ಗ್ರಾಮ ಪಂಚಾಯಿತಿ ಪಿಡಿಓನ ಕಮಿಷನ್ ದಂಧೆ ಆರೋಪ: 30-40 ಪರ್ಸಂಟೇಜ್​ ಕಮಿಷನ್ ಕೇಳಿರುವ ವಿಡಿಯೋ ವೈರಲ್

| Updated By: ವಿವೇಕ ಬಿರಾದಾರ

Updated on: Sep 16, 2022 | 3:36 PM

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ಪಿಡಿಓ ಬಹಿರಂಗವಾಗಿಯೇ 30 ರಿಂದ 40 ಪರ್ಸಂಟೇಜ್​ ಕಮಿಷನ್ ಕೇಳಿರುವ ವಿಡಿಯೋ ವೈರಲ್ ಆಗಿದೆ.

ಗ್ರಾಮ ಪಂಚಾಯಿತಿ ಪಿಡಿಓನ ಕಮಿಷನ್ ದಂಧೆ ಆರೋಪ: 30-40 ಪರ್ಸಂಟೇಜ್​ ಕಮಿಷನ್ ಕೇಳಿರುವ ವಿಡಿಯೋ ವೈರಲ್
ಗ್ರಾಮ ಪ.ಚಾಯತ್ ಕಾರ್ಯಾಲಯ ಪಾಮನಕಲ್ಲೂರು
Follow us on

ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ (Grampanchayat) ಪಿಡಿಓ (PDO) ಬಹಿರಂಗವಾಗಿಯೇ 30 ರಿಂದ 40 ಪರ್ಸಂಟೇಜ್​ ಕಮಿಷನ್ ಕೇಳಿರುವ ವಿಡಿಯೋ ವೈರಲ್ ಆಗಿದೆ. 15ನೇ ಹಣಕಾಸು ಯೋಜನೆಯ ಕಾಮಗಾರಿಯನ್ನು ಅಂತಿಮಗೊಳಿಸಲು ಪಿಡಿಓ ಅಮರೇಶಪ್ಪ ಖುಲ್ಲಂ ಖುಲ್ಲಾ ಕಮಿಷನ್ ಕೇಳಿದ್ದಾನೆ.

ಪಿಡಿಓ ಅಮರೇಶಪ್ಪನ ಕಮಿಷನ್ ದಂಧೆ ವಿಡಿಯೋ ವೈರಲ್ ಅದರೂ ಜಿಲ್ಲಾಡಳಿತ ಇನ್ನೂ ಕ್ರಮಕೈಗೊಂಡಿಲ್ಲ. ವಿಡಿಯೋದಲ್ಲಿ ಪಿಡಿಒ ಅಮರೇಶಪ್ಪ ಬೈಕ್ ಮೇಲೆ ಕುಳಿತಿ ಪೋನ್​ನಲ್ಲೇ ಡೀಲ್ ಮಾಡಿದ್ದಾನೆ.

ಅಮರೇಶಪ್ಪ ನಡು ರಸ್ತೆಯಲ್ಲಿಯೇ 15ನೇ ಹಣಕಾಸಿನಲ್ಲಿ ಒಂದು ಹಾಗೂ ಎರಡು ಅಂದರೆ 10-20 ಪರ್ಸಂಟೇಜ್ ಕೊಡುವಂತೆ ತಾಕೀತು ಮಾಡಿದ್ದಾನೆ. ಎರಡು ಪರ್ಸೆಂಟ್ ಆಗದಿದ್ದರೇ, ಒಂದು ಪರ್ಸೆಂಟೇಜ್ ಆದರೂ ಕೊಡುವಂತೆ ಕೇಳಿದ್ದಾನೆ. ಒಂದು ಪರ್ಸೆಂಟೆಜ್ ಅಂದರೆ ಇಬ್ಬರಿಗೆ ಹತ್ತು, ಹತ್ತು ಹೇಳೋಣ ಎಂದು ಬಹಿರಂಗವಾಗಿಯೇ ಡೀಲ್ ಮಾಡಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ