ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ, ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ!

ಬೆಂಗಳೂರು: ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಕೊರೊನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಕೋಟಿ ಕೋಟಿ ಗುಳುಂ ಆಗ್ತಿದೆ. ಟಿವಿ9ನಲ್ಲಿ ದಾಖಲೆಗಳ ಸಮೇತ ಆರೋಗ್ಯ ಇಲಾಖೆ ಕರ್ಮಕಾಂಡ ಬಯಲು ಮಾಡಲಾಗಿದೆ. ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಭ್ರಷ್ಟಾಚಾರವಾಗುತ್ತಿದೆಯಂತೆ. ಕೋಟಿ ಕೋಟಿ ಕೊಟ್ಟು ಕೆಡಿಎಲ್‌ಡಬ್ಲ್ಯೂಎಸ್‌ನಿಂದ ಸ್ಯಾನಿಟೈಸರ್ ಖರೀದಿ ಮಾಡಲಾಗುತ್ತಿದೆ. KDLWS-ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ 21 ಕೋಟಿ 40 ಲಕ್ಷದ 80 ಸಾವಿರದ 352 ರೂ. ಮೌಲ್ಯದ […]

ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ, ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 27, 2020 | 10:11 AM

ಬೆಂಗಳೂರು: ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಕೊರೊನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಕೋಟಿ ಕೋಟಿ ಗುಳುಂ ಆಗ್ತಿದೆ. ಟಿವಿ9ನಲ್ಲಿ ದಾಖಲೆಗಳ ಸಮೇತ ಆರೋಗ್ಯ ಇಲಾಖೆ ಕರ್ಮಕಾಂಡ ಬಯಲು ಮಾಡಲಾಗಿದೆ.

ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಭ್ರಷ್ಟಾಚಾರವಾಗುತ್ತಿದೆಯಂತೆ. ಕೋಟಿ ಕೋಟಿ ಕೊಟ್ಟು ಕೆಡಿಎಲ್‌ಡಬ್ಲ್ಯೂಎಸ್‌ನಿಂದ ಸ್ಯಾನಿಟೈಸರ್ ಖರೀದಿ ಮಾಡಲಾಗುತ್ತಿದೆ. KDLWS-ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ 21 ಕೋಟಿ 40 ಲಕ್ಷದ 80 ಸಾವಿರದ 352 ರೂ. ಮೌಲ್ಯದ ಸ್ಯಾನಿಟೈಸರ್ ಖರೀದಿ ಮಾಡಿದೆ.

ಇದರಲ್ಲಿ 13 ಕೋಟಿ 6 ಲಕ್ಷದ 40 ಸಾವಿರದ 394 ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಸುಮಾರು ಐದು ಕಂಪನಿಗಳೊಂದಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಸ್ಯಾನಿಟೈಸರ್ ಡೀಲ್ ಮಾಡಿತ್ತು. ಕೇವಲ 500 ML ಸ್ಯಾನಿಟೈಸರ್‌ಗೆ ₹250 ರೂಪಾಯಿ ಕೊಟ್ಟು ಖರೀದಿ ಮಾಡಿದೆ.

ಹೆಚ್ಚು ದರ ನಿಗದಿಯಾಗಿದ್ದಲ್ಲೇ ಖರೀದಿ: ಪ್ರತಿ 500 ML ಸ್ಯಾನಿಟೈಸರ್‌ಗೆ 152 ರೂಪಾಯಿ 56 ಪೈಸೆ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದೆ. ಕ್ವಾಂಟಿಟಿ ಹೆಚ್ಚಾಗಿ ತೆಗೆದುಕೊಂಡ್ರೆ ದರ ಕಡಿಮೆಯಾಗುತ್ತೆ. ಆದ್ರೆ ಕೆಡಿಎಲ್‌ಡಬ್ಲ್ಯೂಎಸ್‌ ಅದ್ಯಾವುದನ್ನು ಲೆಕ್ಕಿಸದೇ ಖರೀದಿ ಮಾಡಿದೆ.

ಎಸ್.ಎಂ. ಫಾರ್ಮಾ ಟೆಂಡರ್‌ನಲ್ಲಿ ಕಡಿಮೆ ದರಕ್ಕೆ ಸ್ಯಾನಿಟೈಸರ್‌ ಪೂರೈಸಲು ಬಿಡ್ ಮಾಡಿದೆ. ಕಂಪನಿ 500 ML ಸ್ಯಾನಿಟೈಸರ್‌ಗೆ 97 ರೂಪಾಯಿ 44 ಪೈಸೆಗೆ ಸಪ್ಲೈ ಮಾಡ್ತಿತ್ತು. ನಂತರ ಎಸ್.ಎಂ. ಫಾರ್ಮಾ ಸ್ಯಾನಿಟೈಸರ್ ದರ ಹೆಚ್ಚಾಗಿದೆ ಎಂದು ಅರ್ಧಕ್ಕೆ ಸಪ್ಲೈ ನಿಲ್ಲಿಸಿತ್ತು.

ಟೆಂಡರ್‌ನಲ್ಲಿ ಎಲ್-1 ಆಗಿದ್ದ ಎಸ್.ಎಂ. ಫಾರ್ಮಾ. ಸ್ಯಾನಿಟೈಸರ್ ಪೂರೈಕೆ ನಿಲ್ಲಿಸಿದ್ರೂ ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಕಂಪನಿ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಪುನಃ ಅದೇ ಕಂಪನಿಯಿಂದ 500ML ಸ್ಯಾನಿಟೈಸರ್‌ಗೆ ₹250 ಕೊಟ್ಟು ಖರೀದಿ ಮಾಡಿದ್ದಾರೆ. 500MLಗೆ 97 ರೂಪಾಯಿ 44 ಪೈಸೆ ಬದಲು ₹250 ಕೊಟ್ಟು ಖರೀದಿ ಮಾಡಿದ್ದಾರೆ. ಎಸ್.ಎಂ. ಫಾರ್ಮಾದಲ್ಲಿ ಸ್ಯಾನಿಟೈಸರ್‌ ದುಬಾರಿಯಾದ್ರು ತಲೆಕೆಡಿಸಿಕೊಂಡಿಲ್ಲ.

ಕೆಡಿಎಲ್‌ಡಬ್ಲ್ಯೂಎಸ್‌ ಟೆಂಡರ್‌ನಲ್ಲಿ ಎಲ್-2 ಆಗಿದ್ದ ರಮಣ & ವೈಲ್ ಕಂಪನಿಗೆ ಸ್ಯಾನಿಟೈಸರ್‌ ಆರ್ಡರ್ ನೀಡಿಲ್ಲ. ಈ ಕಂಪನಿಯಲ್ಲಿ 500ML ಸ್ಯಾನಿಟೈಸರ್‌ಗೆ ಕೇವಲ 99 ರೂಪಾಯಿ ದರವಿದ್ರೂ ಆರ್ಡರ್ ನೀಡಿಲ್ಲ. ತಮಗೆ ಬೇಕಾದ ಕಂಪನಿಯಿಂದ ಸ್ಯಾನಿಟೈಸರ್‌ ತರಿಸಿಕೊಳ್ಳುತ್ತಿದೆ. 9 ದಿನಗಳ ಮುಂಚೆ ಲೈಸೆನ್ಸ್ ಪಡೆದಿದ್ದ ಕಂಪನಿಗೆ ಸ್ಯಾನಿಟೈಸರ್‌ಗಾಗಿ ಆರ್ಡರ್ ನೀಡಲಾಗುತ್ತಿದೆ. ಹೈದರಾಬಾದ್ ಮೂಲದ ಸ್ಪೇ ಅಗ್ರೋ ಕಂಪನಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಸಪ್ಲೈ ನೀಡಿಲ್ಲ. 3 ವರ್ಷಗಳ ಅನುಭವವೂ ಇಲ್ಲದ ಕಂಪನಿಗೆ ಆರ್ಡರ್ ನೀಡಿದೆ.

ಸರ್ಕಾರದ ಬೊಕ್ಕಸಕ್ಕೆ 11 ಕೋಟಿ ನಷ್ಟ: ಎಸ್‌.ಎಂ ಫಾರ್ಮಾದಲ್ಲಿ 500ML ಸ್ಯಾನಿಟೈಸರ್‌ಗೆ 250 ರೂಪಾಯಿ. 5 ಲೀಟರ್‌ನ 1 ಕ್ಯಾನ್‌ಗೆ ₹2500 ನೀಡಿ ಸ್ಯಾನಿಟೈಸರ್‌ ಖರೀದಿ. ಕೆಡಿಎಲ್‌ಡಬ್ಲ್ಯೂಎಸ್‌ 5 ಲೀಟರ್‌ನ 75 ಸಾವಿರ ಕ್ಯಾನ್ ಖರೀದಿಸಿದೆ. 18 ಕೋಟಿ 75 ಲಕ್ಷ ರೂಪಾಯಿ ನೀಡಿ ಸ್ಯಾನಿಟೈಸರ್ ಖರೀದಿ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 11 ಕೋಟಿ ರೂಪಾಯಿ ನಷ್ಟವಾಗಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ