ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ

Ramesh Jarkiholi | ಯುವತಿಯೊಬ್ಬಳ ಜತೆ ರಮೇಶ್ ಜಾರಕಿಹೊಳಿ ಇರುವ ಹಸಿಬಿಸಿ ದೃಶ್ಯಗಳ ಸಿಡಿಯೊಂದು ಭಯಾನಕವಾಗೇ ಸ್ಫೋಟಗೊಂಡಿದೆ. ಸದ್ಯ ಈಗ ರಾತ್ರಿಯಿಂದ ಬೆಂಗಳೂರಿನಲ್ಲೆ ಇರುವ ರಮೇಶ್ ಜಾರಕಿಹೊಳಿ ಈ ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

  • TV9 Web Team
  • Published On - 8:31 AM, 3 Mar 2021
ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ
ರಮೇಶ್​ ಜಾರಕಿಹೊಳಿ

ಸರ್ಕಾರವನ್ನೇ ಶೇಕ್ ಮಾಡುವಷ್ಟು ತಾಕತ್ತಿರೋ, ಮುಖ್ಯಮಂತ್ರಿಗೆ ಆರ್ಡರ್ ಮಾಡುವಷ್ಟು ಗೈರತ್ತಿರೋ, ರಾಜ್ಯದ ಪ್ರಭಾವಿ ರಾಜಕಾರಣಿಯ ಕೊರಳಿಗೆ ರಾಸಲೀಲೆ ಆರೋಪ ಸುತ್ತಿಕೊಂಡಿದೆ. ಜಲಸಂಪನ್ಮೂಲ ಖಾತೆ ಸಚಿವ, ಮೈತ್ರಿ ಸರ್ಕಾರದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ದಂಡನಾಯಕನಾಗಿದ್ದ, ಬೆಳಗಾವಿಯ ಸಾಹುಕಾರ್ ಅರ್ಥಾತ್ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಯುವತಿಯೊಬ್ಬಳ ಜತೆ ರಮೇಶ್ ಜಾರಕಿಹೊಳಿ ಇರುವ ಹಸಿಬಿಸಿ ದೃಶ್ಯಗಳ ಸಿಡಿಯೊಂದು ಭಯಾನಕವಾಗೇ ಸ್ಫೋಟಗೊಂಡಿದೆ. ಸದ್ಯ ಈಗ ರಾತ್ರಿಯಿಂದ ಬೆಂಗಳೂರಿನಲ್ಲೆ ಇರುವ ರಮೇಶ್ ಜಾರಕಿಹೊಳಿ ಈ ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ನಿರಂತರವಾಗಿ ವಕೀಲರ ಜತೆ ಚರ್ಚಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಾಧ್ಯವಾದ್ರೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನೂ ಭೇಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಸಿಎಂ ಬಿಎಸ್‌ವೈ ಭೇಟಿ ಬಳಿಕ ದೆಹಲಿಗೆ ತೆರಳಲಿದ್ದಾರೆ. ಸಹೋದರ ಬಾಲಚಂದ್ರ ಜತೆ ಸಿಎಂ ಸಂಪರ್ಕಕ್ಕೆ ಚಿಂತನೆ ನಡೆಸಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿಯವರದ್ದೇ ಎನ್ನುತ್ತಿರುವ ವಿಡಿಯೋ ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದ್ದು, 2017ರಲ್ಲಿ ಯುವತಿಯನ್ನ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕೋಣೆಯಲ್ಲಿ ಸಾಹುಕಾರ್​ ಬೆತ್ತಲಾಗಿರೋ ದೃಶ್ಯಗಳು ಈಗ ರಾಜ್ಯಾದ್ಯಂತ ತೀವ್ರ ಕೋಲಾಹಲ ಎಬ್ಬಿಸಿವೆ.

ಕೆಪಿಟಿಸಿ​ಎಲ್​ನಲ್ಲಿ ಕೆಲಸದ ಆಮಿಷ.. ಯುವತಿ ಜತೆ ಸರಸ-ಸಲ್ಲಾಪ..!?
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಬೆಳಗಾವಿ ಸಾಹುಕಾರನ ಸರಸ ಸಲ್ಲಾಪದ ಹಿಂದಿನ ಕಥೆಯೇನು.. ಜಲಸಂಪನ್ಮೂಲ ಸಚಿವರು, ಬೆತ್ತಲಾಗಿ ಈಜಾಡಿದ್ದೆಲ್ಲಿ ಎನ್ನುವುದನ್ನು ಬಯಲು ಮಾಡಿದ್ದಾರೆ. ಬೆಂಗಳೂರಿನ ಆರ್​.ಟಿ.ನಗರದ ಯುವತಿಯೊಬ್ಬಳು ರಾಜ್ಯದ ಡ್ಯಾಂಗಳ ಸಾಕ್ಷ್ಯಚಿತ್ರ ಮಾಡೋ ವಿಚಾರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಳಿ ನೆರವು ಕೇಳಿರ್ತಾಳಂತೆ. ಹೀಗೆ ನೆರವು ಕೇಳಿರೋ ಬಗ್ಗೆ ಆಡಿಯೋವೊಂದು ರಿಲೀಸ್ ಆಗಿದೆ.

ಹೀಗೆ ಸಾಕ್ಷ ಚಿತ್ರಕ್ಕೆ ನೆರವು ಕೇಳಿ ಬಂದಿದ್ದ ಯುವತಿಗೆ ಕೆಪಿಟಿಸಿಎಲ್​​ನಲ್ಲಿ ನೌಕರಿ ಕೊಡಿಸೋದಾಗಿ ಸಚಿವ ರಮೇಶ್ ಜಾರಕಿಹೊಳಿ, ಆಮಿಷವೊಡ್ಡಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅಂತಾ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ದಿನೇಶ್​ ಕಲ್ಲಹಳ್ಳಿಯವ್ರು ರಮೇಶ್​ ಜಾರಕಿಹೊಳಿಯವರ ರಾಸಲೀಲೆ ಬಯಲು ಮಾಡ್ತಿದ್ದಂತೆ, ರಾಜ್ಯ ರಾಜಕರಣದಲ್ಲಿ ಕೋಲಾಹಲ ಉಂಟಾಗಿತ್ತು. ಅಷ್ಟೇ ಅಲ್ಲ ಸಾಹುಕಾರನ ಕಾಮ ಕೇಳಿ ಸದ್ದು ಮಾಡ್ತಿದ್ದಂತೆ, ಸಚಿವರ ಸ್ವಕ್ಷೇತ್ರ ಗೋಕಾಕ್​​ನಲ್ಲಿ ಕೆಲಕಾಲ ವಿದ್ಯುತ್​ ಕಡಿತ ಮಾಡಲಾಗಿತ್ತು.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ.. ಅಧಿವೇಶನಕ್ಕೆ ವಿಪಕ್ಷಗಳಿಗೆ ಸಿಕ್ತು ಅಸ್ತ್ರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ‘ಸಾಹುಕಾರ್’?