ಚುನಾವಣೆ ವೇಳೆ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ತಪ್ಪು: JDS ಶಾಸಕ ಜಿ.ಟಿ. ದೇವೇಗೌಡ

|

Updated on: Oct 07, 2020 | 12:10 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ  ಬೆಂಗಳೂರಿನಲ್ಲಿಂದು JDS ಶಾಸಕ ಜಿ.ಟಿ. ದೇವೇಗೌಡ ಅವರು ಡಿಕೆ ಶಿವಕುಮಾರ್ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದರು. ಬಳಿಕ ಮಾತನಾಡಿದ ಜಿ.ಟಿ. ದೇವೇಗೌಡ, ಚುನಾವಣೆಯ ಸಂದರ್ಭದಲ್ಲಿ ದಾಳಿಗಳು ಆಗಬಾರದು. ಸಿಬಿಐ ದಾಳಿ ಮಾಡಿದ್ದು ತಪ್ಪು, ಇದು ನನ್ನ ಅಭಿಪ್ರಾಯ ಎಂದು ಹೇಳಿದರು. ರೈಡ್ ಆದ ಸಂದರ್ಭದಲ್ಲಿ ಅವರಿಗೆ ಮೀಟ್ ಮಾಡಬೇಕು. ಏಕೆಂದರೆ ಅವರು ನನ್ನ ಸ್ನೇಹಿತ. ನಾನು ಮತ್ತು ಡಿಕೆಶಿ ಬಹಳ ವರ್ಷಗಳಿಂದ […]

ಚುನಾವಣೆ ವೇಳೆ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ತಪ್ಪು: JDS ಶಾಸಕ ಜಿ.ಟಿ. ದೇವೇಗೌಡ
Follow us on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸ ಸೇರಿದಂತೆ ಹಲವೆಡೆ ಸಿಬಿಐ ದಾಳಿ ಹಿನ್ನೆಲೆಯಲ್ಲಿ  ಬೆಂಗಳೂರಿನಲ್ಲಿಂದು JDS ಶಾಸಕ ಜಿ.ಟಿ. ದೇವೇಗೌಡ ಅವರು ಡಿಕೆ ಶಿವಕುಮಾರ್ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದರು.

ಬಳಿಕ ಮಾತನಾಡಿದ ಜಿ.ಟಿ. ದೇವೇಗೌಡ, ಚುನಾವಣೆಯ ಸಂದರ್ಭದಲ್ಲಿ ದಾಳಿಗಳು ಆಗಬಾರದು. ಸಿಬಿಐ ದಾಳಿ ಮಾಡಿದ್ದು ತಪ್ಪು, ಇದು ನನ್ನ ಅಭಿಪ್ರಾಯ ಎಂದು ಹೇಳಿದರು.

ರೈಡ್ ಆದ ಸಂದರ್ಭದಲ್ಲಿ ಅವರಿಗೆ ಮೀಟ್ ಮಾಡಬೇಕು. ಏಕೆಂದರೆ ಅವರು ನನ್ನ ಸ್ನೇಹಿತ. ನಾನು ಮತ್ತು ಡಿಕೆಶಿ ಬಹಳ ವರ್ಷಗಳಿಂದ ಸ್ನೇಹಿತರು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದವರು. ಬಾಂಬೆಗೆ ಸಹ ಹೋಗಿದ್ವಿ. ಡಿಕೆಶಿ ಅವರ ಶ್ರೀಮತಿ ನಮ್ಮ ಮೈಸೂರಿನವರು ಎಂದು  ಜಿ.ಟಿ.ಡಿ. ಹೇಳಿದರು.

ನಾನು ನೋವಿನಲ್ಲಿದ್ದೇನೆಂದು ನನ್ನ ಹಿತೈಷಿಗಳಾದ ಜಿ.ಟಿ.ದೇವೇಗೌಡರು ನನ್ನನ್ನು ಭೇಟಿಯಾಗಿದ್ದಾರೆ. ರಾಜಕಾರಣವೇ ಬೇರೆ. ಸ್ನೇಹ, ವಿಶ್ವಾಸವೇ ಬೇರೆ. ನನಗೆ ಸಾಂತ್ವನ ಹೇಳಲು ಬಂದಿದ್ದರು ಎಂದು ಜಿ.ಟಿ. ದೇವೇಗೌಡರ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿಶಿವಕುಮಾರ್ ಪ್ರತಿಕ್ರಿಯೆ ನೀಡಿದರು.