ರಾಯಚೂರು: ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ 2023 ಮೇ ತಿಂಗಳಲ್ಲಿ ಬರಲಿದೆ. ಪಕ್ಷ ಕಟ್ಟಲು ನನ್ನ ಕಾಲ ವಿನಿಯೋಗ ಮಾಡುತ್ತೇನೆ. ಸರ್ಕಾರ ತೆಗೆಯುವ ಕೆಲಸದಲ್ಲಿ ನಾನು ಭಾಗಿಯಾಗಲ್ಲ. ಸರ್ಕಾರದ ಅಸ್ಥಿರತೆಗೆ ನಾನು ಅವಕಾಶ ಕೊಡಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು. ಅಲ್ಲದೇ ಪ್ರಾದೇಶಿಕ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುವೆ. ಅಧಿಕೃತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾರೆ. ನಮ್ಮಲ್ಲೂ 24 ಜನ ಶಾಸಕರಿದ್ದಾರೆ. ಜೆಡಿಎಸ್ ವಿಲೀನವಾಗುತ್ತದೆ ಅಂತೆಲ್ಲ ಹೇಳುತ್ತಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಅದು ಅವರವರ ಅಭಿಪ್ರಾಯ ಎಂದರು.
ಶೇ. 70ರಷ್ಟು ಸಾಲ ಮನ್ನ ಕಂಪ್ಲಿಟ್
ಕುಮಾರಸ್ವಾಮಿ ಸಿಎಂ ಆಗಲು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಗುಲಾಂ ನಬಿ ಆಜಾದ್ ಪಕ್ಷಾತೀತವಾಗಿ ಹೊರಗಡೆ ಹೊಡೆದಾಡಬಹುದು. ಆದರೆ ವ್ಯಕ್ತಿಗತವಾಗಿ ಹೊರಾಡಕ್ಕಾಗಲ್ಲ. ಅದೇ ರೀತಿ ಆಜಾದರವರು ಭಾವುಕರಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲು ಗುಲಾಂ ನಬಿ ಆಜಾದರವರೆ ಕಾರಣ ಎಂದು ಅಭಿಪ್ರಾಯಪಟ್ಟರು.
ಅಂದಿನ ಚುನಾವಣೆಯ ನಾಲ್ಕು ತಿಂಗಳ ಮುಂಚೆ ಹೃದಯಾಘಾತವಾಗಿದೆ. ಖರ್ಗೆ ಅವರೂ ಒಪ್ಪಿಕೊಂಡಿದ್ದರು. ಆದರೆ ಆಜಾದ್ ಅವರು ಸೋನಿಯಾ ಜತೆ ನಾನು ಮಾತಾಡದಂತೆ ನನ್ನನ್ನು ತಡೆದರು. ಕೆಲ ಕಾಂಗ್ರೆಸ್ನವರೂ ಬಿಜೆಪಿ ಜೊತೆ ಹೊಗಲು ರೆಡಿಯಾಗಿದ್ದರು. ನಂತರ ನಾನು ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದರು. ಕುಮಾರಸ್ವಾಮಿ ಚುನಾವಣೆಗೆ ಹೋಗುವಾಗ 2 ಲಕ್ಷದವರೆಗಿನ ರೈತರ ಸಾಲ ಮನ್ನ ಮಾಡುತ್ತೇನೆ ಅಂತಾ ಹೇಳಿದ್ದರು. ಕಾಂಗ್ರೆಸ್ 78 ಸ್ಥಾನದಲ್ಲಿದ್ದರು. ಆಗ ಬಿಜೆಪಿ ಸಾಲ ಮನ್ನ ಮಾಡಲೆಬೇಕಂತ ಹಠ ಹಿಡಿಯಿತು. ಆಗ ಸಿದ್ದರಾಮಯ್ಯ ಅಡ್ಡಿಪಡಿಸಿ ಮೊದಲು ತಮ್ಮ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನ ಮಾಡಿಕೊಳ್ಳಿ ಎಂದಿದ್ದರು. ರೈತರ 25,000 ಕೋಟಿ ರೂ. ಸಾಲ ಮನ್ನ ಮಾಡಲು ತೀರ್ಮಾನಿಸಲಾಗಿತ್ತು. ಈಗ ಶೇ. 70ರಷ್ಟು ಕಂಪ್ಲಿಟ್ ಆಗಿದೆ. ಇನ್ನುಳಿದಿದ್ದು ಪರಿಶೀಲನೆ ಹಂತದಲ್ಲಿದೆ. ಸದ್ಯ 10,000 ಕೋಟ ಸಾಲ ಮನ್ನ ಬಾಕಿ ಇದೆ ಎಂದು ದೇವೇಗೌಡರು ಹೇಳಿದರು.
ದೇವೇಗೌಡರ ಮೂರ್ತಿ
ನಾವೇ ತಪ್ಪು ಮಾಡಿದ್ದೆವು ಎಂದ ಹೆಚ್ಡಿಡಿ
ಪ್ರವಾಹ ಬಂದು ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಇದಕೆಲ್ಲ ಹಣ ಜೋಡಿಸಬೇಕು. ಕೊರೊನಾಗೂ ಹಣ ಜೋಡಿಸಬೇಕು. ಇದಕ್ಕಾಗಿ ಯಡಿಯೂರಪ್ಪನವರ ಬಗ್ಗೆ ಆರೋಪ ಮಾಡಲ್ಲ. ಪಕ್ಷ ಉಳಿಸುವುದಕ್ಕೆ ದೇಹದಲ್ಲಿ ಶಕ್ತಿ ಇರುವವರೆಗೂ ನಾನೊಬ್ಬನೆ ಅಲ್ಲ ನನ್ನ ಜೊತೆಗಿರುವ ಎಲ್ಲ ಸ್ನೆಹಿತರೂ ಶ್ರಮಿಸ್ತಾರೆ. ದತ್ತ, ಕೋನರೆಡ್ಡಿ ಸೇರಿದಂತೆ ಹಲವರು ನನ್ನ ಜೊತೆಗಿದ್ದಾರೆ. ಕರಿಯಮ್ಮ ಸ್ವತಂತ್ರವಾಗಿ ನಿಂತು ಸೋತರು ಕೂಡಾ ನಮ್ಮ ಜೊತೆಗಿದ್ದಾರೆ. ಅವರಿಗೆ ಟಿಕೇಟ್ ಕೊಡದೆ ನಾವೇ ತಪ್ಪು ಮಾಡಿದ್ದೆವು ಎಂದು ಹೇಳಿದರು.
Published On - 4:52 pm, Wed, 10 February 21