Valentine’s Day: ಪ್ರೀತಿಯಲ್ಲಿದ್ದಾಗಲೇ ಅನಾಮಿಕನಿಗೆ ಮುತ್ತಿಟ್ಟೆ.. ಈ ವಿಷಯವನ್ನು ನನ್ನ ಹುಡುಗನಿಗೆ ಹೇಳಲೇ..?
ಈ ರೀತಿಯ ಘಟನೆ ಅನೇಕರ ಬಾಳಲ್ಲಿ ನಡೆದಿರಬಹುದು. ಆಗ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.
ಆ ದಿನ ನನಗೆ ತುಂಬಾನೇ ಯಮಯಾತನೆ ಆಗಿತ್ತು. ನನ್ನ ಬಾಯ್ಫ್ರೆಂಡ್ ಜತೆ ಜಗಳ ಮಾಡಿಕೊಂಡಿದ್ದೆ. ಜಗಳ ಸಾಮಾನ್ಯ ಹಂತವನ್ನೂ ಮೀರಿ, ಬ್ರೇಕಪ್ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿತ್ತು. ನನಗೂ ಗೊತ್ತು, ಈ ಸಂಬಂಧ ಅಷ್ಟು ಸುಲಭಕ್ಕೆ ಮುರಿದು ಬೀಳುವಂತದ್ದಲ್ಲ ಎಂದು. ಆಗ, ನನ್ನ ಮೊಬೈಲ್ ರಿಂಗಣಿಸಿತು. ದೂರವಾಣಿಯಲ್ಲಿ ಮತ್ತೊಂದು ಕಡೆಯಲ್ಲಿದ್ದ ಗೆಳತಿ ಪಾರ್ಟಿಗೆ ಆಹ್ವಾನ ನೀಡಿದ್ದಳು. ನಾನು ತಡಮಾಡದೆ ಪಾರ್ಟಿ ಬಟ್ಟೆ ತೊಟ್ಟು ಕ್ಯಾಬ್ ಹಿಡಿದು ಹೊರಟೆ.
ಪಾರ್ಟಿಯಲ್ಲಿ ಗುಂಡು-ತುಂಡು ಎಲ್ಲವೂ ಇತ್ತು. ಅಂದಿನ ಪಾರ್ಟಿಯಲ್ಲಿ ನಾನು ಉದ್ದೇಶಪೂರ್ವಕವಾಗಿಯೇ ಕುಡಿದೆ. ಆ ವೇಳೆ ಪಾರ್ಟಿಗೆ ಬಂದಿದ್ದ ಒಬ್ಬನ ಪರಿಚಯವಾಗಿತ್ತು. ಬಾಯ್ಫ್ರೆಂಡ್ ಮೇಲಿದ್ದ ಸಿಟ್ಟು ಹಾಗೂ ಕುಡಿದ ಮದ್ಯ ನನ್ನ ಬುದ್ಧಿಯ ದಾರಿಯನ್ನು ತಪ್ಪಿಸಿತ್ತು. ಆಗಷ್ಟೇ ಪರಿಚಯವಾಗಿದ್ದ ಹುಡುಗನ ಜತೆ ಕ್ಲೋಸ್ ಆಗಿ ಮೂವ್ ಮಾಡಿದ್ದೆ. ಸಿಕ್ಕ ಐದು ನಿಮಿಷದ ಪ್ರೈವಸಿಯಲ್ಲಿ ಇಬ್ಬರೂ ತಬ್ಬಿಕೊಂಡು ಮುತ್ತಿಟ್ಟೆವು…
ಆಗ ನನಗೆ ಬಾಯ್ಫ್ರೆಂಡ್ ನೆನಪಾಗಿದ್ದ. ಆತನ ಮುಖ ನನ್ನ ಕಣ್ಣಿಗೆ ಕಟ್ಟಿತ್ತು. ಕುಡಿದ ಮದ್ಯವೆಲ್ಲ ಒಮ್ಮೆಲೇ ದೇಹದಿಂದ ಹರಿದು ಹೋದಂತೆ ಭಾಸವಾಗಿತ್ತು. ನಾನು ತಬ್ಬಿದ್ದ ವ್ಯಕ್ತಿಯನ್ನು ಜೋರಾಗಿ ತಳ್ಳಿದೆ. ಆತ ನೆಲಕ್ಕೆ ಬಿದ್ದನೆನಿಸುತ್ತದೆ.. ಅದನ್ನು ನೋಡದೆಯೇ ಕ್ಯಾಬ್ ಹಿಡಿದು ಮನೆಗೆ ಬಂದುಬಿಟ್ಟೆ. ನನಗೆ ತಪ್ಪಿನ ಅರಿವಾಗಿದೆ. ಈ ತಪ್ಪನ್ನು ಮತ್ತೆ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಈಗ ನನ್ನಲ್ಲಿರುವ ಪ್ರಶ್ನೆ ಒಂದೇ! ಈ ಘಟನೆಯನ್ನು ಬಾಯ್ಫ್ರೆಂಡ್ಗೆ ಹೇಳಬೇಕಾ ಅಥವಾ ಬೇಡವಾ? ಹೇಳಿದರೆ, ಸಂಬಂಧ ಮುರಿದು ಬಿದ್ದರೆ ಎನ್ನುವ ಭಯ.
ಈ ರೀತಿಯ ಘಟನೆ ಅನೇಕರ ಬಾಳಲ್ಲಿ ನಡೆದಿರಬಹುದು. ಆಗ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.
ಮನಿಶಾ, ಸ್ತ್ರೀ ರೋಗ ತಜ್ಞೆ ನೀವು ಆತನಿಗೆ ಈ ವಿಚಾರ ಹೇಳದೇ ಇರುವುದೇ ಒಳಿತು. ನಿಮಗೆ ಆತ ಬೇಕು ಎನ್ನುವುದು ಮನಸ್ಸಲ್ಲಿದೆ ಅಲ್ಲವೇ? ಹೀಗಿರುವಾಗ, ನೀವು ಮುಂದಿನ ದಿನಗಳಲ್ಲಿ ಮತ್ತೆ ಆತನೊಂದಿಗೆ ಎಲ್ಲವನ್ನೂ ಸರಿ ಮಾಡಿಕೊಂಡು ನಡೆಯುತ್ತೀರಿ ಎನ್ನುವ ನಂಬಿಕೆ ಇದೆ ಎಂದುಕೊಂಡಿದ್ದೇನೆ. ಹೀಗಿರುವಾಗ, ಈ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳಿ. ಒಂದೊಮ್ಮೆ ನೀವು ಈ ವಿಚಾರವನ್ನು ಬಾಯ್ಫ್ರೆಂಡ್ಗೆ ಹೇಳಿದರೆ, ಆತ ಇದನ್ನು ಹೇಗೆ ಬೇಕಿದ್ದರೂ ಸ್ವೀಕರಿಸಬಹುದು. ನಿಮ್ಮ ಪರಿಸ್ಥಿತಿ ಅರ್ಥವಾಗದೇ ಆತ ನಿಮ್ಮನ್ನು ಬಿಟ್ಟು ಹೋಗಬಹುದು!
ಕವಿತಾ ಶರ್ಮಾ, ಉಪನ್ಯಾಸಕಿ ತಪ್ಪಿತಸ್ಥ ಭಾವನೆಗಿಂತ ದೊಡ್ಡ ವೈರಿ ಮತ್ತೊಂದಿಲ್ಲ. ನೀವು ಈಗ ಮಾಡಿರುವ ತಪ್ಪನ್ನು ಆತನ ಬಳಿ ಹೇಳಿಕೊಳ್ಳದೇ ಹೋದರೆ… ಮುಂದೊದು ದಿನ ತಪ್ಪಿತಸ್ಥ ಭಾವನೆ ನಿಮ್ಮನ್ನು ಕಾಡಬಹುದು. ಪ್ರತಿ ಬಾರಿ ಆತ ಪ್ರೀತಿ ತೋರಿಸಿದಾಗಲೂ ನಿಮ್ಮಲ್ಲಿರುವ ತಪ್ಪಿತಸ್ಥ ಭಾವನೆ ನಿಮ್ಮನ್ನು ಕೊಲ್ಲಲು ಆರಂಭಿಸಬಹುದು. ಹೀಗಾಗಿ, ಆತನ ಬಳಿ ತಪ್ಪನ್ನು ಹೇಳಿಕೊಳ್ಳಿ. ಅಷ್ಟೇ ಅಲ್ಲ, ಆತನನ್ನು ಸಂಪೂರ್ಣವಾಗಿ ಮನವೊಲಿಸಲು ಪ್ರಯತ್ನಿಸಿ. ಇದನ್ನು ಮೆಸೇಜ್ ಅಥವಾ ಕಾಲ್ನಲ್ಲಿ ಹೇಳದೆ ಮುಖಾಮುಖಿ ಭೇಟಿಯಲ್ಲಿ ವಿವರಿಸಿ.
ಇದನ್ನೂ ಓದಿ: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!