AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಿಂದ ಚಿನ್ನ, ಒಡವೆ ಮತ್ತು ಹೆಂಡ್ತಿಯನ್ನೂ ದೋಚಿ.. ಪೊಲೀಸ್​ ಪೇದೆ ಗ್ರೇಟ್ ಎಸ್ಕೇಪ್​!

ಚಾಮರಾಜನಗರ: ಸಾರ್ವಜನಿಕರನ್ನು ರಕ್ಷಿಸಬೇಕಿರುವ ಆರಕ್ಷಕನೇ ಕಂಡವರ ಪತ್ನಿ ಜೊತೆ ಎಸ್ಕೇಪ್​ ಆಗಿರೋ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯದ ಹಲಗೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಎಂಬ ಪೇದೆ ಮುಳ್ಳೂರು ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪನ ಪತ್ನಿ ಶಿಲ್ಪಾಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ. ಇದಲ್ಲದೆ, ತಾವಿಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸೆಕ್ಸ್​ ವಿಡಿಯೋ ಸಹ ಮಾಡಿದ್ದನಂತೆ. ಈ ವಿಡಿಯೋ ಇಟ್ಕೊಂಡು ಹರೀಶ್, ನಾಗರಾಜಪ್ಪ ಮತ್ತು ಶಿಲ್ಪಾರನ್ನ ಬ್ಲ್ಯಾಕ್​ಮೇಲ್ ಮಾಡಲು ಆರಂಭಿಸಿದ್ದ ಎಂದು […]

ಗಂಡನಿಂದ ಚಿನ್ನ, ಒಡವೆ ಮತ್ತು ಹೆಂಡ್ತಿಯನ್ನೂ ದೋಚಿ.. ಪೊಲೀಸ್​ ಪೇದೆ ಗ್ರೇಟ್ ಎಸ್ಕೇಪ್​!
KUSHAL V
| Updated By: ಸಾಧು ಶ್ರೀನಾಥ್​|

Updated on:Aug 27, 2020 | 11:05 AM

Share

ಚಾಮರಾಜನಗರ: ಸಾರ್ವಜನಿಕರನ್ನು ರಕ್ಷಿಸಬೇಕಿರುವ ಆರಕ್ಷಕನೇ ಕಂಡವರ ಪತ್ನಿ ಜೊತೆ ಎಸ್ಕೇಪ್​ ಆಗಿರೋ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯದ ಹಲಗೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಎಂಬ ಪೇದೆ ಮುಳ್ಳೂರು ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪನ ಪತ್ನಿ ಶಿಲ್ಪಾಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ. ಇದಲ್ಲದೆ, ತಾವಿಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸೆಕ್ಸ್​ ವಿಡಿಯೋ ಸಹ ಮಾಡಿದ್ದನಂತೆ.

ಈ ವಿಡಿಯೋ ಇಟ್ಕೊಂಡು ಹರೀಶ್, ನಾಗರಾಜಪ್ಪ ಮತ್ತು ಶಿಲ್ಪಾರನ್ನ ಬ್ಲ್ಯಾಕ್​ಮೇಲ್ ಮಾಡಲು ಆರಂಭಿಸಿದ್ದ ಎಂದು ನಾಗರಾಜಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.

ದಂಪತಿಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕಾನ್ಸ್​ಟೇಬಲ್​ ಹರೀಶ, ಅವರಿಬ್ಬರಿಂದ 50 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂಪಾಯಿ ನಗದನ್ನ ಸಹ ಪಡೆದಿದ್ದನಂತೆ. ಇದೀಗ, ಇಡೀ ಬ್ಲ್ಯಾಕ್​ಮೇಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಹರೀಶ್​, ಶಿಲ್ಪಾಳ ಜೊತೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಆಘಾತಗೊಂಡ ನಾಗರಾಜಪ್ಪ, ಪೇದೆ ಹರೀಶ್​ ವಿರುದ್ಧ ಕೊಳ್ಳೇಗಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ. ಆದರೆ, ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ಥ ತನ್ನ ಅಳಲು ತೋಡಿಕೊಂಡಿದ್ದಾನೆ.

ಬಳಿಕ ದಕ್ಷಿಣ ವಲಯದ ಐಜಿಪಿ ಮತ್ತು ಜಿಲ್ಲಾ ಎಸ್​.ಪಿ.ಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರಂತೆ. ಆದರೆ, ಈ ನಡುವೆ ಹರೀಶ, ನೀನು ದೂರು ನೀಡಿದರೆ ಕೊಲೆ ಮಾಡುತ್ತೇನೆ ಎಂದು ನಾಗರಾಜಪ್ಪನಿಗೆ ಬೆದರಿಕೆ ಒಡ್ಡುತ್ತಿದ್ದಾನಂತೆ. ಒಟ್ನಲ್ಲಿ, ಇಡೀ ಪ್ರಸಂಗದಿಂದ ನಾಗರಾಜಪ್ಪ ಮತ್ತು ಆತನ ಇಬ್ಬರ ಮಕ್ಕಳು ಗೋಳು ಹೇಳತೀರದಾಗಿದೆ.

Published On - 11:04 am, Thu, 27 August 20