ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಾವು: ಇಬ್ಬರು ಸದಸ್ಯರು ನಾಪತ್ತೆ, ಅಪಹರಣ ಶಂಕೆ
ತಾಲೂಕಿನ ಹುತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಳಲಿ ಗ್ರಾಮದ ಮಂಜುಳಾ ಹಾಗೂ ಪಿಳ್ಳಮ್ಮ ಎಂಬುವವರು ಜನವರಿ 20ರಂದು ಓಂಶಕ್ತಿ ದೇಗುಲಕ್ಕೆ ಹೋದವರು ನಾಪತ್ತೆಯಾಗಿದ್ದಾರೆ.
ಕೋಲಾರ: ದೇವಸ್ಥಾನಕ್ಕೆ ತೆರಳಿದ್ದ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರು ನಾಪತ್ತೆಯಾಗಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅಪಹರಣ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ತಾಲೂಕಿನ ಹುತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಳಲಿ ಗ್ರಾಮದ ಮಂಜುಳಾ ಹಾಗೂ ಪಿಳ್ಳಮ್ಮ ಎಂಬುವವರು ಜನವರಿ 20ರಂದು ಓಂಶಕ್ತಿ ದೇಗುಲಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರನ್ನು ಅದೇ ಗ್ರಾಮದ ಸುನಿಲ್ ಬಾಬು ಹಾಗೂ ವಿಜಯ್ ಕುಮಾರ್ ಎಂಬುವವರು ಅಪಹರಣ ಮಾಡಿದ್ದಾರೆಂಬ ಆರೋಪ ಕೇಳಬಂದಿದ್ದು, ಪಿಳ್ಳಮ್ಮ ಪತಿ ಗೋವಿಂದಪ್ಪ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಜಿರೆ ಬಾಲಕನ ಕಿಡ್ನ್ಯಾಪ್ ಕೇಸ್: ಪರಿಚಿತನೇ ಹಾಕಿದ್ದ ಸ್ಕೆಚ್.. ಬಿಟ್ ಕಾಯಿನ್ ಪಡೆಯೋಕೆ ಇದೆಲ್ಲಾ ಸರ್ಕಸ್