Hassan Accident | ಅವೈಜ್ಞಾನಿಕ ಹಂಪ್: ಟಾಟಾ ಸುಮೋಗೆ ಕ್ವಾಲಿಸ್ ಡಿಕ್ಕಿ, ಐವರ ಸಾವು, 11 ಮಂದಿಗೆ ಗಂಭೀರ ಗಾಯ

ಟಾಟಾ ಸುಮೋಗೆ ಹಿಂದೆಯಿಂದ ಕ್ವಾಲಿಸ್ ಡಿಕ್ಕಿಯಾಗಿ ಕ್ವಾಲಿಸ್‌ನಲ್ಲಿದ್ದ ಕೆಜಿಎಫ್ ಮೂಲದ ಪ್ರದೀಪ್ ಕುಮಾರ್, ಪುನೀತ್, ನವೀನ್ ಗುಡ್ಡು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ತೀರಾ ಗಂಭೀರವಾಗಿದ್ದು ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 11 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಹಾಸನ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Hassan Accident | ಅವೈಜ್ಞಾನಿಕ ಹಂಪ್: ಟಾಟಾ ಸುಮೋಗೆ ಕ್ವಾಲಿಸ್ ಡಿಕ್ಕಿ, ಐವರ ಸಾವು, 11 ಮಂದಿಗೆ ಗಂಭೀರ ಗಾಯ
ಹಾಸನ ಹೊರವಲಯದ ಕೆಂಚಟ್ಟಹಳ್ಳಿಯ ಬಳಿ ನಡೆದ ಭೀಕರ ಅಪಘಾತ
Follow us
ಆಯೇಷಾ ಬಾನು
|

Updated on:Feb 21, 2021 | 12:31 PM

ಹಾಸನ: ಟಾಟಾ ಸುಮೋಗೆ ಹಿಂದೆಯಿಂದ ಕ್ವಾಲಿಸ್ ಡಿಕ್ಕಿಯಾಗಿ ಭಯಾನಕ ದುರಂತವೊಂದು ಸಂಭವಿಸಿದೆ. ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 11 ಜನರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಹೊರವಲಯದ ಕೆಂಚಟ್ಟಹಳ್ಳಿಯ ಬಳಿ ಘಟನೆ ನಡೆದಿದೆ.

ಟಾಟಾ ಸುಮೋಗೆ ಹಿಂದೆಯಿಂದ ಕ್ವಾಲಿಸ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಕ್ವಾಲಿಸ್‌ನಲ್ಲಿದ್ದ ಕೆಜಿಎಫ್ ಮೂಲದ ಪ್ರದೀಪ್ ಕುಮಾರ್, ಪುನೀತ್, ನವೀನ್ ಗುಡ್ಡು, ಅನಿಲ್ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳಿಗೆ  ಹಾಸನ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಡುಪಿಗೆ ಮದುವೆಗೆ ತೆರಳ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹಾಸನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅವೈಜ್ಞಾನಿಕ ಹಂಪ್​ನಿಂದ ನಡೀತು ಅವಘಡ ಇನ್ನು ಈ ಅಪಘಾತ ಅವೈಜ್ಞಾನಿಕ ಹಂಪ್​ನಿಂದ‌ ನಡೆದಿದೆ ಎಂದು ತಿಳಿದು ಬಂದಿದೆ. ಅವೈಜ್ಞಾನಿಕ ಹಂಪ್ ಸಮೀಪ ಟಾಟಾ ಸುಮೋ ವಾಹನ ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ವೇಗವಾಗಿ ಹಿಂಬದಿಯಿಂದ ಬಂದ ಕ್ವಾಲೀಸ್ ವಾಹನ ಡಿಕ್ಕಿ ಹೊಡೆದಿದೆ. ಮುಂಜಾನೆ 4 ಗಂಟೆ ವೇಳೆಯಲ್ಲಿ ಅಪಘಾತ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಪಲ್ಟಿಯಾಗಿವೆ. ಈ ಪರಿಣಾಮ ಉಡುಪಿಯಲ್ಲಿ ನಡೆಯುವ ಮದುವೆಗೆ ತೆರಳುತ್ತಿದ್ದ ಕ್ವಾಲೀಸ್ ವಾಹನದಲ್ಲಿದ್ದ ಐವರು ಮೃತಪಟ್ಟಿದ್ದು ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಟಾಟಾ ಸುಮೋದಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಹತ್ತು ಜನರಿಗೆ ಗಂಭೀರ ಗಾಯಗಳಾಗಿವೆ.

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು ಕಳೆದ ವಾರವಷ್ಟೇ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿ ನಾಲ್ವರು ಯುವಕರು ಮೃತಪಟ್ಟಿದ್ದರು. ಅಲ್ಲದೆ ಫೆಬ್ರವರಿ 19ರಂದು ಪಾದಚಾರಿಗೆ ಡಿಕ್ಕಿ ಹೊಡೆದ ಕಾರು ಅಡಿಕೆ ತೋಟಕ್ಕೆ ನುಗ್ಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಿರಬೆಳಗುಲಿ ಬಳಿ ನಡೆದಿತ್ತು. ಅಪಘಾತದಲ್ಲಿ ಹಿರೆಬೆಳಗುಲಿ ಗ್ರಾಮದ ರಾಮಸ್ವಾಮಿ(76) ವೃದ್ಧ ಸ್ಥಳದಲ್ಲೇ ಮೃತ ಪಟ್ಟಿದ್ದರು. ವೃದ್ಧನನ್ನು ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದರ ಮುಗಿಲುಮುಟ್ಟಿತ್ತು. ಅದರಲ್ಲೂ, ತಂದೆಯನ್ನು ಕಳೆದುಕೊಂಡ ಯೋಧ ಮಗನ ದುಃಖ ಹಾಗೂ ಕಣ್ಣೀರು ನೆರೆದವರ ಮನ ಕಲಕಿತ್ತು.

ಕಾರು ಹಾಸನದ ಕಡೆಯಿಂದ ವೇಗವಾಗಿ ಬರುವಾಗ ಅವಘಡ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಾಮಸ್ವಾಮಿಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಅಡಿಕೆ ತೋಟಕ್ಕೆ ನುಗ್ಗಿತ್ತು.

ಇದನ್ನೂ ಓದಿ: Accident ಕಂಟೇನರ್ ಲಾರಿ​ಗೆ ಕಾರು ಡಿಕ್ಕಿ: ಮದುವೆಗೆಂದು ಹೊರಟ ಅಬಕಾರಿ ಇಲಾಖೆ SI ತಲುಪಿದ್ದು ಮಾತ್ರ ಮಸಣಕ್ಕೆ

ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ

Published On - 7:42 am, Sun, 21 February 21

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು