ಕೆ.ಆರ್. ಮಾರ್ಕೆಟ್ ತೆರೆಯಲು ಸಿಗುತ್ತಾ ಗ್ರೀನ್ ಸಿಗ್ನಲ್?
ಬೆಂಗಳೂರು: ಕೊರೊನಾ ಭೀತಿ ನಡುವೆಯೂ ಬೆಂಗ್ಳೂರು ಯಥಾಸ್ಥಿತಿಗೆ ಮರಳ್ತಾ ಇದೆ. ಒಂದ್ಕಡೆ ಪ್ರತಿದಿನ ಸಾವಿರಾರು ಕೇಸ್ಗಳು ದಾಖಲಾಗ್ತಿವೆ. ಇನ್ನೊಂದೆಡೆ ವ್ಯಾಪಾರ ವಹಿವಾಟು ನಡೀತಾನೇ ಇದೆ. ಆದ್ರೆ ಕಳೆದ ಆರು ತಿಂಗಳಿಂದಲೂ ನಗರದ ವ್ಯಾಪಾರ ಕೇಂದ್ರವಾಗಿದ್ದ ಕೆಆರ್ ಮಾರ್ಕೆಟ್ ಸ್ತಬ್ಧವಾಗಿತ್ತು. ಸದ್ಯ ಮಾರ್ಕೆಟ್ಗೂ ಓಪನ್ ಭಾಗ್ಯ ಬಂದಿದೆ. ಅನುಮತಿ ನೀಡಲು ಬಿಬಿಎಂಪಿಯಿಂದ ನಡೆದಿದ್ಯಾ ಸಿದ್ಧತೆ? ಡೆಡ್ಲಿ ವೈರಸ್ ಕೊರೊನಾ ಅಟ್ಟಹಾಸದಿಂದಾಗಿ 6ತಿಂಗಳಿನಿಂದ ಕೆ.ಆರ್. ಮಾರ್ಕೆಟ್ ಬಂದ್ ಆಗಿತ್ತು. ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡ್ತಾ ಜೀವನ ಸಾಗಿಸುತ್ತಿದ್ದ ಸಾವಿರಾರು ಜನರ ಬದುಕು […]
ಬೆಂಗಳೂರು: ಕೊರೊನಾ ಭೀತಿ ನಡುವೆಯೂ ಬೆಂಗ್ಳೂರು ಯಥಾಸ್ಥಿತಿಗೆ ಮರಳ್ತಾ ಇದೆ. ಒಂದ್ಕಡೆ ಪ್ರತಿದಿನ ಸಾವಿರಾರು ಕೇಸ್ಗಳು ದಾಖಲಾಗ್ತಿವೆ. ಇನ್ನೊಂದೆಡೆ ವ್ಯಾಪಾರ ವಹಿವಾಟು ನಡೀತಾನೇ ಇದೆ. ಆದ್ರೆ ಕಳೆದ ಆರು ತಿಂಗಳಿಂದಲೂ ನಗರದ ವ್ಯಾಪಾರ ಕೇಂದ್ರವಾಗಿದ್ದ ಕೆಆರ್ ಮಾರ್ಕೆಟ್ ಸ್ತಬ್ಧವಾಗಿತ್ತು. ಸದ್ಯ ಮಾರ್ಕೆಟ್ಗೂ ಓಪನ್ ಭಾಗ್ಯ ಬಂದಿದೆ.
ಅನುಮತಿ ನೀಡಲು ಬಿಬಿಎಂಪಿಯಿಂದ ನಡೆದಿದ್ಯಾ ಸಿದ್ಧತೆ? ಡೆಡ್ಲಿ ವೈರಸ್ ಕೊರೊನಾ ಅಟ್ಟಹಾಸದಿಂದಾಗಿ 6ತಿಂಗಳಿನಿಂದ ಕೆ.ಆರ್. ಮಾರ್ಕೆಟ್ ಬಂದ್ ಆಗಿತ್ತು. ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡ್ತಾ ಜೀವನ ಸಾಗಿಸುತ್ತಿದ್ದ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿತ್ತು. ಅದ್ಯಾವಾಗ ಕೊರೊನಾ ಹೋಗುತ್ತೋ, ನಾವ್ ಯಾವಾಗ ವ್ಯಾಪಾರ ಶುರುಮಾಡ್ತೀವೋ ಅಂತಾ ಆಸೆಗಣ್ಣಿನಿಂದ ಕಾಯುತ್ತಿದ್ದ ವ್ಯಾಪಾರಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿಯೊಂದು ಸಿಗಲಿದೆ.
ರೈತಪರ ಸಂಘಟನೆಗಳು ಸೆಪ್ಟೆಂಬರ್ 1ರಿಂದ ಕೆ.ಆರ್. ಮಾರ್ಕೆಟ್‌ನಲ್ಲಿ ವ್ಯಾಪಾರ ನಡೆಸೋಕೆ ಅವಕಾಶ ಕೊಡಿ ಪ್ರತಿಭಟನೆ ನಡೆಸಿದ್ವು. ಇದರ ಬೆನ್ನಲ್ಲೇ ಬಿಬಿಎಂಪಿ ಕೆ.ಆರ್. ಮಾರ್ಕೆಟ್ ತೆರೆಯಲು ತಯಾರಿ ನಡೆಸಿದೆ. ಸೆಪ್ಟೆಂಬರ್ 1ರಿಂದ ಮಾರ್ಕೆಟ್ ಆರಂಭಿಸಲು ಗ್ರೀನ್ ಸಿಗ್ನಲ್ ನೀಡೋ ಸಾಧ್ಯತೆಯಿದೆ. ಈಗಾಗಲೇ ಬಿಬಿಎಂಪಿಯ ಪೌರಕಾರ್ಮಿರು ಇಡೀ ಮಾರ್ಕೆಟ್ ಸ್ವಚ್ಛಗೊಳಿಸಿದ್ದಾರೆ.
ಅಷ್ಟೇ ಅಲ್ಲ ಫ್ಯೂಮಿಗೇಟ್ ಮಾಡಿದ ಬಳಿಕ ವ್ಯಾಪಾರಿಗಳು ಎಲ್ಲೆಲ್ಲಿ ವ್ಯಾಪಾರ ನಡೆಸ್ಬಹುದು ಅನ್ನೋ ಬಗ್ಗೆ ಅಧಿಕಾರಿಗಳೇ ತಿಳಿಸಲಿದ್ದಾರೆ. ಒಂದು ಸ್ಟಾಲ್‌ನಿಂದ ಮತ್ತೊಂದು ಸ್ಟಾಲ್‌ಗೆ ಅಂತರ ಕಡ್ಡಾಯವಾಗಿದೆ. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಮಾರ್ಕೆಟ್‌ೆಗೆ ಬರ್ತಾರೆ. ಹೀಗಾಗಿ ಸರ್ಕಾರದ ರೂಲ್ಸ್ ಇಲ್ಲಿ ಫಾಲೋ ಆಗುತ್ತಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
ಇನ್ನು ವ್ಯಾಪಾರಿಗಳ ಮನವೊಲಿಸೋದೆ ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ. ಯಾಕಂದ್ರೆ ಮಾರ್ಕೆಟ್‌ನಲ್ಲಿ ಸುಮಾರು 2200 ಜನ ವ್ಯಾಪಾರಿಗಳಿದ್ದಾರೆ. ಆದ್ರೆ ಏಕಾಏಕಿ ಅಷ್ಟೂ ಜನ್ರಿಗೂ ವ್ಯಾಪಾರ ಮಾಡೋಕೆ ಅವಕಾಶ ಕೊಡೋದು ಅಸಾಧ್ಯ. ಹೀಗಾಗಿ ವ್ಯಾಪಾರಿಗಳು, ಬಿಬಿಎಂಪಿ ಆಫೀಸರ್ಸ್ ತಮಗೆ ಬೇಕಾದವ್ರಿಗೆ ಮಾತ್ರ ವ್ಯಾಪಾರ ಮಾಡೋಕೆ ಅವಕಾಶ ಕೊಡ್ತಾರೆ ಅನ್ನೋ ಆರೋಪ ಕೂಡ ಇದೆ. ಹಾಗಾಗಿ ಮೂಲ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಮಾಡಿ ಕೊಡ್ಬೇಕು ಅಂತಿದ್ದಾರೆ.
ಒಟ್ನಲ್ಲಿ ಕೆ.ಆರ್ ಮಾರ್ಕೆಟ್ ಆರಂಭವಾದ್ರೆ ವ್ಯಾಪಾರಿಗಳಿಗೆ ಅನುಕೂಲ. ಗ್ರಾಹಕರಿಗೂ ಉಪಯೋಗ ಆಗುತ್ತೆ. ಆದ್ರೆ ಅಪ್ಪಿತಪ್ಪಿ ಸ್ವಲ್ಪ ಯಾಮಾರಿದ್ರೂ ಸಮಸ್ಯೆ ಗ್ಯಾರಂಟಿ. ಈ ರೀತಿ ಆಗ್ಬಾರದು ಅಂದ್ರೆ ಬಿಬಿಎಂಪಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಕೆ.ಆರ್ ಮಾರ್ಕೆಟ್ ತೆರೆಯಲು ಅವಕಾಶ ಕೊಡಬೇಕು. ಇಲ್ಲವಾದ್ರೆ ಕೊರೊನಾ ಮನೆ ಬಾಗಿಲಿಗೆ ಬರುತ್ತೆ.