AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಕಳೆದು ಹೋಗುವ ಮುನ್ನ ಪ್ರೇಮಕ್ಕೆ ಕೈ ಚಾಚಿ.. ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ

Love Propose: ಎಷ್ಟೋ ಪ್ರೇಮ ಪ್ರಕರಣಗಳಲ್ಲಿ ಹುಡುಗ ಹುಡುಗಿ ಇಬ್ಬರೂ ಇಷ್ಟಪಟ್ಟಿದ್ದರೂ ಪರಸ್ಪರ ಪ್ರೀತಿ ವ್ಯಕ್ತಪಡಿಸದ ಏಕೈಕ ಕಾರಣಕ್ಕಾಗಿ ದೂರವೇ ಉಳಿದಿದ್ದಿದೆ. ತುಟಿಯ ತುದಿಗೆ ಬಂದು ಕೂತ ಮಾತಿಗೆ ಧ್ವನಿ ನೀಡದೆ ಹೃದಯಕ್ಕೆ ಮೋಸ ಮಾಡಿಕೊಂಡವರ ಪ್ರಮಾಣ ದೊಡ್ಡದಿದೆ.

Valentine's Day: ಕಳೆದು ಹೋಗುವ ಮುನ್ನ ಪ್ರೇಮಕ್ಕೆ ಕೈ ಚಾಚಿ.. ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ
ಎದೆಯೊಳಗೆ ಅಡಗಿ ಕುಳಿತ ಮಾತನ್ನು ವ್ಯಕ್ತಪಡಿಸಿ
Skanda
|

Updated on:Feb 10, 2021 | 12:30 PM

Share

ಪ್ರೀತಿ, ಪ್ರೇಮ, ಪ್ರಣಯ ಎಂದಾಗ ಬೆರಳ ತುದಿಗಂಟಿದ ಜೇನಿನಂತಹ ಮಧುರ ಭಾವವೊಂದು ಮೈಮನವನ್ನಾವರಿಸುತ್ತದೆ. ಇಷ್ಟಪಟ್ಟ ಹುಡುಗಿ ತೋಳತೆಕ್ಕೆಗೆ ಬರಲಿ ಎಂದು ಕಾಯುವ ಹುಡುಗನ ಪ್ರೀತಿಗೂ, ಹೃದಯ ಗೆದ್ದವನ ಬಿಸಿ ಅಪ್ಪುಗೆ ಬದುಕಿಡೀ ನನಗೆ ಸಿಗಲಿ ಎಂದು ಹಾತೊರೆಯುವ ಹುಡುಗಿಯ ಚಡಪಡಿಕೆಗೂ ಲಿಂಗ ಭೇದ ಹೊರತುಪಡಿಸಿದರೆ ಬೇರಾವ ವ್ಯತ್ಯಾಸವೂ ಕಾಣುವುದಿಲ್ಲ. ಎದೆಯಲ್ಲೆದ್ದ ಭಾವನೆಯ ಅಲೆಯಲ್ಲಿ ಅವನ/ಅವಳ ಕಾಲು ತೋಯಿಸಬೇಕೆಂದು ಕಾಯುವ ಪ್ರತಿ ಜೀವವೂ ಹೇಳಿಕೊಳ್ಳಲಾಗದ ಸಂಕಟದಲ್ಲಿ ಒದ್ದಾಡುತ್ತದೆ. ಕೆಲವರು ಹುಚ್ಚು ಧೈರ್ಯ ಮಾಡಿ ಪ್ರೇಮ ನಿವೇದನೆ (Love Propose) ಮಾಡಿಬಿಡುತ್ತಾರೆ. ಆದರೆ, ಬಹುತೇಕರು ಈ ತೊಳಲಾಟವನ್ನು ಶಮನ ಮಾಡಲಾಗದೇ ತಮ್ಮೊಳಗಿನ ಗುಟ್ಟನ್ನು ಎದೆಯಲ್ಲೇ ಹತ್ತಿಕ್ಕುತ್ತಾರೆ.

ಎಷ್ಟೋ ಪ್ರೇಮ ಪ್ರಕರಣಗಳಲ್ಲಿ ಹುಡುಗ ಹುಡುಗಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರೂ ಪ್ರೀತಿಯನ್ನು (Love) ಪರಸ್ಪರ ವ್ಯಕ್ತಪಡಿಸದ ಏಕೈಕ ಕಾರಣಕ್ಕಾಗಿ ದೂರವೇ ಉಳಿದಿದ್ದಿದೆ. ತುಟಿಯ ತುದಿಗೆ ಬಂದು ಕೂತ ಮಾತಿಗೆ ಧ್ವನಿ ನೀಡದೆ ಹೃದಯಕ್ಕೆ ಮೋಸ ಮಾಡಿಕೊಂಡವರ ಪ್ರಮಾಣ ದೊಡ್ಡದಿದೆ. ಹೀಗೆ ಸುಖಾಸುಮ್ಮನೆ ಭಯಪಟ್ಟು ಕೈಯ್ಯಾರೆ ಪ್ರೀತಿಯನ್ನು ಕಳೆದುಕೊಂಡು ನಂತರ ಚಡಪಡಿಸುವ ಬದಲು ಅದನ್ನು ವ್ಯಕ್ತಪಡಿಸಿ ಮುಂದಾಗಬಹುದಾದ ಪರಿಣಾಮವನ್ನು ಎದುರಿಸುವುದೇ ಲೇಸು. ಹಾಗಾದರೆ, ಇಷ್ಟಪಟ್ಟವರಿಗೆ ಪ್ರೀತಿ ತಲುಪಿಸುವುದು ಹೇಗೆ? ಅವರು ಕೈ ತಪ್ಪಿ ಹೋಗುವ ಮುನ್ನ ಮನದ ಮಾತನ್ನು ಹಂಚಿಕೊಂಡು ಹಗುರಾಗುವುದು ಹೇಗೆ? ಒಂದುವೇಳೆ ನಿಮ್ಮ ಪ್ರೀತಿಯನ್ನು ಅವರು ನಿರಾಕರಿಸಿ ಬಿಟ್ಟರೆ ಮುಂದೇನು ಮಾಡುವುದು? ಪ್ರೀತಿಯ ತಂಟೆಗೆ ಹೋಗಿ ಸುಂದರ ಸ್ನೇಹ ಕಮರಿ ಹೋಗುವಂತಾದರೆ ಅದನ್ನು ಎದುರಿಸುವುದು ಹೇಗೆ? ಎಂಬ ಬಹುತೇಕರ ಅತಿ ಸಾಮಾನ್ಯ ಗೊಂದಲಗಳಿಗೆ ಇಲ್ಲಿ ಕೆಲ ಸರಳ ಉಪಾಯಗಳನ್ನು ನೀಡಲಾಗಿದೆ.

ನಿಮ್ಮೊಳಗಿರುವ ಭಾವ ಏನು ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ ಬದುಕಿನಲ್ಲಿ ಅತಿಮುಖ್ಯ ಅಂಶವೆಂದರೆ ನಿಮ್ಮ ಮನಸ್ಸನ್ನು ನೀವು ಅರ್ಥೈಸಿಕೊಳ್ಳುವುದು. ಅದರಲ್ಲೂ ಪ್ರೀತಿಯ ವಿಚಾರಕ್ಕೆ ಬಂದಾಗ ನಿಮ್ಮನ್ನು ನೀವು ಅವಲೋಕಿಸಿಕೊಳ್ಳಲೇಬೇಕು. ಹದಿಹರೆಯದ ವಯಸ್ಸಿನ ಬಹುತೇಕರು ಈ ಸೂಕ್ಷ್ಮವನ್ನು ಅರಿಯದೇ ಪ್ರೀತಿಗೆ ಬಿದ್ದುಬಿಡುತ್ತಾರೆ. ಮನಸ್ಸಿನಲ್ಲಿರುವುದು ಆಕರ್ಷಣೆಯಾ, ಪ್ರೀತಿಯಾ, ಸ್ನೇಹವಾ ಎಂಬ ಸ್ಪಷ್ಟತೆ ಸಿಗುವ ಮುನ್ನ ‘I Love You’ ಹೇಳಲು ಹಾತೊರೆಯುತ್ತಾರೆ. ಆ ವಯಸ್ಸಿನಲ್ಲಿ ಧಾವಂತ ಸಹಜವೇ ಆದರೂ ಅದರಿಂದ ಮುಂದೆ ಎದುರಾಗಬಹುದಾದ ಪರಿಣಾಮಗಳ ಕುರಿತಾಗಲೀ, ಅದನ್ನು ಎದುರಿಸುವ ಮಾರ್ಗದ ಬಗ್ಗೆಯಾಗಲೀ ಯಾರೂ ಯೋಚಿಸುವುದಿಲ್ಲ. ಹೀಗಾಗಿಯೇ ವಯಸ್ಸಲ್ಲದ ವಯಸ್ಸಲ್ಲಿ ಶುರುವಾಗುವ ಸೋ ಕಾಲ್ಡ್ ಪ್ರೇಮಕತೆಗಳು ಅಕಾಲಿಕ ಅಂತ್ಯ ಕಾಣುತ್ತವೆ. ಇಂತಹ ದುರಂತ ಅಂತ್ಯ ಎದುರಾಗಬಾರದೆಂದರೆ ನಿಮ್ಮೊಳಗಿರುವ ಭಾವ ಏನು ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು.

VALENTINES DAY

ಜೊತೆಯಾಗುವ ಮುನ್ನ ಪರಸ್ಪರ ಅರ್ಥ ಮಾಡಿಕೊಳ್ಳಿ

ಅವರ ಮನಸ್ಸಿನಲ್ಲೇನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ನಿಮ್ಮ ಮನಸ್ಸಿನಲ್ಲೇನಿದೆ ಎಂದು ಅರ್ಥ ಮಾಡಿಕೊಳ್ಳುವುದು ಹೇಗೆ ಮುಖ್ಯವೋ.. ನೀವು ಇಷ್ಟಪಟ್ಟವರ ಮನಸ್ಸಿನಲ್ಲೇನಿದೆ ಎಂದು ಅರಿಯುವುದೂ ಮುಖ್ಯ. ಇದಕ್ಕಾಗಿ ನೀವು ಅವರೊಂದಿಗೆ ತುಸು ಹೆಚ್ಚೇ ಕಾಲ ಕಳೆದು ಅವರ ಹಾವಭಾವ, ನಡವಳಿಕೆ, ಮಾತು ಎಲ್ಲವನ್ನೂ ತಾಳ್ಮೆಯಿಂದ ಗಮನಿಸಿ. ನಿಮ್ಮೊಟ್ಟಿದ್ದಾಗ ಅವರು ಹೇಗಿರುತ್ತಾರೆ, ಬೇರೆಯವರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎನ್ನುವುದರಲ್ಲಿಯೇ ಈ ಸೂಕ್ಷ್ಮ ಸಂಗತಿಗಳ ಗುಟ್ಟು ಅಡಗಿರುತ್ತದೆ. ಆದ್ದರಿಂದ ಇದೆಲ್ಲವನ್ನೂ ಗಮನಿಸಿ. ನಂತರ ಒಂದೊಳ್ಳೇ ಸಮಯ ನೋಡಿ ಕೇಳಬೇಕಾದ ವಿಚಾರವನ್ನು ಬಾಯಿಬಿಟ್ಟು ಕೇಳಿ. ಆ ಕುರಿತು ಯೋಚಿಸಿ ನಿರ್ಧರಿಸಲು ಅವರಿಗೆ ಬೇಕಾದಷ್ಟು ಸಮಯವನ್ನೂ ನೀಡಿ.

ಪ್ರೀತಿ ಎಂದರೆ ‘I Love You’ ಹೇಳುವುದಕ್ಕಷ್ಟೇ ಸೀಮಿತವಲ್ಲ ಪ್ರೀತಿ ಎಂದರೇನು? ಅದರ ಅಗಾಧತೆ ಏನು? ಪ್ರೀತಿಸಲು ಶುರುಮಾಡಿದ ನಂತರ ಸಂಗಾತಿಯೊಟ್ಟಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಪ್ರಬುದ್ಧತೆ ಇದ್ದರೆ ಮಾತ್ರ ಈ ಪ್ರಯಾಣ ಸುಗಮವಾಗಿರುತ್ತದೆ. ಹೀಗಾಗಿ ‘I Love You’ ಹೇಳುವ ಮುನ್ನ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಾ ಎನ್ನುವುದನ್ನು ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ.

ಮನಸ್ಸಿನ ಮಾತು ಹೇಳುವಾಗ ನೇರವಾಗಿರಲಿ, ಸ್ಪಷ್ಟವಾಗಿರಲಿ ಪ್ರೀತಿ ಹಂಚಿಕೊಳ್ಳುವುದು ಸುಲಭವಲ್ಲ ಎನ್ನುವುದೇನೋ ನಿಜ. ಆದರೆ, ಈ ವಿಷಯವನ್ನು ಹೇಳುವಾಗ ಹಿಂಜರಿಕೆಯಿದ್ದರೆ ಯಡವಟ್ಟಾಗುವ ಸಂಭವವೇ ಹೆಚ್ಚು. ನೀವು ಹೇಳಬೇಕಾಗಿದ್ದು ಒಂದು, ಹೇಳಿದ್ದೇ ಒಂದು ಅಂತಾದರೆ ಸಂಬಂಧ ಕಗ್ಗಂಟಾಗಿ ಇನ್ನೂ ಕಷ್ಟಕ್ಕೀಡುಮಾಡುತ್ತದೆ. ಆದ್ದರಿಂದ ಹೇಳಬೇಕಾದ ಮಾತು ನಾಲ್ಕೇ ಸಾಲುಗಳಲಿದ್ದರೂ ಸ್ಪಷ್ಟವಾಗಿರಲಿ ಮತ್ತು ನೇರವಾಗಿ ಅವರ ಮನಸ್ಸನ್ನು ತಾಕುವಂತಿರಲಿ.

ಕೈ ಜಾರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ ನೀವು ಇಷ್ಟಪಟ್ಟವರು ಅವರ ಬದುಕಿನಲ್ಲಿ ಹೊಸದೊಂದು ಪಯಣ ಶುರುಮಾಡಿದ ಮೇಲೆ ಮತ್ತೆ ಅವರನ್ನು ಎಡತಾಕುವುದು ಒಳ್ಳೆಯದಲ್ಲ. ಹೀಗಾಗಿ ಕಾಲ ಮಿಂಚಿಹೋಗುವ ಮೊದಲೇ ನೀವು ಎಚ್ಚೆತ್ತುಕೊಳ್ಳಬೇಕು. ಅವರು ಹೊರಟು ಹೋಗಲಿದ್ದಾರೆ ಎನ್ನುವ ಸೂಚನೆ ಸಿಕ್ಕಿದ ಮೇಲೂ ನೀವು ಸುಮ್ಮನೆ ಕುಳಿತರೆ ಅವರಿಗೆ ನಿಮ್ಮೆಡೆಗೆ ಸೆಳೆತವಿದ್ದರೂ ಅದು ನಿಮ್ಮಿಬ್ಬರ ಮೌನದ ಕಾರಣದಿಂದಾಗಿ ಸತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ಸಮಯ ಕೈ ಮೀರುವ ಮೊದಲು ಮಾತನಾಡಿ.

ಒಪ್ಪದಿದ್ದರೆ ಏನು ಮಾಡುವುದು? ಪ್ರೀತಿಸುವುದು, ಜೊತೆಗಿರುವುದು ಎಲ್ಲವೂ ಇಬ್ಬರ ನಿರ್ಧಾರದ ಮೇಲೆ ನಿಂತಿರುತ್ತದೆ. ಹೀಗಾಗಿ ನೀವು ಪ್ರೇಮ ನಿವೇದನೆ ಮಾಡಿಕೊಂಡ ಮೇಲೆ ಅವರು ಒಪ್ಪದಿದ್ದರೆ ಅದನ್ನು ಗೌರವಿಸಲೇಬೇಕು. ಅವರ ನಿರ್ಧಾರವನ್ನು ನೀವು ಅಧಿಕಾರದಿಂದ ಪ್ರಶ್ನಿಸುವುದಾಗಲೀ, ಅವರನ್ನು ಹಳಿಯುವುದಾಗಲೀ ಮಾಡಿದರೆ ಅವರಿಗೆ ನಿಮ್ಮ ಮೇಲಿರುವ ಗೌರವ ಕಡಿಮೆಯಾಗುತ್ತದೆಯೇ ವಿನಃ ಅವರ ನಿರ್ಧಾರ ಬದಲಾಗುವುದಿಲ್ಲ. ಹೀಗಾಗಿ ಅವರು ಒಪ್ಪದಿದ್ದರೆ ಅದನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿ.

ಸ್ನೇಹಕ್ಕೆ ಧಕ್ಕೆಯಾದರೆ ಏನು ಮಾಡುವುದು? ಉತ್ತಮ ಸ್ನೇಹಿತರಾದವರು ಅತ್ಯುತ್ತಮ ಜೋಡಿಗಳಾಗಬಲ್ಲರು ಎಂಬ ಮಾತಿದೆ. ಆದರೆ, ಬಹುತೇಕ ಸ್ನೇಹಿತರು ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಸೋತು ಹೋಗುತ್ತಾರೆ. ಪ್ರೀತಿಯ ಮಾತನಾಡಲು ಹೋಗಿ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೋ? ಏನೋ? ಎಂಬ ಭಯದಿಂದಲೇ ತಮ್ಮ ಮನಸಿನಾಳದ ಮಾತನ್ನು ತಮ್ಮಲ್ಲಿಯೇ ಉಳಿಸಿಕೊಂಡು ಬಿಡುತ್ತಾರೆ. ಈ ರೀತಿಯ ನಿಲುವು ನಿಮಗೇ ನೀವು ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನಲ್ಲ. ನೀವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೆ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವುದೇ ಸೂಕ್ತ. ಒಂದುವೇಳೆ ಪ್ರೀತಿ ಕೈಗೂಡಲಿಲ್ಲವೆಂದರೆ ಆ ಕಾರಣಕ್ಕಾಗಿ ಸ್ನೇಹ ಮುರಿದುಕೊಳ್ಳಬೇಕೆಂದೇನು ಇಲ್ಲ. ಈ ಬಗ್ಗೆ ಇಬ್ಬರೂ ಕುಳಿತು ಮುಕ್ತವಾಗಿ ಮಾತನಾಡಿದರೆ ಸ್ಪಷ್ಟತೆ ಸಿಕ್ಕಂತೆಯೂ ಆಗುತ್ತದೆ.

Valentine’s Day: ಸರ್ಪ್ರೈಸ್ ತಂದ ಫಜೀತಿ, ಅವರಿಗೆ ಸಿಗಲೇ ಇಲ್ಲ ಪ್ರೀತಿಯ ಪತ್ರ

Published On - 12:27 pm, Wed, 10 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ