ತೆರಿಗೆ ವಂಚಿಸಲು ಈ ಐಷಾರಾಮಿ ಬಸ್ ಮಾಲೀಕ ಮಾಡಿದ್ದೇನು ಗೊತ್ತಾ?
ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ […]
ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ.
ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ ರವಿಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಒಂದೇ ನೋಂದಣಿಯ ಎರಡೂ ಎರಡು ಐಷಾರಾಮಿ ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮೈಸೂರು ಜೆ.ಎಲ್.ಬಿ ರಸ್ತೆಯ ಪೆಟ್ರೋಲ್ ಬಂಕ್ನಲ್ಲಿ ನಿಲುಗಡೆಯಾಗಿದ್ದ ಒಂದು ಬಸ್ ಹಾಗೂ ನಂಜನಗೂಡು ಪಟ್ಟಣದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿದ್ದ ಮತ್ತೊಂದು ಬಸ್ ಅನ್ನು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಆರ್ಟಿಓ ಕಚೇರಿಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಪತ್ರ ಬರೆದಿದ್ದಾರೆ.