AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Horoscope: ಈ 4 ರಾಶಿಯ ಹುಡುಗಿಯರು ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ!

Love Horoscope: ಇವಿಷ್ಟು ರಾಶಿಯ ಹುಡುಗಿಯರು ಪ್ರೀತಿ, ಪ್ರೇಮದ ಬಗ್ಗೆ ಬಹಳ ಸೂಕ್ಷ್ಮ ಮನಸ್ಸು ಹೊಂದಿದ್ದರೂ ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲವಂತೆ. ಹಾಗಾದರೆ ಆ 4 ರಾಶಿಯ ಹುಡುಗಿಯರು ಯಾರು?

Love Horoscope: ಈ 4 ರಾಶಿಯ ಹುಡುಗಿಯರು ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ!
ಈ ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಬೀಳುವುದು ಕಷ್ಟ
Skanda
| Updated By: ರಶ್ಮಿ ಕಲ್ಲಕಟ್ಟ|

Updated on: Feb 11, 2021 | 11:43 AM

Share

ಪ್ರೀತಿ (Love) ಹೃದಯಕ್ಕೆ ಸಂಬಂಧಿಸಿದ ವಿಷಯ ಎನ್ನುವ ಅಭಿಪ್ರಾಯಕ್ಕೆ ಬಹಳ ಹಿಂದಿನಿಂದಲೂ ಬಹುಮತವಿದೆ. ಪ್ರೀತಿಯಲ್ಲಿ ಬಿದ್ದವರಂತೂ ಮಾತೆತ್ತಿದರೆ ಹೃದಯದ ಬಗ್ಗೆ ಪಾಠವನ್ನೇ ಮಾಡಿಬಿಡ್ತಾರೆ. ಆದ್ರೆ, ಯಾವುದೇ ವಿಚಾರವನ್ನೂ ಕೇವಲ ಒಂದು ದೃಷ್ಟಿಕೋನದಲ್ಲಿ ಮಾತ್ರ ನೋಡಿದರೆ ನಮಗೆ ಅದರ ಗುಣಾವಗುಣಗಳು ಅರ್ಥವಾಗುವುದಿಲ್ಲ. ಹೀಗಾಗಿ ಪ್ರೀತಿ, ಪ್ರೇಮವನ್ನೂ ಕೂಡಾ ನಾವು ಭಾವನಾತ್ಮಕ ವಲಯದಾಚೆಗೆ ನಿಂತು ಒಂಚೂರು ಲೆಕ್ಕಾಚಾರ ಹಾಕಿ ನೋಡುವುದು ಒಳ್ಳೆಯದು. ಅದರಲ್ಲಿಯೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಲೆಕ್ಕಾಚಾರವೆಂದರೆ ಥಟ್ಟನೆ ನೆನಪಾಗುವುದು ಜ್ಯೋತಿಷ್ಯ (Astrology). ನಮ್ಮಲ್ಲಿ ಧಾರ್ಮಿಕ ನಂಬಿಕೆಗಳಿಗೆ ತುಸು ಹೆಚ್ಚೇ ಪ್ರಾಧಾನ್ಯತೆ ಇರುವುದರಿಂದ ನಮ್ಮ ಬದುಕಿನ ಆಗುಹೋಗುಗಳನ್ನು ಗ್ರಹಗತಿಗಳ ಆಧಾರದ ಮೇಲೆ ಅಳೆಯುತ್ತೇವೆ.

ಭಾರತದಲ್ಲಿ ಜ್ಯೋತಿಷ್ಯ, ಜಾತಕ ಎನ್ನುವುದು ನಮ್ಮ ಹುಟ್ಟಿನಿಂದ ಹಿಡಿದು ಸಾವಿನ ತನಕವೂ ಮಹತ್ವ ಪಡೆದಿದೆ. ಒಂದು ಹುಡುಗ, ಹುಡುಗಿಗೆ ಮದುವೆ ಮಾಡುವ ಮೊದಲು ನಮ್ಮ ದೇಶದಲ್ಲಿ ಅಂದ-ಚಂದ, ಗುಣಾವಗುಣ, ಸಂಬಳ, ಆಸ್ತಿ, ಅಂತಸ್ಥನ್ನು ಹೇಗೆ ನೋಡುತ್ತಾರೋ ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಪ್ರಾಮುಖ್ಯತೆ ನೀಡಿ ಜಾತಕವನ್ನೂ ನೋಡುತ್ತಾರೆ. ಈ ಜಾತಕ ನಮ್ಮ ಜನ್ಮ ಘಳಿಗೆ, ನಕ್ಷತ್ರ, ರಾಶಿಯ ಆಧಾರದ ಮೇಲೆ ರೂಪುಗೊಂಡಿರುವುದರಿಂದ ಅದು ನಮ್ಮ ನಡವಳಿಕೆ, ಮನಸ್ಥಿತಿಗಳನ್ನೂ ಪ್ರತಿಬಿಂಬಿಸುತ್ತದೆ. ಈ ಆಧಾರದ ಮೇಲೆ ನೋಡಿದಾಗ ಕೆಲವು ರಾಶಿಯಲ್ಲಿ ಜನಿಸಿದ ಹುಡುಗಿಯರು ಪ್ರೀತಿಯ ವಿಚಾರದಲ್ಲಿ ಬಹಳ ಕಟ್ಟುನಿಟ್ಟು ಎನ್ನುವ ವಿಚಾರ ಕಾಣಸಿಗುತ್ತದೆ. ಕೆಲವು ರಾಶಿಯ ಹುಡುಗಿಯರು ಪ್ರೀತಿ, ಪ್ರೇಮದ ಬಗ್ಗೆ ಬಹಳ ಸೂಕ್ಷ್ಮ ಮನಸ್ಸು ಹೊಂದಿದ್ದರೂ ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲವಂತೆ. ಹಾಗಾದರೆ ಆ  ರಾಶಿಯ ಹುಡುಗಿಯರು ಯಾರು? ನಿಮ್ಮನ್ನು ಸತಾಯಿಸುತ್ತಿರುವ ಹುಡುಗಿಯೂ ಈ ಪಟ್ಟಿಯಲ್ಲೇ ಇದ್ದಾರಾ ಎಂಬುದನ್ನು ಇಲ್ಲಿ ನೋಡಿ.

ಇದನ್ನೂ ಓದಿ: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!

ಕನ್ಯಾ ರಾಶಿ: ಈ ರಾಶಿಯ ಹುಡುಗಿಯರು ಏನು ಯೋಚಿಸುತ್ತಾರೆ ಎಂದು ತಿಳಿಯೋಕೆ ನಿಮ್ಮಿಂದ ಸಾಧ್ಯವೇ ಇಲ್ಲ ಎನ್ನಬಹುದು. ಹುಟ್ಟಿನಿಂದಲೂ ನಾಯಕತ್ವ ಗುಣವನ್ನು ಹೊಂದಿರುವ ಇವರು ಎಲ್ಲಾ ವಿಚಾರಗಳಲ್ಲಿ ಮುಂದಿದ್ದರೂ ಪ್ರೀತಿ ವಿಷಯವನ್ನು ಮಾತ್ರ ಅಷ್ಟು ಸುಲಭಕ್ಕೆ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ತಮ್ಮನ್ನು ತಾವು ಹೆಚ್ಚು ಪ್ರೀತಿಸಿಕೊಳ್ಳುವ ಹುಡುಗಿಯರು ಚಂದದ ಮಾತಿಗಾಗಲೀ, ಹುಡುಗರ ಸ್ಟೈಲ್​ ನೋಡಿಯಾಗಲೀ ಮಾರುಹೋಗುವುದಿಲ್ಲ.

ಧನು ರಾಶಿ: ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ನೋಡಲು ತುಸು ಹೆಚ್ಚೇ ಆಕರ್ಷಿತರಾಗಿರುತ್ತಾರೆ. ಹತ್ತಾರು ಹುಡುಗಿಯರೊಂದಿಗೆ ಗುಂಪಿನಲ್ಲಿ ಇದ್ದರೂ ಕಣ್ಣು ಸೆಳೆಯುವಂತಹ ಸ್ವಭಾವ ಇವರಿಗಿರುತ್ತದೆ. ಇವರ ಹಾವಭಾವ, ನಡವಳಿಕೆ ಎಲ್ಲವೂ ಹುಡುಗರನ್ನು ಬಲುಬೇಗನೆ ಸೆಳೆಯಬಲ್ಲದು.  ಆದರೆ, ಹುಡುಗರು ಇವರ ಹಿಂದೆ ಬಿದ್ದು ಅಲೆದಾಡಿದರೂ ಧನು ರಾಶಿಯ ಹುಡುಗಿಯರು ಮಾತ್ರ ಅದಕ್ಕೆಲ್ಲಾ ಕ್ಯಾರೇ ಎನ್ನುವುದಿಲ್ಲ. ಬೇಕುಬೇಕಂತಲೇ ಹುಡುಗರನ್ನು ಕಾಯಿಸುವ ಇವರು ತಮಗೆ ಸರಿ ಎನ್ನಿಸುವ ತನಕವೂ ಒಪ್ಪಿಗೆ ಸೂಚಿಸುವುದಿಲ್ಲ.

ಕುಂಭ ರಾಶಿ: ಇವರು ನೋಡುವುದಕ್ಕೆ ತುಂಬಾ ಬೋಲ್ಡ್ ಎನಿಸಿದರೂ ಸ್ವಭಾವದಲ್ಲಿ ಅತೀ ನಾಚಿಕೆ ಉಳ್ಳವರು. ತಮ್ಮ ಹೃದಯದಲ್ಲಿ ಏನಿದೆ? ಮನಸ್ಸು ಏನು ಹೇಳುತ್ತಿದೆ? ಎನ್ನುವುದನ್ನು ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ. ಒಂದುವೇಳೆ ಪ್ರೀತಿಯಾಗಿದ್ದರೂ ಅದನ್ನು ಅಷ್ಟು ಸುಲಭಕ್ಕೆ ಹೇಳಿಕೊಳ್ಳದ ಇವರು ದೀರ್ಘಕಾಲದ ತನಕ ಹುಡುಗ ತನಗೆ ಕಾಯುವಂತೆ ಮಾಡುತ್ತಾರೆ.

ಇದನ್ನೂ ಓದಿ: ಒತ್ತಾಯದ ಒಪ್ಪಿಗೆಗಿಂತ No ಎನ್ನುವುದೂ ಪ್ರೀತಿಯೇ! ಪ್ರೀತಿಯನ್ನು ತಿರಸ್ಕರಿಸುವುದೂ ಒಂದು ಕಲೆ

ಮಕರ ರಾಶಿ: ಬೇರೆ ರಾಶಿಯ ಹುಡುಗಿಯರಿಗೆ ಹೋಲಿಸಿದರೆ ಇವರು ವಾಸ್ತವತೆಯಲ್ಲಿ ಬದುಕುವುದಕ್ಕೆ ಹೆಚ್ಚು ಇಷ್ಟಪಡುವವರು. ಪ್ರೀತಿ, ಪ್ರೇಮದ ಬಗ್ಗೆ ಎಲ್ಲರಿಗಿಂತ ಹೆಚ್ಚು ಸ್ಪಷ್ಟತೆ ಹೊಂದಿರುವ ಈ ರಾಶಿಯ ಹುಡುಗಿಯರು ಸುಖಾಸುಮ್ಮನೆ ಒಪ್ಪಿಗೆ ಸೂಚಿಸುವ ಜಾಯಮಾನದವರೇ ಅಲ್ಲ. ಮನೆಯಲ್ಲಿ ಏನು ಹೇಳಬಹುದು? ಇವರನ್ನು ಪ್ರೀತಿಸಿದರೆ ಮುಂದಿನ ಬದುಕು ಹೇಗಿರುತ್ತದೆ? ಈ ಹುಡುಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ? ಹೀಗೆ ಎಲ್ಲಾ ರೀತಿಯಲ್ಲಿಯೂ ಯೋಚಿಸಿ, ಸರಿ ಎನ್ನಿಸಿದರೆ ಮನೆಯವರೊಂದಿಗೆ ಮಾತನಾಡಿಯೇ ಒಪ್ಪಿಗೆ ಸೂಚಿಸುವಂತಹ ನೇರ ಸ್ವಭಾವದವರು. ಹೀಗಾಗಿ ಮಕರ ರಾಶಿಯ ಹುಡುಗಿಯರು ನಿಮಗೇನಾದರೂ ಒಪ್ಪಿಗೆ ಸೂಚಿಸಿದರೆ ನೀವು ಅದೃಷ್ಟವಂತರೇ ಆಗಿರುತ್ತೀರಿ.

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?