AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ

Ramesh Jarkiholi | ಯುವತಿಯೊಬ್ಬಳ ಜತೆ ರಮೇಶ್ ಜಾರಕಿಹೊಳಿ ಇರುವ ಹಸಿಬಿಸಿ ದೃಶ್ಯಗಳ ಸಿಡಿಯೊಂದು ಭಯಾನಕವಾಗೇ ಸ್ಫೋಟಗೊಂಡಿದೆ. ಸದ್ಯ ಈಗ ರಾತ್ರಿಯಿಂದ ಬೆಂಗಳೂರಿನಲ್ಲೆ ಇರುವ ರಮೇಶ್ ಜಾರಕಿಹೊಳಿ ಈ ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ
ರಮೇಶ್​ ಜಾರಕಿಹೊಳಿ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Mar 03, 2021 | 9:24 AM

Share

ಸರ್ಕಾರವನ್ನೇ ಶೇಕ್ ಮಾಡುವಷ್ಟು ತಾಕತ್ತಿರೋ, ಮುಖ್ಯಮಂತ್ರಿಗೆ ಆರ್ಡರ್ ಮಾಡುವಷ್ಟು ಗೈರತ್ತಿರೋ, ರಾಜ್ಯದ ಪ್ರಭಾವಿ ರಾಜಕಾರಣಿಯ ಕೊರಳಿಗೆ ರಾಸಲೀಲೆ ಆರೋಪ ಸುತ್ತಿಕೊಂಡಿದೆ. ಜಲಸಂಪನ್ಮೂಲ ಖಾತೆ ಸಚಿವ, ಮೈತ್ರಿ ಸರ್ಕಾರದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ದಂಡನಾಯಕನಾಗಿದ್ದ, ಬೆಳಗಾವಿಯ ಸಾಹುಕಾರ್ ಅರ್ಥಾತ್ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಯುವತಿಯೊಬ್ಬಳ ಜತೆ ರಮೇಶ್ ಜಾರಕಿಹೊಳಿ ಇರುವ ಹಸಿಬಿಸಿ ದೃಶ್ಯಗಳ ಸಿಡಿಯೊಂದು ಭಯಾನಕವಾಗೇ ಸ್ಫೋಟಗೊಂಡಿದೆ. ಸದ್ಯ ಈಗ ರಾತ್ರಿಯಿಂದ ಬೆಂಗಳೂರಿನಲ್ಲೆ ಇರುವ ರಮೇಶ್ ಜಾರಕಿಹೊಳಿ ಈ ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ನಿರಂತರವಾಗಿ ವಕೀಲರ ಜತೆ ಚರ್ಚಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಾಧ್ಯವಾದ್ರೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನೂ ಭೇಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಸಿಎಂ ಬಿಎಸ್‌ವೈ ಭೇಟಿ ಬಳಿಕ ದೆಹಲಿಗೆ ತೆರಳಲಿದ್ದಾರೆ. ಸಹೋದರ ಬಾಲಚಂದ್ರ ಜತೆ ಸಿಎಂ ಸಂಪರ್ಕಕ್ಕೆ ಚಿಂತನೆ ನಡೆಸಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿಯವರದ್ದೇ ಎನ್ನುತ್ತಿರುವ ವಿಡಿಯೋ ದೆಹಲಿಯಲ್ಲಿ ನಡೆದಿದೆ ಎನ್ನಲಾಗಿದ್ದು, 2017ರಲ್ಲಿ ಯುವತಿಯನ್ನ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕೋಣೆಯಲ್ಲಿ ಸಾಹುಕಾರ್​ ಬೆತ್ತಲಾಗಿರೋ ದೃಶ್ಯಗಳು ಈಗ ರಾಜ್ಯಾದ್ಯಂತ ತೀವ್ರ ಕೋಲಾಹಲ ಎಬ್ಬಿಸಿವೆ.

ಕೆಪಿಟಿಸಿ​ಎಲ್​ನಲ್ಲಿ ಕೆಲಸದ ಆಮಿಷ.. ಯುವತಿ ಜತೆ ಸರಸ-ಸಲ್ಲಾಪ..!? ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಬೆಳಗಾವಿ ಸಾಹುಕಾರನ ಸರಸ ಸಲ್ಲಾಪದ ಹಿಂದಿನ ಕಥೆಯೇನು.. ಜಲಸಂಪನ್ಮೂಲ ಸಚಿವರು, ಬೆತ್ತಲಾಗಿ ಈಜಾಡಿದ್ದೆಲ್ಲಿ ಎನ್ನುವುದನ್ನು ಬಯಲು ಮಾಡಿದ್ದಾರೆ. ಬೆಂಗಳೂರಿನ ಆರ್​.ಟಿ.ನಗರದ ಯುವತಿಯೊಬ್ಬಳು ರಾಜ್ಯದ ಡ್ಯಾಂಗಳ ಸಾಕ್ಷ್ಯಚಿತ್ರ ಮಾಡೋ ವಿಚಾರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಳಿ ನೆರವು ಕೇಳಿರ್ತಾಳಂತೆ. ಹೀಗೆ ನೆರವು ಕೇಳಿರೋ ಬಗ್ಗೆ ಆಡಿಯೋವೊಂದು ರಿಲೀಸ್ ಆಗಿದೆ.

ಹೀಗೆ ಸಾಕ್ಷ ಚಿತ್ರಕ್ಕೆ ನೆರವು ಕೇಳಿ ಬಂದಿದ್ದ ಯುವತಿಗೆ ಕೆಪಿಟಿಸಿಎಲ್​​ನಲ್ಲಿ ನೌಕರಿ ಕೊಡಿಸೋದಾಗಿ ಸಚಿವ ರಮೇಶ್ ಜಾರಕಿಹೊಳಿ, ಆಮಿಷವೊಡ್ಡಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅಂತಾ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ದಿನೇಶ್​ ಕಲ್ಲಹಳ್ಳಿಯವ್ರು ರಮೇಶ್​ ಜಾರಕಿಹೊಳಿಯವರ ರಾಸಲೀಲೆ ಬಯಲು ಮಾಡ್ತಿದ್ದಂತೆ, ರಾಜ್ಯ ರಾಜಕರಣದಲ್ಲಿ ಕೋಲಾಹಲ ಉಂಟಾಗಿತ್ತು. ಅಷ್ಟೇ ಅಲ್ಲ ಸಾಹುಕಾರನ ಕಾಮ ಕೇಳಿ ಸದ್ದು ಮಾಡ್ತಿದ್ದಂತೆ, ಸಚಿವರ ಸ್ವಕ್ಷೇತ್ರ ಗೋಕಾಕ್​​ನಲ್ಲಿ ಕೆಲಕಾಲ ವಿದ್ಯುತ್​ ಕಡಿತ ಮಾಡಲಾಗಿತ್ತು.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ.. ಅಧಿವೇಶನಕ್ಕೆ ವಿಪಕ್ಷಗಳಿಗೆ ಸಿಕ್ತು ಅಸ್ತ್ರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ‘ಸಾಹುಕಾರ್’?

Published On - 8:31 am, Wed, 3 March 21

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!