Kannada News » Karnataka » Dinesh kallahalli says he have obscene videos of many other politicians of karnataka
ರಮೇಶ್ ಜಾರಕಿಹೊಳಿಯವರ ಇನ್ನೂ ಒಂದು ವಿಡಿಯೋ ಇದೆ; ಪ್ರಭಾವಿ ಹುದ್ದೆಯಲ್ಲಿರುವವರ ವಿಡಿಯೋ ಕೂಡ ಇದೆ -ದಿನೇಶ್ ಕಲ್ಲಹಳ್ಳಿ
Dinesh Kallahalli: ರಮೇಶ್ ಜಾರಕಿಹೊಳಿಯದ್ದು ಇದೊಂದೇ ವಿಡಿಯೋ ಅಲ್ಲ, ರಮೇಶ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಇದೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ಕೇವಲ ಸಚಿವ ರಮೇಶ್ ಜಾರಕಿಹೊಳಿ ಒಬ್ಬರ ವಿಡಿಯೋ ಮಾತ್ರ ಇಲ್ಲ, ಸಮಾಜದ ಉನ್ನತ ಸ್ಥಾನದಲ್ಲಿರುವವರ ವಿಡಿಯೋಗಳೂ ಇವೆ.
ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ರಾಜಕಾರಣದಲ್ಲಿ ಅಲೆ ಎಬ್ಬಿಸಿದೆ. ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಟಿವಿ9 ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ವಿಡಿಯೋ ಬಯಲು ಮಾಡಿದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಮತ್ತಷ್ಟು ಸ್ಫೋಟಕ ಸಂಗತಿಗಳನ್ನು ಬಯಲು ಮಾಡಿದ್ದಾರೆ.
ಸಮಾಜದ ಉನ್ನತ ಸ್ಥಾನದಲ್ಲಿರುವವರ ವಿಡಿಯೋ ನನ್ನ ಬಳಿ ಇದೆ
ರಮೇಶ್ ಜಾರಕಿಹೊಳಿಯದ್ದು ಇದೊಂದೇ ವಿಡಿಯೋ ಅಲ್ಲ, ರಮೇಶ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಕೂಡ ಇದೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ಕೇವಲ ಸಚಿವ ರಮೇಶ್ ಜಾರಕಿಹೊಳಿ ಒಬ್ಬರ ವಿಡಿಯೋ ಮಾತ್ರ ಇಲ್ಲ, ಸಮಾಜದ ಉನ್ನತ ಸ್ಥಾನದಲ್ಲಿರುವವರ ವಿಡಿಯೋಗಳೂ ಇವೆ. ಪ್ರಭಾವಿ ಹುದ್ದೆಯಲ್ಲಿರುವವರು, ಸಂಪುಟದಲ್ಲಿರುವವರು ಸೇರಿದಂತೆ ಕೆಲವು ನಾಯಕರಿಗೆ ಸೇರಿದ ವಿಡಿಯೋಗಳಿವೆ. ಅದರ ಬಗ್ಗೆ ನಾನು ಸದ್ಯಕ್ಕೆ ಏನೂ ಹೇಳುವುದಕ್ಕೆ ಆಗಲ್ಲ. ಆ ವಿಡಿಯೋ ಸೂಕ್ತ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ. ಸದ್ಯ ತನಿಖೆಗೆ ಬೇಕಾಗುವಷ್ಟು ವಿಡಿಯೋ ಮಾತ್ರ ನೀಡಿದ್ದೇನೆ. ರಾಜ್ಯದ ಜನರು ನಾಚಿಕೆ ಪಡುವಂತಹ ವ್ಯವಸ್ಥೆ ಇದೆ ಎಂದು ದಿನೇಶ್ ಟಿವಿ9ಗೆ ತಿಳಿಸಿದ್ದಾರೆ. ಹಾಗಾದ್ರೆ ಮುಂದೆ ಸಂದರ್ಭಕ್ಕೆ ತಕ್ಕ ಹಾಗೆ ಪ್ರಭಾವಿಗಳ ವಿಡಿಯೋವನ್ನು ರಿಲೀಸ್ ಮಾಡ್ತಾರಾ.. ಯಾರ್ ಯಾರ ವಿಡಿಯೋಗಳು ದಿನೇಶ್ ಬಳಿ ಇದೆ ಸಮಯವೇ ತಿಳಿಸಬೇಕಾಗಿದೆ.