ತಾಯಿಯ ಹಿಂಬಾಲಿಸಿದ ಪುತ್ರ.. ತಾಯಿ ಅಂತ್ಯ ಸಂಸ್ಕಾರ ಆಗುತ್ತಿದ್ದಂತೆ ಪುತ್ರನೂ ಸಾವಿಗೀಡಾದ
Son Died After Mothers Last Rites in Hassan.. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದಾರೆ.
ಹಾಸನ: ತಾಯಿ ಅಂತ್ಯ ಸಂಸ್ಕಾರದ ಬಳಿಕ ಪುತ್ರ ಕೂಡ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾ.ಪಂ ಮಾಜಿ ಸದಸ್ಯ, ಗಂಗಾಮತಸ್ಥ ಜನಾಂಗದ ಮುಖಂಡ ಗಣೇಶ್ (57) ತನ್ನ ತಾಯಿ ಗೌರಮ್ಮ(75) ರ ಅಂತ್ಯ ಸಂಸ್ಕಾರ ನಡೆಸಿ ಮನೆಗೆ ಬಂದ 2 ಗಂಟೆಗೊಳಗೆ ಮೃತಪಟ್ಟಿದ್ದು ತಾಯಿಯನ್ನೇ ಹಿಂಬಾಲಿಸಿದ್ದಾರೆ.
ಗಣೇಶ್ ಈ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸನದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ತಾಯಿ ಗೌರಮ್ಮ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕರೆದುಕೊಂಡು ಬರಲಾಗಿತ್ತು.
ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಗಣೇಶ್ಗೆ ಹೃದಯಾಘಾತವಾಗಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಗಣೇಶ್ ಮೃತಪಟ್ಟಿದ್ದಾರೆ. ಮೃತ ಗಣೇಶ್ಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಅಂತ್ಯಕ್ರಿಯೆ ಕೊಣನೂರಿನ ರುದ್ರಭೂಮಿಯಲ್ಲಿ ನೆರವೇರಿದೆ.
ಇದು ಜೀವನ | ಬದುಕಿನ ಬಂಡಿ ಎಳೆಯೋಕೆ ತಾಯಿ ಮಗನ ಹರ ಸಾಹಸ: ವಿಜಯಪುರದಲ್ಲೊಂದು ಮನಕಲಕುವ ಕತೆ
Published On - 10:11 am, Sat, 6 February 21