Valentine’s Day: ಮನ ಮೆಚ್ಚಿದ ಹುಡುಗಿಯನ್ನು ಮನೆಯವರು ಒಪ್ಪಲಿಲ್ಲ, ನಾನು ಬಿಡಲಿಲ್ಲ

Lockdown Love Story | ಇಡೀ ಜಗತ್ತು ಕೊರೊನಾ ಎಂಬ ಮಹಾಮಾರಿಯ ವಿರುದ್ಧ ಹೋರಾಟ ನಡೆಸುವಾಗ ಇಲ್ಲೆರಡು ಜೀವಗಳ ನಡುವೆ ಮಧುರವಾದ ಪ್ರೇಮ ಹುಟ್ಟಿದೆ.

Valentine's Day: ಮನ ಮೆಚ್ಚಿದ ಹುಡುಗಿಯನ್ನು ಮನೆಯವರು ಒಪ್ಪಲಿಲ್ಲ, ನಾನು ಬಿಡಲಿಲ್ಲ
ಸಂಗ್ರಹ ಚಿತ್ರ
Follow us
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 7:45 PM

ಪ್ರೇಮ (Love) ಎಂಬುವುದು ದಿನ ನಿತ್ಯದ ಆರಾಧನೆ. ಎಲ್ಲವನ್ನೂ ಮೀರಿ ಯಾವುದೇ ಅಡೆ ತಡೆಗಳನ್ನು ಲೆಕ್ಕಿಸದೇ ಬಳ್ಳಿಯಂತೆ ಹಬ್ಬಬಲ್ಲ ಶಕ್ತಿ ಪ್ರೇಮಕ್ಕೆ ಇದೆ. ಕಷ್ಟ, ನಷ್ಟ, ಸಂಕಟ, ನೋವು ಇವೆಲ್ಲವಕ್ಕೂ ಪ್ರೇಮ ಮದ್ದು. ಇಡೀ ಜಗತ್ತು ಕೊರೊನಾ (Corona) ಎಂಬ ಮಹಾಮಾರಿಯ ವಿರುದ್ಧ ಹೋರಾಟ ನಡೆಸುವಾಗ ಅದೆಷ್ಟೋ ಜೀವಗಳು ಅನಿವಾರ್ಯ ಕಾರಣಗಳಿಂದಾಗಿ ನಾನೊಂದು ತೀರ, ನೀನೊಂದು ತೀರ ಎಂಬಂತಾಗಿದ್ದವು. ಇಂತಹ ಸಂದರ್ಭದಲ್ಲೂ ಎರಡು ಜೀವಗಳ ನಡುವೆ ಹೊಸದಾಗಿ ಪ್ರೇಮ ಹುಟ್ಟುತ್ತದೆ ಎಂದರೆ ಅದು ಕೊಂಚ ಅಚ್ಚರಿಯ ಸಂಗತಿಯೇ ಸರಿ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ. ಆದ್ರೆ ಲಾಕ್​ಡೌನ್​ನಂತಹ ಸಮಯದಲ್ಲೂ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತೆ ಎಂಬುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಖಾಸಗಿ ಕಂಪನಿ ಉದ್ಯೋಗಿ ಮುರುಳಿ ತಮ್ಮ ಲಾಕ್​ಡೌನ್ ಸಮಯದ ಪ್ರೇಮದ ಕಥೆಯನ್ನು ಎಳೆ ಎಳೆಯಾಗಿ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಅದು ಆಗ ತಾನೇ ಭಾರತಕ್ಕೆ ಕೊರೊನಾ ಕಾಲಿಟ್ಟ ಸಮಯ. ಜನರಲ್ಲಿ ಸಹಜವಾಗಿಯೇ ಯಾವುದೋ ಹೊಸ ವೈರಸ್ ದೇಶಕ್ಕೆ ಕಾಲಿಟ್ಟಿದೆ ಎಂಬ ಭಯ. ಕೆಲಸಗಳನ್ನು ಕಳೆದುಕೊಳ್ಳುವ ಆತಂಕ. ಅದರ ನಡುವೆಯೇ ಕೆಲಕಾಲ ಕಳೆಯುತ್ತಿದ್ದಂತೆ. ಏಕಾಏಕಿ ಎಲ್ಲಾ ಕೆಲಸಗಳು ಬಂದ್ ಆದವು. ಕಂಪನಿಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಯಿತು. ಇಂತಹ ಸಮಯದಲ್ಲಿ ಕೂಡಿಟ್ಟ ಅಲ್ಪ ಸ್ವಲ್ಪ ಹಣವೇ ಜೀವನಕ್ಕೆ ಆಸರೆಯಾಗಿತ್ತು. ದೇಶದಲ್ಲಿ ಭೀಕರ ಸ್ಥಿತಿ, ತುತ್ತು ಅನ್ನಕ್ಕೂ ಅನೇಕರು ಪರಿತಪಿಸುವಂತಹ ಪರಿಸ್ಥಿತಿ ಎದುರಿಸಿದ್ದು ಇದೆ. ಆದ್ರೆ, ಈ ಎಲ್ಲಾ ಭಯದ ನಡುವೆಯೇ ನಾನು ಬೆಂಗಳೂರಿನಲ್ಲಿದ್ದ ಒಳ್ಳೆಯ ಕೆಲಸ ಬಿಟ್ಟು ದೇವನಹಳ್ಳಿಯ ನಮ್ಮ ಸ್ವಂತ ಮನೆಯಲ್ಲಿ ನನ್ನ ಕುಟುಂಬದ ಜೊತೆ ಇರಲು ಪ್ರಾರಂಭಿಸಿದೆ.

ಬೆಂಗಳೂರು ತೊರೆದು ಮರಳಿ ಬಂದಿದ್ದು ಹೊಸ ಜೀವನ ಸಿಕ್ಕಷ್ಟೇ ಖುಷಿ ನೀಡಿತು. ದಾರಿ ತಪ್ಪಿದ್ದ ನಾನು ಮತ್ತೆ ಗೂಡಿಗೆ ಬಂದ ಅನುಭವ. ಬರೀ ಖುಷಿಯಷ್ಟೇ ಇತ್ತು ಎಂದಲ್ಲದಿದ್ದರೂ ದುಃಖದ ಪಾಲು ಕೊಂಚ ಕಡಿಮೆ ಇತ್ತು. ಇದರ ನಡುವೆಯೇ ಮನೆಯಲ್ಲಿ ನನ್ನ ಮದುವೆ ಮಾತು ಕಥೆ ಶುರುವಾಯಿತು. ನಮ್ಮ ದೂರದ ಸಂಬಂಧಿಕರ ಮನೆಯ ಹುಡುಗಿಯ ಜೊತೆ ನನ್ನ ಮದುವೆ ಮಾಡಲು ಮನೆಯಲ್ಲಿ ಮಾತನಾಡುತ್ತಿದ್ದರು. ಆದರೆ, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಮದುವೆಯ ಮಾತುಕತೆಗಳು ತೆರೆಮರೆಯಲ್ಲೇ ನಡೆಯುತ್ತಿದ್ದವು. ನನಗೆ ಇದರ ಸುಳಿವು ಕೊಟ್ಟಿದ್ದು ನನ್ನ ಮುದ್ದು ತಂಗಿ. ಅವಳು ತಿಳಿಸಿದಾಗ ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಇದೆಲ್ಲ ಆದ ಮೇಲೆ  ಕೊನೆಗೂ ನನ್ನ ಬದುಕಲ್ಲಿ ಆ ಒಂದು ದಿನ ಬಂತು. ಅದು ನನ್ನ ಜೀವನದಲ್ಲಿ ಹೊಸ ಪರ್ವವನ್ನೇ ಹುಟ್ಟಿ ಹಾಕುತ್ತೆ ಎಂದು ನಾನಂತೂ ಅಂದುಕೊಂಡಿರಲಿಲ್ಲ.

Hii, How Are You..  ಎಂದು ಮೆಸೆಂಜರ್​ ಮೂಲಕ ಆ ಹುಡುಗಿಯೇ ಮೆಸೇಜ್​ ಕಳುಹಿಸಿದಳು. ಆಗಂತೂ ಏನು ಹೇಳಬೇಕೆಂಬುವುದೇ ತಿಳಿದಿರಲಿಲ್ಲ. ಅವಳ ಮೆಸೇಜ್​ ಎರಡೇ ಸಾಲಿನಲ್ಲಿದ್ದರೂ ಉತ್ತರಿಸಲಾಗದೇ ದಂಗಾಗಿ ಹೋಗಿದ್ದೆ. ಆ ಕ್ಷಣ ನನ್ನ ಕಣ್ಣ ಮುಂದೆ ಬಂದದ್ದು ‘ದಮ್ ಲಗಾ ಕೇ ಹೈಸ’ ಸಿನಿಮಾ, ‘ಗಟ್ಟಿಮೇಳ’ ಧಾರಾವಾಹಿ. ನನಗಿಂತ ಎರಡುಪಟ್ಟು ಹೆಚ್ಚು ಪ್ರೀತಿಯುಳ್ಳ ಹುಡುಗಿ ಅತ್ತ ಕಡೆಯಿಂದ ಮೆಸೇಜು ಮಾಡುತ್ತಿದ್ದರೆ. ನಾನಿಲ್ಲಿ ಕೊಂಚ ಸುಧಾರಿಸಿಕೊಂಡು I’m fine, How Are you.. ಎಂದು ಉತ್ತರ ಕಳುಹಿಸಿದೆ. ಬಳಿಕ ಆಕೆ ತಾನಾಗಿಯೇ ನನ್ನ ಮನೆಯಲ್ಲಿ ನಿನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನಗೂ ನಿನಗೂ ಮದುವೆ ಮಾಡ್ತಾರಂತೆ ಎಂದು ಹೇಳಿದ್ಳು. ಸಾಲದ್ದಕ್ಕೆ ನಿನಗೆ ನಾನು ಇಷ್ಟನಾ ಎಂದು ಕೇಳಿದ್ಳು. ಇದಕ್ಕೆಲ್ಲಾ ಹೇಗೆ ಉತ್ತರಿಸಬೇಕೆಂದು ಗೊತ್ತಾಗದೇ ಮೆಸೇಜ್ ನೋಡಿದ ಮೇಲೂ ಕೆಲದಿನ ಸುಮ್ಮನಾಗಿ ಬಿಟ್ಟೆ. ಅದೇಕೋ ಹೆಚ್ಚು ಸುಮ್ಮನಿರಲು  ಮನಸ್ಸು ಕೇಳಲಿಲ್ಲ. ಆಗಿದ್ದಾಗಲಿ ಎಂದು ರಿಪ್ಲೇ ಮಾಡಿಯೇಬಿಟ್ಟೆ. ಅಲ್ಲಿಂದಲೇ ಶುರುವಾಗಿದ್ದು ನಮ್ಮಿಬ್ಬರ ಪ್ರೇಮ ಕಥನ!

ಇದನ್ನೂ ಓದಿ: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!

Valentine Day Here are the 5 things that shows you he loves you

ಸಾಂದರ್ಭಿಕ ಚಿತ್ರ

ನನ್ನವಳ ನೋಡಲು ಮುಳ್ಳು ಬೇಲಿ ದಾಟಿದೆ ಮೆಸೆಂಜರ್​ನಲ್ಲಿ ಮಾತನಾಡುತ್ತಿದ್ದ ನಮ್ಮ ಕೈಗಳು, ವಾಟ್ಸಾಪ್, ವಿಡಿಯೋ ಕಾಲ್ ಅಂತ ಲಾಕ್​ಡೌನ್ ಸಮಯವನ್ನು ಸರಿಯಾಗಿ ಬಳಸಿಕೊಂಡವು. ಅವಳ ಪ್ರೀತಿ ಅಮಲಿನಲ್ಲಿ ನಾನು ಮುಳುಗಿ ಹೋಗಿದ್ದೆ. ಖಾಲಿ ಕೈಯಲ್ಲಿ ಕುಳಿತಿದ್ದ ನನಗೆ ಮೊಬೈಲ್ ಪ್ರಪಂಚವಾಯಿತು. ಸಮಯ ಸಿಕ್ಕಾಗಲೆಲ್ಲ ವಿಡಿಯೋ ಕಾಲ್ ಮಾಡಿ ಒಬ್ಬರನ್ನೊಬ್ಬರು ನೋಡುತ್ತಾ, ಮಾತನಾಡುತ್ತ ಅರ್ಥ ಮಾಡಿಕೊಳ್ಳಲು ಆರಂಭಿಸಿದೆವು. ಆಕೆ ಯಾವಾಗಲೂ ನೀನು ಹೀರೋ ತರ ಇದೀಯಾ. ನಾನು ತುಂಬ ದಪ್ಪ ಇದ್ದೀನಿ. ನಮ್ಮಿಬ್ಬರ ಜೋಡಿ ಕೂಡುತ್ತಾ? ಎಂದು ಕೇಳುತ್ತಿದ್ದಳು. ಆಗೆಲ್ಲಾ ನಾನು ದೇಹ ದೇವರು ಕೊಟ್ಟಿದ್ದು. ನನಗೆ ನಿನ್ನ ಮನಸ್ಸು ಇಷ್ಟವಾಗಿದೆ. ಅಷ್ಟೇ ಸಾಕು. ನೀನು ಹೇಗಿದ್ದರೂ ಪರವಾಗಿಲ್ಲ ಎಂದು ಸಮಾಧಾನ ಮಾಡುತ್ತಿದ್ದೆ. ಈ ಮಾತು ಯಾವ ರೀತಿ ಬೆಳೆಯಿತೆಂದರೆ ಒಂದು ದಿನವೂ ಒಬ್ಬರನೊಬ್ಬರು ಮಾತನಾಡಿಸದೇ ಇರಲಾಗುತ್ತಿರಲಿಲ್ಲ. ಈ ವೇಳೆಗಾಗಲೇ ಮಹಾಮಾರಿ ತನ್ನ ಪ್ರತಾಪವನ್ನು ಹೆಚ್ಚಿಸಿತ್ತು. ಎಲ್ಲಾ ಕಡೆ ಲಾಕ್​ಡೌನ್ ಸೂತಕದ ಛಾಯೆ. ಸಾವು-ನೋವಿನ ಸುದ್ದಿಗಳು, ಆರ್ಥಿಕತೆ ಕುಸಿತ. ಜಗತ್ತು ಎನಾಗುವುದೋ ಎಂಬ ಆತಂಕ ಸಾಮಾನ್ಯವಾದರೇ.. ನನಗೆ ನಮ್ಮ ಊರಿನಲ್ಲಿ ಹಾಕಿದ್ದ ಬೇಲಿ ದಾಟಿ ನನ್ನವಳನ್ನು ನೋಡುವುದೇ ಸಾಹಸ.

ಲಾಕ್​ಡೌನ್​ನಿಂದಾಗಿ ಒಬ್ಬರನೊಬ್ಬರು ಭೇಟಿ ಮಡಲು ಸಾಧ್ಯವಾಗುತ್ತಿರಲಿಲ್ಲ. ಪರಿಚಯಸ್ಥ ಕುಟುಂಬದ ಹುಡುಗಿಯಾದ್ರೂ ಆಕೆಯ ಮನೆಗೆ ಹೋಗುವಂತಿರಲಿಲ್ಲ. ಯಾವ ಪಾರ್ಕ್​ನಲ್ಲೂ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಜನ ಪ್ರಯಾಣಿಸಬಾರದೆಂದು ಊರಿನ ಮಂದಿಯೆಲ್ಲಾ ಸೇರಿ ಮುಳ್ಳು ಬೇಲಿಗಳಿಂದ ತಡೆ ಗೋಡೆ ನಿರ್ಮಿಸಿದ್ದರು. ಇನ್ನೂ ಕೆಲವು ಕಡೆ ಇಂತಹದ್ದೇ ಅನೇಕ ಅಡಚಣೆಗಳು ಎದುರಾಗುತ್ತಿದ್ದವು. ಆದ್ರೆ ಇವೆಲ್ಲವನ್ನೂ ಮೀರಿ ಯಾವುದನ್ನೂ ಲೆಕ್ಕಿಸದೇ ಇಬ್ಬರು ಭೇಟಿ ಮಾಡುತ್ತಿದ್ದೆವು. ಒಬ್ಬರನೊಬ್ಬರು ನೋಡಿ ತುಸು ನಕ್ಕು ಸಂಭ್ರಮಿಸುತ್ತಿದ್ದೆವು. ಒಂದು ದಿನ ಆಕೆ ನನಗೆ ಕಾಲ್ ಮಾಡಿದಾಗ ನನ್ನ ತಂಗಿ ಕಾಲ್ ರಿಸೀವ್ ಮಾಡಿ ಬೈದಿದ್ದಳು. ಬಳಿಕ ನಾನೂ ಆಕೆಗೆ ಕಾಲ್ ಮಾಡಿ ಮಾವನ ಬಳಿ ತಗಲಾಕಿಕೊಂಡಿದ್ದೆ. ಇದರೆಲ್ಲದರ ನಡುವೆ ನಮ್ಮಿಬ್ಬರ ಪ್ರೀತಿ ಬೆಳೆಯುತ್ತ ದಟ್ಟವಾಗಿ ಹರಡಿತ್ತು. ಇದೇ ವೇಳೆ ಕಾದಿತ್ತು ಎಂದೂ ಅಂದುಕೊಂಡಿರದ ಬಿಗ್ ಶಾಕ್.

ಇದನ್ನೂ ಓದಿ: ಕಳೆದು ಹೋಗುವ ಮುನ್ನ ಪ್ರೇಮಕ್ಕೆ ಕೈ ಚಾಚಿ.. ಪ್ರೀತಿಯನ್ನು ಬಚ್ಚಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ

Love Quotes

ಪ್ರಾತಿನಿಧಿಕ ಚಿತ್ರ

ಪ್ರೀತಿ ಹುಟ್ಟಿ ಚಿಗುರಿದಾಗ ಕುಟುಂಬದಲ್ಲಿ ಹುಟ್ಟಿತ್ತು ವಿರೋಧ ನನ್ನ ಹಾಗೂ ನನ್ನವಳ ಬಗ್ಗೆ ನಮ್ಮಿಬ್ಬರ ಮನೆಯಲ್ಲೂ ವಿಷಯ ಗೊತ್ತಾಯಿತು. ಅವಳು ಮನೆಯವರ ಆಯ್ಕೆಯ ಹುಡುಗಿಯಾಗಿದ್ದರೂ ಪ್ರೀತಿ ಶುರುವಾಗುತ್ತಿದ್ದಂತೆಯೇ ಮನೆ ಮಂದಿ ಎಲ್ಲಾ ಒಂದುಗೂಡಿ ತಿರುಗಿಬಿದ್ದುಬಿಟ್ಟರು. ಆ ಹುಡುಗಿ ಜೊತೆ ಮದುವೆ ಮಾಡೋಣ ಎಂದುಕೊಂಡಿದ್ದು ನಿಜ. ಆದ್ರೆ ಆಕೆ ದಪ್ಪ ಇದ್ದಾಳೆ. ಕುಳ್ಳ ಬೇರೆ. ನಿನಗೆ ಜೋಡಿಯಾಗಲ್ಲ ಎಂದು ಸುಮ್ಮನಿದ್ದೆವು. ಆದ್ರೆ ನೀನು ನಮಗೆ ಹೇಳದೇ ಆಕೆಯ ಜೊತೆ ಪ್ರೀತಿ ಬೆಳೆಸಿದ್ದೀಯಾ? ಈ ಮದುವೆ ಬೇಡ ಎಂಬ ವಿರೋಧ ಕೂಗಾಟ ಮನೆಯಲ್ಲಿ ಶುರುವಾಯಿತು.

ಆ ಕ್ಷಣ ನನಗೆ ಹೃದಯ ಬಡಿತವೇ ನಿಂತಂತಾಯಿತು. ಮನಸ್ಸು ಕೊಟ್ಟಾಗಿದೆ. ಆಕೆ ನನ್ನವಳೆಂಬ ಭಾವ ಮೂಡಾಗಿದೆ ಇಂತಹ ಸಂದರ್ಭದಲ್ಲಿ ಮನೆಯವರ ಈ ವರ್ತನೆ ಜೀವನಕ್ಕೆ ಆಘಾತ ತಂದಿತ್ತು. ಬಳಿಕ ನಾವಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಈ ಮದುವೆ ನಿಲ್ಲಲು ಬಿಡಲ್ಲ ಎಂದು ನನ್ನ ಮಾತನ್ನು ಮನೆಯವರಿಗೆ ಒಪ್ಪಿಸಿದೆ. ಬಹಳ ಜಗಳ, ಮಾತುಕತೆ ನಂತರ ಮನೆಯವರೆಲ್ಲ ಕೊನೆಗೂ ಒಪ್ಪಿದರು. ಮದುವೆಯಾಗಿ ಸಂಸಾರ ಮಾಡಬೇಕಾಗಿರುವುದು ನೀನು ಎಂದು ಒಪ್ಪಿಗೆ ನೀಡಿಬಿಟ್ಟರು. ಸದ್ಯ ಈಗ ನಾವಿಬ್ಬರೂ ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾಗುತ್ತಿದ್ದೇವೆ. ಮಾರ್ಜ್ ತಿಂಗಳಿನಲ್ಲಿ ಸಪ್ತಪದಿ ತುಳಿಯಲು ತಯಾರಿ ನಡೆಸುತ್ತಿದ್ದೇವೆ. ಲಾಕ್​ಡೌನ್​ ನಡುವಲ್ಲಿ ಮುಳ್ಳುಬೇಲಿ ದಾಟಿ ಹುಟ್ಟಿದ ಈ ಪ್ರೀತಿಗೆ ನಿಮ್ಮ ಹಾರೈಕೆ ಕೊನೆವರೆಗೂ ಇರುತ್ತದೆ ಅಲ್ಲವಾ?

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ