ಸ್ನೇಹಿತನನ್ನು ಡ್ರಾಪ್ ಮಾಡಲು ಹೋದವ ಬರ್ಬರವಾಗಿ ಕೊಲೆಯಾದ
ದೇವನಹಳ್ಳಿ: ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಹೊರವಲಯದಲ್ಲಿ ನಡೆದಿದೆ. ದೊಡ್ಡಪನಹಳ್ಳಿ ನಿವಾಸಿ ರಾಜು (33) ಮೃತ ದುರ್ದೈವಿ. ಸ್ನೇಹಿತನನ್ನ ಡ್ರಾಪ್ ಕೊಡಲು ಬಂದಿದ್ದ ವೇಳೆ ಕಿರಿಕ್ ಮಾಡಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಾಜು ತನ್ನ ಗೆಳೆಯನಿಗೆ ಡ್ರಾಪ್ ಕೊಡಲು ಬಂದಿದ್ದ. ಈ ವೇಳೆ ಗಾಂಜಾ ಮತ್ತಿನಲ್ಲಿದ್ದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರಿಕ್ ಶುರು ಮಾಡಿದ್ದಾರೆ. ಕಿರಿಕ್ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದಕ್ಕೆ […]
ದೇವನಹಳ್ಳಿ: ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಹೊರವಲಯದಲ್ಲಿ ನಡೆದಿದೆ. ದೊಡ್ಡಪನಹಳ್ಳಿ ನಿವಾಸಿ ರಾಜು (33) ಮೃತ ದುರ್ದೈವಿ.
ಸ್ನೇಹಿತನನ್ನ ಡ್ರಾಪ್ ಕೊಡಲು ಬಂದಿದ್ದ ವೇಳೆ ಕಿರಿಕ್ ಮಾಡಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಾಜು ತನ್ನ ಗೆಳೆಯನಿಗೆ ಡ್ರಾಪ್ ಕೊಡಲು ಬಂದಿದ್ದ. ಈ ವೇಳೆ ಗಾಂಜಾ ಮತ್ತಿನಲ್ಲಿದ್ದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರಿಕ್ ಶುರು ಮಾಡಿದ್ದಾರೆ. ಕಿರಿಕ್ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದಕ್ಕೆ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.