ದೇಶದಲ್ಲೇ ಅತಿಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಗುಜರಾತ್ನಲ್ಲಿ ಪತ್ತೆಯಾಗಿವೆ
ಗುಜರಾತನಲ್ಲಿ ಬ್ಲ್ಯಾಕ್ ಫಂಗಸ್ ಪೀಡೆ ಜಾಸ್ತಿ ಹಬ್ಬುತ್ತಿದೆ. ಶನಿವಾರದಂದು ಲಭ್ಯವಾಗಿರುವ ಮಾಹಿತಿಯ ಪ್ರಕಾರ 2,281 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈ ರಾಜ್ಯದಲ್ಲಿ ಪತ್ತೆಯಾಗಿವೆ. ಇದುವರೆಗೆ 70 ಕ್ಕಿಂತ ಜಾಸ್ತಿ ಜನ ಇದಕ್ಕೆ ಬಲಿಯಾಗಿದ್ದಾರೆ. ನಮಗೆ ಗೊತ್ತಿರುವ ಹಾಗೆ ಕೊವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಲ್ಲಿ ಗುಜರಾತ್ ಸಹ ಒಂದಾಗಿದೆ.
ಮ್ಯೂಕರ್ಮೈಕೊಸಿಸ್ ಅಥವಾ ಬ್ಲ್ಯಾಕ್ ಫಂಗಸ್, ದೇಶದಾದ್ಯಂತ ಭೀತಿ ಮೂಡಿಸಿ ಕೊವಿಡ್ ಸೋಂಕಿನ ವಿರುದ್ಧ ಎಡಬಿಡದೆ ಹೋರಾಡುತ್ತಿರುವ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಕೊವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ಬೆಡ್ಗಳು ಸಿಗದ ಇಂದಿನ ಪರಿಸ್ಥಿಯಲ್ಲಿ ಬ್ಲ್ಯಾಕ್ ಫಂಗಸ್ ಅನ್ನು ಹೇಗೆ ನಿಭಾಯಿಸುವುದು ಅಂತ ವೈದ್ಯಲೋಕದ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಚಿಂತೆಗೀಡಾಗಿವೆ. ಗುಜರಾತನಲ್ಲಿ ಬ್ಲ್ಯಾಕ್ ಫಂಗಸ್ ಪೀಡೆ ಜಾಸ್ತಿ ಹಬ್ಬುತ್ತಿದೆ. ಶನಿವಾರದಂದು ಲಭ್ಯವಾಗಿರುವ ಮಾಹಿತಿಯ ಪ್ರಕಾರ 2,281 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈ ರಾಜ್ಯದಲ್ಲಿ ಪತ್ತೆಯಾಗಿವೆ. ಇದುವರೆಗೆ 70 ಕ್ಕಿಂತ ಜಾಸ್ತಿ ಜನ ಇದಕ್ಕೆ ಬಲಿಯಾಗಿದ್ದಾರೆ. ನಮಗೆ ಗೊತ್ತಿರುವ ಹಾಗೆ ಕೊವಿಡ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಲ್ಲಿ ಗುಜರಾತ್ ಸಹ ಒಂದಾಗಿದೆ.
ರಾಜ್ಯದ ದೊಡ್ಡ ನಗರಗಳಲ್ಲಿ ಒಂದಾಗಿರುವ ಅಹಮದಾಬಾದನಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಅತಿ ಹೆಚ್ಚು ಅಂದರೆ 35 ಜನ ಬಲಿಯಾಗಿದ್ದಾರೆ. ಉಳಿದೆಲ್ಲ ನಗರಗಳಿಗಿಂತ ಅಹಮದಾಬಾದ್ನಲ್ಲೇ ಅತಿಹೆಚ್ಚು ಸಾವಿಗಳು ವರದಿಯಾಗಿವೆ. ಗುಜರಾತಿನ ಸರ್ಕಾರೀ ಅಸ್ಪತ್ರೆಗಳಲ್ಲೇ ಒಂದು ಸಾವಿರಕ್ಕೂ ಅಧಿಕ ರೋಗಿಗಳು ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಹಮದಾಬಾದಿನ ಅಸರ್ವಾ ಸಿವಿಲ್ ಆಸ್ಪತ್ರೆ ಒಂದರಲ್ಲೇ ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿರುವ 371 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ ಜಿ ಆಸ್ಪತ್ರೆಯಲ್ಲಿ 50 ರೋಗಿಗಳಿದ್ದಾರೆ. ಆಗಲೇ ಹೇಳಿದಂತೆ ನಗರದಲ್ಲಿ 35 ಜನ ಇದಕ್ಕೆ ಬಲಿಯಾಗಿದ್ದಾರೆ.
ಅಂದಹಾಗೆ, ಭಾರತದಲ್ಲಿ ಇದುವರೆಗೆ 8,848 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು ಅತಿಹೆಚ್ಚು ರೋಗಿಗಳು ಗುಜರಾತನಲ್ಲಿದ್ದಾರೆ. ಗುಜರಾತ್ ನಂತರ ಎರಡನೇ ಸ್ಥಾನದಲ್ಲಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಇಲ್ಲಿ ಇದುವರೆಗೆ 2,000 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಆಂಧ್ರ ಪ್ರದೇಶದಲ್ಲಿ 910 ಕೇಸುಗಳು ವರದಿಯಾಗಿದ್ದರೆ, ಮಧ್ಯ ಪ್ರದೇಶದಲ್ಲಿ 720, ರಾಜಸ್ತಾನದಲ್ಲಿ 700, ಮತ್ತು ತೆಲಂಗಾಣದಲದಲಿ 35 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: Black Fungus: ಒಡಿಶಾದಲ್ಲಿ ಮ್ಯೂಕೋಮೈಕೋಸಿಸ್ ಮೊದಲ ಪ್ರಕರಣ ಪತ್ತೆ; ಕೊರೊನಾಗೆ ತುತ್ತಾಗಿದ್ದ ವೃದ್ಧ ವ್ಯಕ್ತಿಗೆ ಸೋಂಕು
ಇದನ್ನೂ ಓದಿ: Black Fungus Injectionಗಾಗಿ 11Lakh ಕೊಟ್ಟು ಮೋಸ ಹೋದ ಮಹಿಳೆ