ಮಹಾಮಾರಿ ತಡೆಗಟ್ಟುವಲ್ಲಿ ಭಾರೀ ಶ್ರಮಿಸಿದ್ದ 4 ಜಂಟಿ‌ ಆಯುಕ್ತರು ಏಕಾಏಕಿ ವರ್ಗ?

| Updated By: ಸಾಧು ಶ್ರೀನಾಥ್​

Updated on: Aug 27, 2020 | 10:57 AM

ಬೆಂಗಳೂರು: BBMPಯ ನಾಲ್ವರು ಜಂಟಿ ಆಯುಕ್ತರ ವರ್ಗಾವಣೆ ಅಂತಿಮ ಹಂತಕ್ಕೆ ಬಂದಿದೆ. ಬಿಬಿಎಂಪಿ ನಾಲ್ಕು ವಲಯಗಳಾದ ಪಶ್ಚಿಮ ವಲಯ, ದಕ್ಷಿಣ ವಲಯ, ದಾಸರಹಳ್ಳಿ ವಲಯ, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡುವ ಮುನ್ಸೂಚನೆ ದೊರೆತಿದೆ. ಇವರು ಕೊರೊನಾ‌ ಮಹಾಮಾರಿ ತಡೆಗಟ್ಟುವಲ್ಲಿ ಹೆಚ್ಚು ಶ್ರಮಿಸಿದ್ದರು. ಆದರೆ ಇದೀಗ ಏಕಾಏಕಿ ಈ ನಾಲ್ವರ ವರ್ಗಾವಣೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇವರುಗಳು KAS ವೃಂದಕ್ಕೆ ಸೇರಿದವರಲ್ಲ ಎಂಬ ಕಾರಣವೊಡ್ಡಿ ಈ ನಾಲ್ವರೂ ಜಂಟಿ […]

ಮಹಾಮಾರಿ ತಡೆಗಟ್ಟುವಲ್ಲಿ ಭಾರೀ ಶ್ರಮಿಸಿದ್ದ 4 ಜಂಟಿ‌ ಆಯುಕ್ತರು ಏಕಾಏಕಿ ವರ್ಗ?
ಬಿಬಿಎಂಪಿ
Follow us on

ಬೆಂಗಳೂರು: BBMPಯ ನಾಲ್ವರು ಜಂಟಿ ಆಯುಕ್ತರ ವರ್ಗಾವಣೆ ಅಂತಿಮ ಹಂತಕ್ಕೆ ಬಂದಿದೆ. ಬಿಬಿಎಂಪಿ ನಾಲ್ಕು ವಲಯಗಳಾದ ಪಶ್ಚಿಮ ವಲಯ, ದಕ್ಷಿಣ ವಲಯ, ದಾಸರಹಳ್ಳಿ ವಲಯ, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡುವ ಮುನ್ಸೂಚನೆ ದೊರೆತಿದೆ.

ಇವರು ಕೊರೊನಾ‌ ಮಹಾಮಾರಿ ತಡೆಗಟ್ಟುವಲ್ಲಿ ಹೆಚ್ಚು ಶ್ರಮಿಸಿದ್ದರು. ಆದರೆ ಇದೀಗ ಏಕಾಏಕಿ ಈ ನಾಲ್ವರ ವರ್ಗಾವಣೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇವರುಗಳು KAS ವೃಂದಕ್ಕೆ ಸೇರಿದವರಲ್ಲ ಎಂಬ ಕಾರಣವೊಡ್ಡಿ ಈ ನಾಲ್ವರೂ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇಂದು ಅಥವಾ ನಾಳೆ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.