‘ಎಸ್ಬಿಐನಲ್ಲಿ ಗೋಲ್ಡ್ ಲೋನ್ಗೆ ಶೇ 7.50 ಬಡ್ಡಿದರ, ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ, ಇನ್ನೂ ಸೌಲಭ್ಯಗಳಿವೆ’ ಎಂದು ಎಸ್ಬಿಐ ಟ್ವೀಟ್ ಮಾಡಿದೆ. ಚಿನ್ನದ ಆಭರಣಗಳು, ಚಿನ್ನದ ನಾಣ್ಯಗಳನ್ನು ಬ್ಯಾಂಕ್ನಲ್ಲಿ ಅಡಮಾನ ಮಾಡಿ, ಕನಿಷ್ಠ ಮಟ್ಟದ ಕಾಗದದ ವ್ಯವಹಾರ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಿನ್ನದ ಸಾಲದ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು:
ಅರ್ಹತೆ ಮಾನದಂಡ:
ವಯಸ್ಸು: 18 ವರ್ಷ ಮತ್ತು ಮೇಲ್ಪಟ್ಟು
ವೃತ್ತಿ: ಯಾವುದೇ ವೈಯಕ್ತಿಕ (ಒಬ್ಬರು ಅಥವಾ ಜಂಟಿ) ಅರ್ಜಿದಾರರಿಗೆ ಸ್ಥಿರವಾದ ಆದಾಯ ಇರಬೇಕು. ಬ್ಯಾಂಕ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೂ ಸಾಲ ನೀಡಲಾಗುತ್ತದೆ (ಆದಾಯದ ಪ್ರೂಫ್ ಅಗತ್ಯ ಇಲ್ಲ).
ಗರಿಷ್ಠ ಸಾಲ: 50 ಲಕ್ಷ ರೂಪಾಯಿ
ಕನಿಷ್ಠ ಸಾಲ: 20 ಸಾವಿರ ರೂಪಾಯಿ
ಮಾರ್ಜಿನ್
ಚಿನ್ನದ ಸಾಲ: ಶೇ 25, ನಗದು ಚಿನ್ನದ ಸಾಲ: ಶೇ 25, ಬುಲೆಟ್ ಮರುಪಾವತಿ ಚಿನ್ನದ ಸಾಲ: ಶೇ 35
ಭದ್ರತೆ: ಚಿನ್ನವನ್ನು ಅಡಮಾನ ಮಾಡಬೇಕು. ಅದರ ಗುಣಮಟ್ಟ ಮತ್ತು ತೂಕವನ್ನು ಪರಿಶೀಲನೆ ಮಾಡಲಾಗುತ್ತದೆ.
ಪ್ರೊಸೆಸಿಂಗ್ ಶುಲ್ಕ: ಸಾಲದ ಮೊತ್ತದ ಮೇಲೆ ಶೇ 0.25+ ಅನ್ವಯ. ಜಿಎಸ್ಟಿ: ಕನಿಷ್ಠ ₹ 250+ ಅನ್ವಯ. ಯೋನೋ ಮೂಲಕ ಅರ್ಜಿ ಹಾಕಿದರೆ ಯಾವುದೇ ಶುಲ್ಕ ಇಲ್ಲ.
ಬಡ್ಡಿ ದರ:
ಒಂದು ವರ್ಷದ ಅವಧಿಯೊಳಗಾದರೆ- ಶೇ 7, ಒಂದು ವರ್ಷ ಮೇಲ್ಪಟ್ಟಲ್ಲಿ – ಶೇ 0.50 ಹೆಚ್ಚು, ಪರಿಣಾಮಕಾರಿ ಬಡ್ಡಿ ದರ- ಶೇ 7.50.
ಎಸ್ಬಿಐನಲ್ಲಿ ಹೌಸಿಂಗ್ ಲೋನ್ ಪಡೆದವರಿಗಾಗಿಯೇ ಇರುವ ಸಾಲ
ಒಂದು ವರ್ಷದ ಅವಧಿಯೊಳಗಾದರೆ- ಶೇ 7, ಒಂದು ವರ್ಷ ಮೇಲ್ಪಟ್ಟಲ್ಲಿ – ಶೇ 0.30 ಹೆಚ್ಚು, ಪರಿಣಾಮಕಾರಿ ಬಡ್ಡಿ ದರ- ಶೇ 7.30.
ಸಾಲ ಮರುಪಾವತಿ: ಸಾಲ ವಿತರಣೆ ಮಾಡಿದ ಮರು ತಿಂಗಳಿನಿಂದಲೇ ಮರುಪಾವತಿ ಶುರು ಆಗುತ್ತದೆ.
ಲಿಕ್ವಿಡ್ ಗೋಲ್ಡ್ ಲೋನ್: ಓವರ್ಡ್ರಾಫ್ಟ್ ಖಾತೆ ಮತ್ತು ವಹಿವಾಟು ಅನುಕೂಲ ಮತ್ತು ತಿಂಗಳ ಬಡ್ಡಿ ಕಟ್ಟಲು ಅವಕಾಶ ನೀಡಲಾಗುತ್ತದೆ.
ಬುಲೆಟ್ ಮರುಪಾವತಿ ಚಿನ್ನದ ಸಾಲ: ಸಾಲದ ಅವಧಿ ಮುಗಿಯುವುದರೊಳಗಾಗಿ ಅಥವಾ ಖಾತೆ ಸ್ಥಗಿತ ಮಾಡುವಾಗ.
ಮರುಪಾವತಿ ಅವಧಿ
ಚಿನ್ನದ ಸಾಲ: 36 ತಿಂಗಳು, ಲಿಕ್ವಿಡ್ ಗೋಲ್ಡ್ ಲೋನ್: 36 ತಿಂಗಳು, ಬುಲೆಟ್ ಮರುಪಾವತಿ ಚಿನ್ನದ ಸಾಲ: 12 ತಿಂಗಳು
ಸಾಲಕ್ಕೆ ಅರ್ಜಿ ಹಾಕಲು ಬೇಕಾದ ದಾಖಲಾತಿಗಳು
ಚಿನ್ನದ ಸಾಲದ ಅರ್ಜಿ ಹಾಗೂ ಎರಡು ಫೋಟೋ, ಗುರುತು ಮಾತು ವಿಳಾಸ ದೃಢೀಕರಣದ ದಾಖಲೆ (ಅಡ್ರೆಸ್ ಮತ್ತು ಐ.ಡಿ. ಪ್ರೂಫ್), ಅನಕ್ಷರಸ್ಥ ಅರ್ಜಿದಾರರಿಗೆ ಸಾಕ್ಷಿ ಪತ್ರ.
ಇದನ್ನೂ ಓದಿ: ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಮಾರ್ಚ್ 1ರಿಂದ 5ರ ಮಧ್ಯೆ ಚಿನ್ನ ಖರೀದಿ, ಗ್ರಾಮ್ಗೆ ರೂ. 4662