ಮತ್ತದೇ ರಗಳೆ.. ಮಾಸ್ಕ್ ಹಾಕದ ಗುಂಪಿಂದ ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ

|

Updated on: May 04, 2020 | 5:52 PM

ಬೆಂಗಳೂರು: ಮತ್ತದೇ ರಗಳೆ ನಡೆದಿದೆ. ಕೊರೊನಾ ವಾರಿಯರ್ಸ್​ ಮೇಲೆ ಮತ್ತೆ ರಾತ್ರೋರಾತ್ರಿ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಸ್ಕ್ ಹಾಕದ ವ್ಯಕ್ತಿಯೊಬ್ಬ ಗುಂಪು ಕಟ್ಟಿಕೊಂಡು ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ. ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ನಿನ್ನೆ ರಾತ್ರಿ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಗುಂಪುಕೂಡಿ ಈ ಪುಂಡಾಟಿಕೆ ನಡೆಸಿದ್ದಾನೆ. ಬಿಬಿಎಂಪಿ […]

ಮತ್ತದೇ ರಗಳೆ.. ಮಾಸ್ಕ್ ಹಾಕದ ಗುಂಪಿಂದ ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ
Follow us on

ಬೆಂಗಳೂರು: ಮತ್ತದೇ ರಗಳೆ ನಡೆದಿದೆ. ಕೊರೊನಾ ವಾರಿಯರ್ಸ್​ ಮೇಲೆ ಮತ್ತೆ ರಾತ್ರೋರಾತ್ರಿ ಹಲ್ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಸ್ಕ್ ಹಾಕದ ವ್ಯಕ್ತಿಯೊಬ್ಬ ಗುಂಪು ಕಟ್ಟಿಕೊಂಡು ರಾತ್ರೋರಾತ್ರಿ ಮಾರ್ಷಲ್​ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ.

ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ:
ನಿನ್ನೆ ರಾತ್ರಿ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಗುಂಪುಕೂಡಿ ಈ ಪುಂಡಾಟಿಕೆ ನಡೆಸಿದ್ದಾನೆ. ಬಿಬಿಎಂಪಿ ಮಾರ್ಷಲ್​ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ರಾಣಿತ್ಯಾಜ್ಯ ಎಸೆಯದಂತೆ, ಮಾಸ್ಕ್ ಹಾಕದಂತೆ ಮೇಲ್ವಿಚಾರಣೆ ಮಾಡುತ್ತಿದ್ದಾಗ ಈ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಮಾರ್ಷಲ್ ಗಳ ಮೇಲೆ ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ.

ಮಾರ್ಷಲ್​ಗಳು ಮೋದಿ ಸರ್ಕಾರದ ಕಡೆಯವರಾ?:
ಅಬ್ದುಲ್ ರಜಾಕ್ ಹಾಗೂ ಗುಂಪಿನವರು ಮಾಸ್ಕ್ ಹಾಕದೇ ಓಡಾಡುತ್ತಿದ್ದರು. ಆ ವೇಳೆ ಪಾಲಿಕೆಯ ಮಾರ್ಷಲ್​ಗಳು ಅವರನ್ನ ಪ್ರಶ್ನಿಸಿ, ದಂಡ ಹಾಕಲು ಮುಂದಾಗಿದ್ದಾರೆ. ಆ ವೇಳೆ ದಂಡ ಹಾಕಲು ನೀವ್ಯಾರು, ನೀವೆಲ್ಲ ಮೋದಿ ಸರ್ಕಾರದವರು ಎಂದು ಬೈಯುವುದಕ್ಕೆ ಶುರು ಮಾಡಿದ್ದಾರೆ. ಸ್ಥಳೀಯರನ್ನೆಲ್ಲ ಕರೆದು ಹಲ್ಲೆ ಮಾಡಲು ಪ್ರೇರೇಪಿಸಿದ್ದಾನೆ. ಈ ಮಧ್ಯೆ, ದಂಡ ಹಾಕುವ ಮೆಷಿನ್, ದಂಡ ಹಾಕಿ ಸಂಗ್ರಹಿಸಿದ್ದ ಹಣವನ್ನೂ ಕೂಡಾ ಕಿತ್ತುಕೊಂಡಿದ್ದಾರೆ.

ಅಲ್ಲದೆ ಈ ವೇಳೆ ವೀಡಿಯೋ ಮಾಡುತ್ತಿದ್ದ ಮಾರ್ಷಲ್ ಕೆನ್ನೆಗೆ ಹೊಡೆದು ಪುಂಡಾಟಿಕೆ ಮಾಡಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿಯ ಚೀಫ್ ಮಾರ್ಷಲ್ ಆಫೀಸರ್ ರಜ್ ಬೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಕೆಲಸದ ಮೇಲಿದ್ದಾಗ ತೊಂದರೆ ಕೊಟ್ಟ ಕಾರಣ ಎಫ್ ಐರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ.