ಕೊರೊನಾದಿಂದ ಜಾತಿ ಮತಗಳ ಸಮಾಧಿ: ಮುಸ್ಲಿಮರೆ ಆ ವೃದ್ಧನ ಅಂತ್ಯಕ್ರಿಯೆ ಮಾಡಿದರು
ತುಮಕೂರು: ಮೃತ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿರುವ ಘಟನೆ ತುಮಕೂರಿನ ಕೆ.ಹೆಚ್.ಬಿ ಕಾಲೋನಿಯಲ್ಲಿ ನಡೆದಿದೆ. ಕೊರೊನಾ ವೈರೆಸ್ ಬೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿದೆ. ಈ ವೇಳೆ ಕೆ.ಹೆಚ್.ಬಿ ಕಾಲೋನಿ ನಿವಾಸಿ ಹೆಚ್.ಎಸ್ ನಾರಾಯಣರಾವ್ (60) ಸಹಜ ಸಾವನಪ್ಪಿದ್ದರು. ಮೃತರ ಕುಟುಂಬಸ್ಥರು ಲಾಕ್ಡೌನ್ ಇರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದ ಕಾರಣ ತಾವೇ ಅಂತ್ಯ ಸಂಸ್ಕಾರ ನೆರವೇರಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಕೊರೊನಾ ವಾರಿಯರ್ಸ್ಗಳಾದ ಮಹಮ್ಮದ್ ಖಲಿದ್, ಇಮ್ರಾನ್, ಶೇರು, ಶಾರುಖ್, ತೋಫಿಕ್ ಖತೀಬ್ […]
ತುಮಕೂರು: ಮೃತ ಹಿಂದೂ ವೃದ್ಧನ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿರುವ ಘಟನೆ ತುಮಕೂರಿನ ಕೆ.ಹೆಚ್.ಬಿ ಕಾಲೋನಿಯಲ್ಲಿ ನಡೆದಿದೆ. ಕೊರೊನಾ ವೈರೆಸ್ ಬೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿದೆ. ಈ ವೇಳೆ ಕೆ.ಹೆಚ್.ಬಿ ಕಾಲೋನಿ ನಿವಾಸಿ ಹೆಚ್.ಎಸ್ ನಾರಾಯಣರಾವ್ (60) ಸಹಜ ಸಾವನಪ್ಪಿದ್ದರು.
ಮೃತರ ಕುಟುಂಬಸ್ಥರು ಲಾಕ್ಡೌನ್ ಇರುವುದರಿಂದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಗದ ಕಾರಣ ತಾವೇ ಅಂತ್ಯ ಸಂಸ್ಕಾರ ನೆರವೇರಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಕೊರೊನಾ ವಾರಿಯರ್ಸ್ಗಳಾದ ಮಹಮ್ಮದ್ ಖಲಿದ್, ಇಮ್ರಾನ್, ಶೇರು, ಶಾರುಖ್, ತೋಫಿಕ್ ಖತೀಬ್ ಹಾಗೂ ಮನ್ಸೂರು ಸೇರಿ ಗಾರ್ಡನ್ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಈ ವೇಳೆ ಮೃತ ವೃದ್ಧನ ಪತ್ನಿ ಮಾತ್ರ ಭಾಗಿಯಾಗಿದ್ದರು.
Published On - 12:30 pm, Wed, 13 May 20