24 ಗಂಟೆಯಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು; ಇಲ್ಲದಿದ್ರೆ ನಾನು ನೇರವಾಗಿ ಪ್ರಧಾನಿಗೆ ಪತ್ರ ಬರೆಯುವೆ- ದಿನೇಶ್ ಕಲ್ಲಹಳ್ಳಿ

Ramesh Jarkiholi | ರಮೇಶ್ ಜಾರಕಿಹೊಳಿಯದ್ದು ಇದೊಂದೇ ವಿಡಿಯೋ ಅಲ್ಲ, ರಮೇಶ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಇದೆ. 24 ಗಂಟೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು; ಇಲ್ಲದಿದ್ರೆ ನಾನು ನೇರವಾಗಿ ಪ್ರಧಾನಿಗೆ ಪತ್ರ ಬರೆಯುವೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

24 ಗಂಟೆಯಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಬೇಕು; ಇಲ್ಲದಿದ್ರೆ ನಾನು ನೇರವಾಗಿ ಪ್ರಧಾನಿಗೆ ಪತ್ರ ಬರೆಯುವೆ- ದಿನೇಶ್ ಕಲ್ಲಹಳ್ಳಿ
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ
Ayesha Banu

| Edited By: sadhu srinath

Mar 03, 2021 | 9:29 AM

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್​​ CD ಬಯಲು ಮಾಡಿದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಟಿವಿ9ನ ಸಂದರ್ಶನದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿಯದ್ದು ಇದೊಂದೇ ವಿಡಿಯೋ ಅಲ್ಲ, ರಮೇಶ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಇದೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ಟಿವಿ9 ಸಂದರ್ಶನದಲ್ಲಿ ಮಾತನಾಡಿದ ದಿನೇಶ್ ಕಲ್ಲಹಳ್ಳಿ ಎಳೆ ಎಳೆಯಾಗಿ ರಮೇಶ್ ಜಾರಕಿಹೊಳಿಯವರ ಲೀಲೆಗಳನ್ನು ಬಿಚ್ಚಿಟ್ಟಿದ್ದಾರೆ. 2 ದಿನಗಳ ಹಿಂದೆ ಸಂತ್ರಸ್ತರು ಬಂದು ನನ್ನನ್ನು ಭೇಟಿಯಾಗಿದ್ದರು. ಕಾನೂನು ಹೋರಾಟದ ಮೂಲಕ ನ್ಯಾಯ ಕೊಡಿಸಲು ಮನವಿ ಮಾಡಿದ್ರು. ನನಗೆ ಅವರು ಸಿಡಿಯನ್ನು ಕೊಟ್ಟರು. ನಮ್ಮ ವಕೀಲರ ಜತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ದೇನೆ. ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಕೆಲಸದ ಆಮಿಷ ತೋರಿಸಿ ಯುವತಿಯನ್ನು ಬಳಸಿಕೊಂಡಿದ್ದಾರೆ. 2 ತಿಂಗಳಿಂದ ಬೆದರಿಕೆ ಬರುತ್ತಿದೆ ಎಂದು ಸಂತ್ರಸ್ತರು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕು ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಯನ್ನು ನೀಡಬೇಕು. ಇಲ್ಲದಿದ್ದರೆ ನಾನು ಪ್ರಧಾನಿಗೆ ಈ ಸಂಬಂಧ ಪತ್ರ ಬರೆಯುತ್ತೇನೆ. ಸುಬ್ರಮಣಿಯನ್ ಸ್ವಾಮಿ ಮೂಲಕ ಪ್ರಧಾನಿ ಮೋದಿಯವರ ಭೇಟಿಗೂ ನಾನು ಪ್ರಯತ್ನಿಸುತ್ತೇನೆ. ನನ್ನ ಹೋರಾಟ ಗಮನಿಸಿದ ಸಂತ್ರಸ್ತೆ ಕುಟುಂಬದ ಸದಸ್ಯರು, ನನ್ನ ಬಳಿ ಬಂದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ರು. ರಮೇಶ್ ಜಾರಕಿಹೊಳಿ ಮಾರ್ಗದರ್ಶಕರಾಗಿರಬೇಕಾಗಿದ್ದವರು, ಹೀಗೆ ಮಾಡುವುದು ತಪ್ಪು. ತನಿಖೆಯಿಂದ ಎಲ್ಲ ಸತ್ಯವೂ ಹೊರಬರಲಿದೆ  ಎಂಬುದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಪ್ರತಿಕ್ರಿಯೆ.

ರಮೇಶ್ ಜಾರಕಿಹೊಳಿ ಪ್ರಭಾವಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಅವರು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ರಮೇಶ್ ಅವರ ರಾಜೀನಾಮೆ ಪಡೆಯಬೇಕು. ಸಂತ್ರಸ್ತೆ ಕುಟುಂಬದವರು ನೀಡಿದ್ದ ಸಿಡಿಯನ್ನು ಪೊಲೀಸ್ ಆಯುಕ್ತರಿಗೆ ಸಿಡಿಯನ್ನು ನೀಡಿದ್ದೇನೆ. ಯುವತಿ ವಿಡಿಯೋ ಮಾಡಿಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಸಚಿವರ ಬಳಿ ಕೆಲಸಕ್ಕಾಗಿ ಯುವತಿ ಪರಿಪರಿಯಾಗಿ ಕೇಳಿದ್ದಳು.

ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ನೇರವಾಗಿದೆ. ಅವರು ಸಚಿವ ಸ್ಥಾನದಲ್ಲಿರಲು ನಾಲಾಯಕ್ ಆಗಿದ್ದಾರೆ. ನಾನು ಸಿಎಂ ಬಿಎಸ್‌ವೈ ಅವರಿಗೆ ಡೆಡ್‌ಲೈನ್ ನೀಡುತ್ತೇನೆ. 24 ಗಂಟೆಯಲ್ಲಿ ಸಚಿವ ರಮೇಶ್‌ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ನಾನು ನೇರವಾಗಿ ಪ್ರಧಾನಿಗೆ ಪತ್ರ ಬರೆಯುತ್ತೇನೆ. ಪರಸ್ಪರ ಸಹಮತಿಯಿಂದ ಮಾಡಿದ್ದರೂ ಇದು ತಪ್ಪು.

ರಮೇಶ್ ಸಚಿವರಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ಕಿರುಚಿತ್ರ ನಿರ್ಮಾಣಕ್ಕೆ ತೆರಳಿದ್ದ ವೇಳೆ ಅನುಮತಿ ಕೊಟ್ಟಿಲ್ಲ. ಯುವತಿ ಬಳಿ ನೀನು ಕಿರುಚಿತ್ರ ಮಾಡುವುದು ಬೇಡ. ನಿನಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದಾರೆ. ಆಮಿಷ ತೋರಿಸಿ ಯುವತಿಯನ್ನು ರಮೇಶ್ ಬಳಸ್ಕೊಂಡಿದ್ದಾರೆ. ಯುವತಿಗೆ ನೀಡಿದ ಆಶ್ವಾಸನೆಯನ್ನು ನೆರವೇರಿಸಬೇಕಾಗಿತ್ತು ಎಂದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ.. ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada