ಸಚಿವರ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: MLA ಗಾಯನಕ್ಕೆ ಮನಸೋತು ಕೈಮುಗಿದ ‘ಸಾಮ್ರಾಟ್​’​!

ನೆರೆದಿದ್ದವರು ಸಿಳ್ಳೆ ಚಪ್ಪಾಳಿ ಹೊಡೆಯುವ ಮೂಲಕ ಶಾಸಕರಿಗೆ ಉತ್ತೇಜನ ನೀಡಿದರು. ಈ ನಡುವೆ, ಶಾಶಕ ನಿಸರ್ಗ ನಾರಾಯಣಸ್ವಾಮಿ ಅವರ ಅದ್ಭುತ​ ಗಾಯನಕ್ಕೆ ಫುಲ್​ ಫಿದಾ ಆದ ಸಚಿವ ಅಶೋಕ್​ ಕೈಮುಗಿದು ವಾಹ್ ಉಸ್ತಾದ್​​ ಎಂದರು!

  • Publish Date - 12:03 am, Sun, 21 February 21
ಸಚಿವರ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: MLA ಗಾಯನಕ್ಕೆ ಮನಸೋತು ಕೈಮುಗಿದ ‘ಸಾಮ್ರಾಟ್​’​!
MLA ನಿಸರ್ಗ ನಾರಾಯಣಸ್ವಾಮಿ ಗಾಯನಕ್ಕೆ ಕೈಮುಗಿದ ಸಚಿವ ಅಶೋಕ್​

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ DCಗಳು ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಜನರ ಕಷ್ಟಗಳಿಗೆ ಸ್ಪಂದಿಸಲು ಮುಂದಾದರು. ಅಂತೆಯೇ, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ ಡಿಸಿ ರೋಹಿಣಿ ಸಿಂಧೂರಿ ಜನರ ಸಮಸ್ಯೆ ಆಲಿಸಿದರು. ಗ್ರಾಮ ವಾಸ್ತವ್ಯ ವೇಳೆ ಜಿಲ್ಲಾಧಿಕಾರಿಗೆ ಒಟ್ಟು 685 ಅರ್ಜಿಗಳು ಸಲ್ಲಿಕೆಯಾಯಿತು. ಸುತ್ತಮುತ್ತಲಿನ ಗ್ರಾಮಸ್ಥರಿಂದಲೂ ಡಿಸಿಗೆ ಮನವಿ ಸಲ್ಲಿಕೆಯಾಯಿತು. 685 ಅರ್ಜಿಗಳ ಪೈಕಿ 625 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕೊಟ್ಟ ರೋಹಿಣಿ ಸಿಂಧೂರಿ ಬಳಿಕ ಶಾಸಕರು ಮತ್ತು ಅಧಿಕಾರಿಗಳ ಜೊತೆ ಗ್ರಾಮವಾಸ್ತವ್ಯ ಮಾಡಿದರು.

MYS DC SINDHURI VISIT 1

ಜನರ ಸಮಸ್ಯೆ ಆಲಿಸಿದ ಡಿ.ಸಿ ರೋಹಿಣಿ ಸಿಂಧೂರಿ

ಇತ್ತ, ಕೊಪ್ಪಳ‌ ಜಿಲ್ಲೆಯ ಯಲಬುರ್ಗಾ ತಾಲೂಕಿನ‌ ಹಿರೇ ವಡ್ಡರಕಲ್ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ‌ ವಾಸ್ತವ್ಯ ಹಿನ್ನೆಲೆಯಲ್ಲಿ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಇದರ ಜೊತೆಗೆ, ಜಾನಪದ ಕಲಾವಿದರು ತತ್ವಪದಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.

KPL DC VISIT 3

ಶಾಲಾ ಮಕ್ಕಳಿಂದ ನೃತ್ಯ

KPL DC VISIT 2

ಜಾನಪದ ಕಲಾವಿದರಿಂದ ತತ್ವಪದಗಳ ಗಾಯನ

KPL DC VISIT 1

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಸಚಿವರಿಗಾಗಿ ಅಧಿಕಾರಿಗಳಿಂದ ಫೈರ್​​ಕ್ಯಾಂಪ್ ಆಯೋಜನೆ
ಆದರೆ, ಸಾಯಂಕಾಲ ಆಗುತ್ತಿದ್ದಂತೆ ಎಲ್ಲರ ಗಮನ ಸೆಳೆದಿದ್ದು ಸಚಿವ ಅಶೋಕ್​ ಮತ್ತು ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿ ಕಂದಾಯ ಸಚಿವ ಅಶೋಕ್‌ ಗ್ರಾಮವಾಸ್ತವ್ಯ ಹೂಡಿದರು.

ಗ್ರಾಮ ವಾಸ್ತವ್ಯದಲ್ಲಿದ್ದ ಸಚಿವರಿಗಾಗಿ ಅಧಿಕಾರಿಗಳಿಂದ ಫೈರ್​​ಕ್ಯಾಂಪ್ ಆಯೋಜಿಸಲಾಗಿತ್ತು. ಹೊಸಹಳ್ಳಿ ಹಾಸ್ಟೆಲ್ ಮುಂಭಾಗದಲ್ಲಿ ಅಧಿಕಾರಿಗಳು ಫೈರ್​ಕ್ಯಾಂಪ್ ಏರ್ಪಡಿಸಿದರು. ಇದೇ ವೇಳೆ, ಸಚಿವರು ಹಾಗೂ ಅಧಿಕಾರಿಗಳ ಮನರಂಜನೆಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗಾಯಕರಾಗಿ ಖ್ಯಾತಿ ಪಡೆದಿರುವ ಪೊಲೀಸ್ ಸಿಬ್ಬಂದಿ ಸುಬ್ರಮಣಿ ಸೇರಿದಂತೆ ಸ್ಥಳೀಯರಿಂದ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಹಾಡುಗಳನ್ನು ಹಾಡಿ ಅಧಿಕಾರಿಗಳು ಮತ್ತು ಸಚಿವರಿಗೆ ಮನರಂಜನೆ ನೀಡಿದರು.

DEV ASHOK NISARGA NARAYANA SWAMY SONG 3

ಪೊಲೀಸ್ ಸಿಬ್ಬಂದಿ ಸುಬ್ರಮಣಿ ಸೇರಿದಂತೆ ಸ್ಥಳೀಯರಿಂದ ಸಂಗೀತ ಕಾರ್ಯಕ್ರಮ

ಈ ವೇಳೆ, ಸಚಿವರಿಗೆ ಸಾಥ್​ ನೀಡಲು ಕಾರ್ಯಕ್ರಮಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸ್ ಮೂರ್ತಿ ಆಗಮಿಸಿದರು. ಸಚಿವರ ಜೊತೆ ಕುಳಿತು ಸಂಗೀತ ಕಾರ್ಯಕ್ರಮವನ್ನು ಆನಂದಿಸಿದರು.

DEV ASHOK SRINIVASA MURTHY 1

ಹಾಡು ಹಾಡಿ ರಂಜಿಸಿದ ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸ್ ಮೂರ್ತಿ

ಆದರೆ, ಅಷ್ಟಕ್ಕೇ ನಿಲ್ಲದೆ, ಗ್ರಾಮ ವಾಸ್ತವ್ಯಕ್ಕೆ ಶಾಸಕರೂ ಸಹ ಮೆರುಗು ತಂದರು. ಹೌದು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮತ್ತು ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ಖುದ್ದು ಅಖಾಡಕ್ಕೆ ಇಳಿದು ಒಂದೆರಡು ಹಾಡು ಹಾಡಿ ಎಲ್ಲರನ್ನ ರಂಜಿಸಿದರು.

EV ASHOK NISARGA NARAYANA SWAMY SONG 1

ಹಾಡು ಹಾಡಿ ರಂಜಿಸಿದ ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ

ಈ ವೇಳೆ, ನೆರೆದಿದ್ದವರು ಸಿಳ್ಳೆ ಚಪ್ಪಾಳಿ ಹೊಡೆಯುವ ಮೂಲಕ ಶಾಸಕರಿಗೆ ಉತ್ತೇಜನ ನೀಡಿದರು. ಈ ನಡುವೆ, ಶಾಶಕ ನಿಸರ್ಗ ನಾರಾಯಣಸ್ವಾಮಿ ಅವರ ಅದ್ಭುತ​ ಗಾಯನಕ್ಕೆ ಫುಲ್​ ಫಿದಾ ಆದ ಸಚಿವ ಅಶೋಕ್​ ಕೈಮುಗಿದು ವಾಹ್ ಉಸ್ತಾದ್​​ ಎಂದರು!

DEV ASHOK NISARGA NARAYANA SWAMY SONG 2

ನಿಸರ್ಗ ನಾರಾಯಣಸ್ವಾಮಿ ಅವರ ಅದ್ಭುತ​ ಗಾಯನಕ್ಕೆ ಫುಲ್​ ಫಿದಾ ಆದ ಸಚಿವ ಅಶೋಕ್

ಮೆ ಶಾಯರ್ ತೋ ನಹೀ ಎಂದ ಬೆಳಗಾವಿ ಜಿಲ್ಲಾಧಿಕಾರಿ!
ಇತ್ತ, ಗ್ರಾಮ ವಾಸ್ತವ್ಯದ ವೇಳೆ ಹಾಡು ಹಾಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಲ್ಲರನ್ನೂ ರಂಜಿಸಿದರು. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಡಿ.ಸಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏಪರ್ಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಾಡು ಹಾಡಿ ಎಲ್ಲರ ಗಮನ ಸೆಳೆದರು.

ಮೆ ಶಾಯರ್ ತೋ ನಹೀ ಎಂಬ ಹಿಂದಿ ಚಿತ್ರಗೀತೆ ಮೂಲಕ ಗಾಯನ ಆರಂಭಿಸಿದ ಡಿ.ಸಿ ಬಳಿಕ ಕನ್ನಡವೆಂದರೆ ಕುಣಿಯುವೆನು ಎಂಬ ಗೀತೆಯನ್ನು ಹಾಡಿದರು. ಈ ವೇಳೆ, ಡಿಸಿ ಎಂ.ಜಿ.ಹಿರೇಮಠ ಅವರಿಗೆ ನೂರಾರು ಮಕ್ಕಳು ದನಿಗೂಡಿಸಿ ಕೋರಸ್ ಹಾಡಿದರು. ಬಳಿಕ ಸಿದ್ದಬಸವೇಶ್ವರ ಮಠದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾದ ಡಿ.ಸಿ. ಮಠದಲ್ಲಿಯೇ ರಾತ್ರಿಯ ಊಟ ಸೇವಿಸಿದರು.

BGM DC FOOD 2

ಮೆ ಶಾಯರ್ ತೋ ನಹೀ ಎಂದ ಬೆಳಗಾವಿ ಜಿಲ್ಲಾಧಿಕಾರಿ!

BGM DC FOOD 1

ಮಠದಲ್ಲಿಯೇ ರಾತ್ರಿಯ ಊಟ ಸೇವಿಸಿದ DC

Click on your DTH Provider to Add TV9 Kannada