GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್​​ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್​ ಆಗಿರೋದು!

ಕಳೆದ ಮೂರು ತಿಂಗಳಿಂದ ಜಿಎಸ್​ಟಿ ಸಂಗ್ರಹಣೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅಕ್ಟೋಬರ್​, ನವೆಂಬರ್​ ಹಾಗೂ ಡಿಸೆಂಬರ್​ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹಣೆ 1 ಲಕ್ಷ ಕೋಟಿಯ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ಖುಷಿ ವ್ಯಕ್ತಪಡಿಸಿದೆ.

GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್​​ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್​ ಆಗಿರೋದು!
ಸಾಂದರ್ಭಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Jan 01, 2021 | 4:57 PM

ನವದೆಹಲಿ: ಡಿಸೆಂಬರ್​ ತಿಂಗಳ ಜಿಎಸ್​ಟಿ ಸಂಗ್ರಹಣೆ 1.15 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತ ಇದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಕಳೆದ ಮೂರು ತಿಂಗಳಿಂದ ಜಿಎಸ್​ಟಿ ಸಂಗ್ರಹಣೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅಕ್ಟೋಬರ್​, ನವೆಂಬರ್​ ಹಾಗೂ ಡಿಸೆಂಬರ್​ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹಣೆ 1 ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ಖುಷಿ ವ್ಯಕ್ತಪಡಿಸಿದೆ.

2020ರ ಡಿಸೆಂಬರ್​ನಲ್ಲಿ ಒಟ್ಟು 1,15,174 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ. ನವೆಂಬರ್​ನಲ್ಲಿ ಇದರ ಪ್ರಮಾಣ 1.04 ಲಕ್ಷ ಕೋಟಿ ಇತ್ತು. ನವೆಂಬರ್​ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.12 ​ ಏರಿಕೆ ಕಂಡಂತೆ ಆಗಿದೆ ಎಂದು ಸರ್ಕಾರ ತಿಳಿಸಿದೆ.

ಕಳೆದ 21 ತಿಂಗಳುಗಳಿಂದ ಮಾಸಿಕ ಆದಾಯದಲ್ಲಿ ಇದು ಅತ್ಯಧಿಕ ಸಂಗ್ರಹಣೆ ಆಗಿದೆ. ಕೊರೊನಾ ವೈರಸ್​, ನಕಲಿ ಬಿಲ್​ಗಳು ಸೇರಿದಂತೆ ಅನೇಕ ಕಾರಣಗಳಿಂದ ಜಿಎಸ್​ಟಿ ಸಂಗ್ರಹದಲ್ಲಿ ಕುಸಿತ ಕಂಡಿತ್ತು. ಜಿಎಸ್​ಟಿ ಪ್ರಕ್ರಿಯೆಲ್ಲಿ ನಾವು ಸಾಕಷ್ಟು ಬದಲಾವಣೆ ಮಾಡಿದ್ದೇವೆ ಎಂದು ಹಣಕಾಸು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.

2017ರ ಜುಲೈನಲ್ಲಿ ಜಿಎಸ್​ಟಿ ಜಾರಿಗೆ ಬಂದಿತ್ತು. ಡಿಸೆಂಬರ್​ 2020ರ ಜಿಎಸ್​ಟಿ ಸಂಗ್ರಹಣೆ ಅತ್ಯಂತ ಹೆಚ್ಚಿನ ಸಂಗ್ರಹಣೆ ಆಗಿದೆ. 2019ರ ಏಪ್ರಿಲ್​ನಲ್ಲಿ 1,13,866 ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು. ಇದು ಇತಿಹಾಸದಲ್ಲೇ ಅತ್ಯಧಿಕ ಜಿಎಸ್​ಟಿ ಕಲೆಕ್ಷನ್​ ಆಗಿದೆ. ಕಳೆದ ಏಪ್ರಿಲ್​ನಲ್ಲಿ ಕೇವಲ 32 ಸಾವಿರ ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು.

ನವೆಂಬರ್​ನಲ್ಲಿ ₹ 1.04 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us