ಮೃತ ಕೊರೊನಾ ವಾರಿಯರ್​ ಕುಟುಂಬಕ್ಕೆ 5 ಲಕ್ಷ ಪರಿಹಾರ

ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ 108 ಌಂಬುಲೆನ್ಸ್​ ಚಾಲಕನ ಕುಟುಂಬಕ್ಕೆ ಸರ್ಕಾರ 5ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಮೃತ ಕೊರೊನಾ ವಾರಿಯರ್​ ಕುಟುಂಬದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕೊವಿಡ್ ವಾರಿಯರ್ ಮೃತಪಟ್ರೂ ನೆರವಿಗೆ ನಿಲ್ಲದ ಸರ್ಕಾರ, ತಾಳಿ ಅಡವಿಟ್ಟು ಪತಿಯ ಕಾರ್ಯ ಮೇ 27ರಂದು 108 ಌಂಬುಲೆನ್ಸ್​ ಚಾಲಕ ಕೊಣ್ಣೂರು ಗ್ರಾಮದ ಉಮೇಶ್(37)​ ಮೃತಪಟ್ಟಿದ್ದರು. ಮೃತ ಚಾಲಕನ ಕುಟುಂಬವನ್ನು ಜಿಲ್ಲಾಡಳಿತ ಭೇಟಿಯಾಗಿರಲಿಲ್ಲ. ಸೌಜನ್ಯಕ್ಕೂ ಅಧಿಕಾರಿಗಳಾಗಲಿ, […]

ಮೃತ ಕೊರೊನಾ ವಾರಿಯರ್​ ಕುಟುಂಬಕ್ಕೆ 5 ಲಕ್ಷ ಪರಿಹಾರ
ಆಯೇಷಾ ಬಾನು

Updated on: Jun 02, 2020 | 7:22 PM

ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ 108 ಌಂಬುಲೆನ್ಸ್​ ಚಾಲಕನ ಕುಟುಂಬಕ್ಕೆ ಸರ್ಕಾರ 5ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಮೃತ ಕೊರೊನಾ ವಾರಿಯರ್​ ಕುಟುಂಬದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನಂತರ ಎಚ್ಚೆತ್ತ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕೊವಿಡ್ ವಾರಿಯರ್ ಮೃತಪಟ್ರೂ ನೆರವಿಗೆ ನಿಲ್ಲದ ಸರ್ಕಾರ, ತಾಳಿ ಅಡವಿಟ್ಟು ಪತಿಯ ಕಾರ್ಯ
ಮೇ 27ರಂದು 108 ಌಂಬುಲೆನ್ಸ್​ ಚಾಲಕ ಕೊಣ್ಣೂರು ಗ್ರಾಮದ ಉಮೇಶ್(37)​ ಮೃತಪಟ್ಟಿದ್ದರು. ಮೃತ ಚಾಲಕನ ಕುಟುಂಬವನ್ನು ಜಿಲ್ಲಾಡಳಿತ ಭೇಟಿಯಾಗಿರಲಿಲ್ಲ. ಸೌಜನ್ಯಕ್ಕೂ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಸಾಂತ್ವನ ಹೇಳಿರಲಿಲ್ಲ. ಮೃತನ ಹೆಂಡತಿ ತನ್ನ ತಾಳಿ ಅಡವಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಮೃತ ಚಾಲಕನ ಕುಟುಂಬದ ಪರಿಸ್ಥಿತಿ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು.ನಂತರ ವರದಿ ಗಮನಿಸಿ ಸಿಎಂ ಬಿಎಸ್ ಯಡಿಯೂರಪ್ಪ ಮೃತ ಌಂಬುಲೆನ್ಸ್​ ಚಾಲಕನ ಪತ್ನಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಸದ್ಯ ಮೃತ ಉಮೇಶ್ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡಿದೆ.

Published On - 4:13 pm, Tue, 2 June 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us