Valentine’s Day: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!

ನೀವು ಆತನಿಗೆ ಇಷ್ಟವಾಗಿದ್ದೀರಿ, ಆತ ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಲು ಸಾಕಷ್ಟು ಮಾರ್ಗವಿದೆ. ಈ ಐದು ನಡೆತಗಳು ಆತನಲ್ಲಿ ಕಂಡು ಬಂದರೆ, ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆ ಎಂಬುದರಲ್ಲಿ ಅನುಮಾನಬೇಡ.

Valentine's Day: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Feb 11, 2021 | 9:48 PM

ನೀವು ಜೀವನದಲ್ಲಿ ಸಾಕಷ್ಟು ಜನರನ್ನು ಭೇಟಿ ಮಾಡಿರುತ್ತೀರಿ. ಆದರೆ, ಎಲ್ಲರನ್ನು ಭೇಟಿ ಮಾಡಿದಾಗಲೂ ನಿಮಗೆ ವಿಶೇಷ ಎನಿಸಿರುವುದಿಲ್ಲ. ಕೆಲವರು ಮಾತ್ರ ನಿಮಗೆ ತುಂಬಾನೇ ಆಪ್ತ ಎನಿಸಿಬಿಡುತ್ತಾರೆ. ನಿಮಗೆ ತುಂಬಾ ಹತ್ತಿರ ಆಗಿ ಬಿಡುತ್ತಾರೆ. ಅಷ್ಟಾದರೂ ನಿಮ್ಮ ನಡುವೆ ಇರುವುದು ಪ್ರೀತಿಯೋ ಅಥವಾ ಕೇವಲ ಗೆಳೆತನವೋ ಎನ್ನುವುದನ್ನು ನಿಮಗೆ ತಿಳಿಯಲು ಸಾಧ್ಯವೇ ಆಗುವುದಿಲ್ಲ. ಆತ ಗೆಳೆಯನೋ (Friend) ಅಥವಾ ಪ್ರಿಯಕರನೋ (Boyfriend) ಎನ್ನುವುದನ್ನು ತಿಳಿಯುವ ಕಾಲವಿದೆಯಲ್ಲ ಅದು ತುಂಬಾನೇ ಕಷ್ಟಕರವಾದದ್ದು. ನೀವು ಆತನ ಎದುರು ಪ್ರೀತಿ ವ್ಯಕ್ತಪಡಿಸಿದರೆ ನಿಮ್ಮ ಗೆಳೆತನ ಹಾಳಾಗಿಬಿಡಬಹುದು ಎನ್ನುವ ಆತಂಕ ಒಂದು ಕಡೆಯಾದರೆ, ಮತ್ತೊಂದು ಕಡೆ ನಿಮ್ಮ ಪ್ರೀತಿ ಹೇಳದೇ ಹೋದರೆ, ಆತ ನಿಮ್ಮನ್ನು ಬಿಟ್ಟು ಬೇರೆಯವರಿಗೆ ಆಪ್ತರಾಗಿ ಬಿಟ್ಟರೆ ಎನ್ನುವ ಭಯ. ಹೀಗಾಗಿ, ಈ ಗೊಂದಲದ ಗೂಡಲ್ಲಿ ಸದಾ ತೇಲುತ್ತಿರುತ್ತೀರಿ.

ಆದರೆ, ನೀವು ಆತನಿಗೆ ಇಷ್ಟವಾಗಿದ್ದೀರಿ, ಆತ ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಲು ಸಾಕಷ್ಟು ಮಾರ್ಗವಿದೆ. ಈ ಐದು ನಡೆಗಳು ಆತನಲ್ಲಿ ಕಂಡು ಬಂದರೆ, ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆ ಎಂಬುದರಲ್ಲಿ ಅನುಮಾನಬೇಡ.

ಸಣ್ಣ ಸಣ್ಣ ವಿಚಾರದಲ್ಲೂ ಖುಷಿ ನೀಡುತ್ತಾನೆ ಆತ ನಿಮ್ಮನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾನೆ ಎಂದಾದರೆ, ನಿಮ್ಮನ್ನು ಸಣ್ಣ ಸಣ್ಣ ವಿಚಾರದಲ್ಲೂ ಇಂಪ್ರೆಸ್​ ಮಾಡಲು ಪ್ರಯತ್ನಿಸುತ್ತಾನೆ. ನಿಮಗೆ ಏನು ಇಷ್ಟ ಎಂಬುದನ್ನು ತಿಳಿದುಕೊಂಡು ಅದನ್ನೇ ಮಾಡುತ್ತಾನೆ. ಕೆಲವೊಮ್ಮೆ ಸಿಗುವ ಸಣ್ಣ ಸಣ್ಣ ಖುಷಿಗಳೂ ಜೀವನ ಪರ್ಯಂತ ನೆನಪಿರುತ್ತವೆ. ಅದನ್ನೇ ಆತ ಮಾಡುತ್ತಾನೆ. ನೀವು ಇಷ್ಟ ಇಲ್ಲ ಎಂದು ಹೇಳಿದನ್ನು ಆತ ಖಂಡಿತಾ ಮಾಡಲು ಹೋಗುವುದಿಲ್ಲ.  ಇದನ್ನೆಲ್ಲ ಆತ ನಿಮಗೋಸ್ಕರ ಮಾಡುತ್ತಿದ್ದಾನೆ ಎಂದಾದರೆ, ನಿಮ್ಮೊಂದಿಗೆ ಪ್ರೀತಿಯಲ್ಲಿದ್ದಾನೆ ಎಂದರ್ಥ.

ನಿಮ್ಮನ್ನು ಹೆಚ್ಚು ತಿಳಿಯಬಯಸುತ್ತಾನೆ ನಿಮಗೆ ಗೆಳೆಯರಾದವರೆಲ್ಲರೂ ನಿಮ್ಮ ಬಗ್ಗೆ ತಿಳಿಯಲು ಬಯಸುವುದಿಲ್ಲ. ಆದರೆ, ನಿಮ್ಮ ಬಗ್ಗೆ ಒಲವು ಹೊಂದಿದವರು ಮಾತ್ರ ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಅದು ಕೂಡಾ ಆರಂಭದಲ್ಲೇ. ನೀವು ಶಿಕ್ಷಣ ಪಡೆದಿದ್ದು ಎಲ್ಲಿ? ನಿಮ್ಮ ಕುಟುಂಬದ ಜತೆ ನಿಮ್ಮ ಸಂಬಂಧ, ನಿಮ್ಮ ಹಳೆಯ ಪ್ರೀತಿ, ಅದು ಮುರಿದು ಬಿದ್ದಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ಎದುರುಬರಬಹುದು. ನಿಮಗೂ ಈ ಅನುಭವ ಆಗುತ್ತಿದೆ ಎಂದಾದಲ್ಲಿ ನಿಮ್ಮ ಮತ್ತು ಆತನ ಸಂಬಂಧಕ್ಕೆ ಹೊಸ ಅರ್ಥ ಸಿಕ್ಕಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಭಾವನಾತ್ಮಕವಾಗಿ ಕನೆಕ್ಟ್​ ಆಗುತ್ತಾನೆ ನಿಮ್ಮನ್ನು ಇಂಪ್ರೆಸ್​ ಮಾಡಬೇಕು ಎಂದಿದ್ದವನು ನಿಮಗೆ ಇಷ್ಟವಾಗುವಂತೆ ನಡೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಪ್ರತಿ ಹಂತದಲ್ಲೂ ನಿಮ್ಮ ಜತೆ ಭಾವನಾತ್ಮಕವಾಗಿ ಅಟ್ಯಾಚ್​ ಆಗಲು ಪ್ರಯತ್ನಿಸುತ್ತಾನೆ. ಭಾವನಾತ್ಮಕವಾಗಿ ಮಾತನಾಡುತ್ತಾನೆ. ನಿಮ್ಮ ಜತೆ ಭಾವನಾತ್ಮಕವಾಗಿ ಕಳೆದು ಹೋಗಲು ಬಯಸುತ್ತಾನೆ. ಹೀಗೆ ಮಾಡುತ್ತಿದ್ದಾನೆ ಎಂದರೆ ಆತ ನಿಮ್ಮ ಜತೆ ಪ್ರೀತಿಯಲ್ಲಿ ಇದ್ದಾನೆ ಎಂದೇ ಅರ್ಥ.

ಪರಿಚಯದ ಭಾವ ನೀವು ಕೆಲವರನ್ನು ಭೇಟಿ ಮಾಡಿ ಅವರ ಜತೆ ಎಷ್ಟೇ ದಿನ ಕಳೆದರೂ ಅವರು ನಿಮಗೆ ಸಂಬಂಧಿಸಿದವರಲ್ಲ ಎನ್ನುವ ಭಾವನೆ ಕಾಡುತ್ತದೆ. ಆದರೆ, ನಿಮಗೆಂದೇ ಭೂಮಿಗಿಳಿದ ವ್ಯಕ್ತಿ ನಿಮ್ಮ ಎದುರು ಬಂದರೆ, ಮೊದಲಿನಿಂದಲೂ ನಿಮಗೆ ಅವರ ಪರಿಚಯ ಇದ್ದಂತೆ ಭಾಸವಾಗುತ್ತದೆ. ಇಬ್ಬರೂ ಪರಸ್ಪರ ಮೊದಲಿನಿಂದಲೂ ಪರಿಚಯ ಇದ್ದಂತೆ ನಿಮಗೆ ಅನ್ನಿಸುತ್ತದೆ.

ನಿಮ್ಮ ಕರೆಗೆ ಓಗೊಡುತ್ತಾನೆ ಅನೇಕ ವರ್ಷಗಳಿಂದ ನೀವು ಯಾರದ್ದೋ ಜತೆ ಗೆಳೆತನ ಬೆಳೆಸಿಕೊಂಡಿರುತ್ತೀರಿ. ಆದರೆ, ಅವರು ನೀವು ಕರೆದಲ್ಲಿ ಬರುವುದಿಲ್ಲ. ನಿಮಗೆ ಕಷ್ಟ ಎಂದಾಗ ಓಗೊಡುವುದಿಲ್ಲ. ಆದರೆ, ನೀವು ಸೋಲ್​ ಮೇಟ್​ ಎಂದು ಭಾವಿಸಿರುವವರು ಮಾತ್ರ ನಿಮ್ಮ ಕರೆಗೆ ಓಗುಡುತ್ತಾರೆ. ಮಧ್ಯರಾತ್ರಿ ಕಷ್ಟ ಎಂದರೂ ನಿಮ್ಮ ಎದುರು ಹಾಜರಾಗುತ್ತಾರೆ. ಅಂಥವರನ್ನು ನೀವು ಎಂದಿಗೂ ಬಿಡಬೇಡಿ.

Valentine’s Day: ಕಳೆದು ಹೋಗುವ ಮುನ್ನ ಪ್ರೇಮಕ್ಕೆ ಕೈ ಚಾಚಿ.. ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ

Published On - 2:40 pm, Wed, 10 February 21