗಳ ಸಾಧನೆಯ ಬಗ್ಗೆ ಹೆಮ್ಮೆಪಟ್ಟರು. 

ಮಿಸ್​ ಇಂಡಿಯಾ ರನ್ನರ್​ ಅಪ್ ಖ್ಯಾತಿಗೆ ಹೆಸರಾದ ಮಾನ್ಯಾಳನ್ನು, ಮಂಗಳವಾರ ಠಾಕೂರ್ ವಿಜ್ಞಾನ ಮತ್ತು ವಾಣಿಜ್ಯ ವಿಶ್ವವಿದ್ಯಾಲಯ ಸನ್ಮಾನ ಸಮಾರಂಭಕ್ಕೆ ಕರೆ ನೀಡಿತ್ತು. ಆ ಸಂದರ್ಭದಲ್ಲಿ ಮಾನ್ಯಾ ಕಿರೀಟ ಧರಿಸಿ ತನ್ನ ತಂದೆಯ ಆಟೋದಲ್ಲಿ ಕುಟುಂಬ ಸಮೇತವಾಗಿ ಆಗಮಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಮಿಸ್​ ಇಂಡಿಯಾ ರನ್ನರ್​ ಅಪ್ ಆದರೂ ತಮ್ಮ ಹಳೆಯ ಕಷ್ಟದ ದಿನಗಳನ್ನು ಮರೆಯದೆ ಎಂದಿನಂತೆ ಇದ್ದಾರೆ.  ಇದು ಮಾನ್ಯಾಳ ಸರಳ ಜೀವನವನ್ನು ತೋರ್ಪಡಿಸುತ್ತದೆ.

 

View this post on Instagram

 

A post shared by Femina Miss India (@missindiaorg)

ಕಾಲೇಜಿಗೆ ಆಗಮಿಸಿ ಆಟೋದಿಂದ ಇಳಿದ ಮಾನ್ಯ ಮೊದಲು ತನ್ನ ತಂದೆ, ತಾಯಿಯ ಆಶೀರ್ವಾದ ಪಡೆದರು. ಹಾಗೂ ಮಗಳ ಸಾಧನೆಗೆ ಖುಷಿಯಿಂದ ತಂದೆಯ ಕಣ್ಣಲ್ಲಿ ನೀರು ತುಂಬಿದ್ದನ್ನು ಕಂಡು ಕಣ್ಣು ಒರೆಸಿದರು. ಈ ಸನ್ನಿವೇಶ ಮಾನ್ಯಾಳ ಕುಟುಂಬ ಕಷ್ಟದಿಂದ ಬಂದ ಬದುಕಿಗೆ ಖುಷಿಯ ಸಂದರ್ಭವನ್ನು ವಿವರಿಸುತ್ತಿತ್ತು.

 

View this post on Instagram

 

A post shared by Femina Miss India (@missindiaorg)

ಹ್ಯೂಮನ್ಸ್​ ಆಫ್​ ಬಾಂಬೆ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಮಾನ್ಯಾ ತನ್ನ ಜೀವನದ ಕಥೆಯನ್ನು ಹಂಚಿಕೊಂಡರು. ತನ್ನ 14ನೇ ವಯಸ್ಸಿಗೆ ತನ್ನಕನಸುಗಳನ್ನು ಈಡೇರಿಸಿಕೊಳ್ಳಲು ಹಳ್ಳಿಯಿಂದ ರೈಲು ಹತ್ತಿ ಮುಂಬೈಗೆ ಬಂದೆ. ನಾನು ರೈಲು ಇಳಿದ ತಕ್ಷಣ ನನಗೆ ಎದುರು ಕಂಡಿದ್ದು ಪಿಜ್ಜಾ ಹಟ್. ಅಲ್ಲಿ ನಾನು ಪಾರ್ಟ್​ಟೈಮ್​ ಉದ್ಯೋಗಕ್ಕೆ ಸೇರಿಕೊಂಡೆ. 2 ದಿನಗಳ ನಂತರ ನಾನು ನನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದೆ. ನಾನು ಪಿಜ್ಜಾ ಹಟ್​ನಲ್ಲಿ ಕೆಲಸ ಮಾಡುತ್ತೇನೆ ಎಂಬ ವಿಷಯ ನನ್ನ ತಂದೆಗೆ ಆಗ ನೋವುಂಟು ಮಾಡಿತು. ಮರು ದಿನವೇ ನನ್ನ ತಂದೆ ಮತ್ತು ತಾಯಿ ನನ್ನನ್ನು ನೋಡಲು ಮುಂಬೈಗೆ ಬಂದಿಳಿದಿದ್ದರು ಎಂದು ಕಷ್ಟದ ಜೀವನವನ್ನು ಹಂಚಿಕೊಂಡರು.

ಈ ಕುರಿತಂತೆ ಮಾತನಾಡುತ್ತ, ನನ್ನ 15ನೇ ವಯಸ್ಸಿನಲ್ಲಿ ನಾನು ಮೊದಲು ಮಿಸ್​ ಇಂಡಿಯಾ ಸ್ಪರ್ಧೆಯನ್ನು ನೋಡಿದ್ದು. ಆಗಲೇ ನಾನೂ ಅವರಂತೆ ಆಗಬೇಕೆಂದು ಕನಸು ಹೊತ್ತು, ಅವರಂತೆ ಬಹುಮಾನಕ್ಕೆ ಪಾತ್ರಳಾಗುತ್ತೇನೆ ಎಂದು ಭಾವಿಸಿದೆ. ಆದರೆ ಪಿತೃ ಪ್ರಧಾನ ಕುಟುಂಬದಲ್ಲಿ ಬೆಳೆದ ನನಗೆ ಮಹಿಳೆಯರಿಗಿಂತ ಪುರುಷರೇ ಮೇಲು ಎಂಬ ಭಾವನೆಯಲ್ಲಿದ್ದೆ. ನಾನು ಈ ಕುರಿತಂತೆ ನನ್ನ ತಂದೆಯ ಬಳಿ ಮಾತನಾಡಿದಾಗ, ನಿನ್ನ ಪದವಿ ಶಿಕ್ಷಣದಲ್ಲಿ ಕಷ್ಟಪಟ್ಟರೆ ನೀನು ಸಾಧನೆಯತ್ತ ತಲುಪುತ್ತೀಯಾ ಎಂದು ಉರಿದುಂಬಿಸಿದರು. ನಾನು ಹಲವಾರು ಸ್ಪರ್ಧೆಗಳಿಗೆ ಭಾಗವಹಿಸಿದೆ. ನಿನಗೆ ಇಂಗ್ಲಿಷ್​ ಕೂಡಾ ಗೊತ್ತಿಲ್ಲ. ಈ ಸ್ಪರ್ಧೆಗೆ ನೀನು ಆಯ್ಕೆಯಾಗುವುದು ಕಷ್ಟ ಎಂಬ ಮಾತನ್ನು ಕೇಳಿದ್ದೆ. ಹಾಗಾಗಿ ನನ್ನ ತಂದೆ ಆಭರಣಗಳನ್ನು ಅಡವಿಟ್ಟು ನನಗೆ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟರು. ನನಗೆ ಬಟ್ಟೆಯನ್ನು ಖರೀದಿಸಬೇಕು ಎಂದಾಗ ಹತ್ತಿರದ ಪಿಜ್ಜಾ ಹಟ್​ನಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿಗೆ ಬರುತ್ತಿದ್ದ ಜನರು ಅಥವಾ ಕಾಲೇಜು ವಿದ್ಯಾರ್ಥಿಗಳು ಹೇಗೆ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಗಮನಿಸುತ್ತಿದ್ದೆ ಎಂದು ತನ್ನ ಕಷ್ಟದಿಂದ ಬಂದ ಜೀವನವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!

ಇದೀಗ ನನ್ನ ಸಾಧನೆಯತ್ತ ನಾನು ತಲುಪಿದ್ದೇನೆ. ಈಗ ನಾನು ನನ್ನ ಕುಟುಂಬಕ್ಕೆ ನೀಡಬೇಕಾದುದನ್ನು ನೀಡಬಹುದು. ಆ ಅವಕಾಶ ನನ್ನಲ್ಲೀಗ ಇದೆ. ನಾನು ಮನೆ ಖರೀದಿಸಿ ನನ್ನ ತಂದೆಗೆ ನೀಡಬೇಕೆಂದು ಇದ್ದೇನೆ. ಮೊದಲಿನಿಂದಲೂ ನನ್ನ ಆಸೆಗೆ ಅವರು ಬೆಂಬಲಿಸುತ್ತ ಬಂದಿದ್ದಾರೆ ಎಂದು ಮಾತನಾಡಿದರು.