Love Horoscope: ಈ 5 ರಾಶಿಯ ಹುಡುಗರು ತಮ್ಮ ಪ್ರೇಯಸಿಯನ್ನು ಅತಿ ಹೆಚ್ಚು ಪ್ರೀತಿಸ್ತಾರೆ

Love Horoscope: ಕೆಲವು ರಾಶಿಯ ಹುಡುಗರು ಮಾತ್ರ ನಿಮ್ಮ ಪಾಲಿಗೆ ನಿಷ್ಠಾವಂತ ಪ್ರೇಮಿಗಳಾಗ್ತಾರಂತೆ. ಅವರು ಜನಿಸಿದ ರಾಶಿಯ ಪ್ರಭಾವವೇ ಹಾಗಿರುವ ಕಾರಣ ಅವರು ಎಂದೆಂದಿಗೂ ರೊಮ್ಯಾಂಟಿಕ್​ ಪ್ರೇಮಿಯಾಗಿಯೇ ಇದ್ದು ಸಂಗಾತಿಯನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸ್ತಾರಂತೆ.

Love Horoscope: ಈ 5 ರಾಶಿಯ ಹುಡುಗರು ತಮ್ಮ ಪ್ರೇಯಸಿಯನ್ನು ಅತಿ ಹೆಚ್ಚು ಪ್ರೀತಿಸ್ತಾರೆ
ಸಾಂದರ್ಭಿಕ ಚಿತ್ರ
Follow us
Skanda
|

Updated on:Feb 11, 2021 | 2:55 PM

ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಅದು ಅಂದ ಚಂದಕ್ಕಿಂತ ಹೆಚ್ಚು ಮನಸ್ಸಿನ ನಿಷ್ಕಲ್ಮತೆಯ ಮೇಲೆಯೇ ನಿಂತಿರುವಂತಹದ್ದು. ಈ ಜಗತ್ತಿನಲ್ಲಿ ಪ್ರೀತಿಸುವ ಪ್ರತಿಯೊಬ್ಬರಿಗೂ ತನ್ನ ಪ್ರೇಮಿಯೇ ದಿ ಬೆಸ್ಟ್ ಎಂಬ ಭಾವವಿರುತ್ತದೆ. ಆದರೂ, ಒಮ್ಮೊಮ್ಮೆ ಕೆಲವು ಪ್ರೇಮ ಪ್ರಕರಣಗಳಲ್ಲಿ ಸಣ್ಣಪುಟ್ಟ ಮನಸ್ತಾಪಗಳೇ ದೊಡ್ಡ ಕಂದಕವಾಗಿ ಮಾರ್ಪಟ್ಟು ಪ್ರೀತಿಗೆ ಪೂರ್ಣ ವಿರಾಮ ಇಡುವ ಸಾಧ್ಯತೆ ಇರುತ್ತದೆ. ಈ ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇವುಗಳ ಹಿಂದೆ ಪರಿಸ್ಥಿತಿಯ ಪ್ರಭಾವ ಎಷ್ಟಿರುತ್ತದೋ.. ಅಷ್ಟೇ ಪ್ರಭಾವ ವ್ಯಕ್ತಿಯ ಗ್ರಹಗತಿಯದ್ದೂ ಆಗಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿದೆ. ಹೀಗಾಗಿಯೇ ನಮ್ಮಲ್ಲಿ ಮದುವೆಗೆ ಮುನ್ನ ಜಾತಕ, ಜ್ಯೋತಿಷ್ಯ (Astrology) ಎಂದೆಲ್ಲಾ ಯೋಚಿಸುತ್ತಾರೆ.

ಆದರೆ, ಕೆಲವು ರಾಶಿಯ ಹುಡುಗರು ಮಾತ್ರ ನಿಮ್ಮ ಪಾಲಿಗೆ ನಿಷ್ಠಾವಂತ ಪ್ರೇಮಿಗಳಾಗ್ತಾರಂತೆ. ಅವರು ಜನಿಸಿದ ರಾಶಿಯ ಪ್ರಭಾವವೇ ಹಾಗಿರುವ ಕಾರಣ ಅವರು ಎಂದೆಂದಿಗೂ ರೊಮ್ಯಾಂಟಿಕ್​ ಪ್ರೇಮಿಯಾಗಿಯೇ ಇದ್ದು ಸಂಗಾತಿಯನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸ್ತಾರಂತೆ. ಹಾಗಾದರೆ ಆ ವಿಶೇಷ ರಾಶಿಗಳು ಯಾವುವು? ನಿಮ್ಮ ಪ್ರಿಯಕರನ ರಾಶಿಯೂ ಅದರಲ್ಲಿದೆಯಾ? ಎಂದು ಒಮ್ಮೆ ಕಣ್ಣಾಡಿಸಿ.

ಮಿಥುನ ರಾಶಿ: ಈ ರಾಶಿಯಲ್ಲಿ ಹುಟ್ಟಿದ ಹುಡುಗರು ಅತ್ಯುತ್ತಮ ಪ್ರೇಮಿಗಳಾಗಿರುತ್ತಾರಂತೆ. ಅವರು ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಸಾಕು ಎಂದೆಂದಿಗೂ ತನ್ನ ಹುಡುಗಿಯ ಕೈ ಬಿಡುವುದಿಲ್ಲ. ಹುಡುಗಿಯ ಮನಸ್ಸನ್ನು ಬಲುಬೇಗನೆ ಅರ್ಥ ಮಾಡಿಕೊಳ್ಳುವ ಇವರು ಹೆಚ್ಚಿನ ಸಮಯವನ್ನೂ ನೀಡುವುದರ ಜೊತೆಗೆ ಸಣ್ಣಪುಟ್ಟ ವಿಷಯಗಳಿಗೂ ಸ್ಪಂದಿಸುತ್ತಾ ಮನದರಸಿಯನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ.

ಸಿಂಹ ರಾಶಿ: ಸ್ವಭಾವತಃ ಸ್ನೇಹ ಜೀವಿಗಳಾಗಿರುವ ಇವರು ಯಾವತ್ತೂ ಪ್ರೀತಿ ನೀಡುವುದರಲ್ಲಿ ಕೊರತೆ ಮಾಡುವುದಿಲ್ಲ. ತಮಗೆಷ್ಟೇ ಕಷ್ಟವಿದ್ದರೂ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಸಂಗಾತಿಯ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುವ ವಿಶಾಲ ಹೃದಯದವರು. ಈ ರಾಶಿಯವರನ್ನು ವರಿಸಿದವರ ದಾಂಪತ್ಯ ಜೀವನದಲ್ಲಿ ಪ್ರೀತಿಯದ್ದೇ ಮೇಲುಗೈ ಇರುತ್ತದೆ ಎಂದು ಲೆಕ್ಕಾಚಾರ ಹೇಳುತ್ತದೆ.

ತುಲಾ ರಾಶಿ: ಆಕರ್ಷಕ ವ್ಯಕ್ತಿತ್ವದವರಾದ ತುಲಾ ರಾಶಿ ಹುಡುಗರು ಮೊದಲ ನೋಟದಲ್ಲೇ ಹೃದಯ ಗೆದ್ದುಬಿಡುತ್ತಾರೆ. ಸದಾ ಹಸನ್ಮುಖಿಗಳಾಗಿರುವ ಇವರು ಕೋಪ ಮಾಡಿಕೊಂಡರೂ ಕೆಲವೇ ಕ್ಷಣಗಳಲ್ಲಿ ಶಾಂತರಾಗುತ್ತಾರೆ. ಸಂಗಾತಿಯನ್ನು ರಕ್ಷಿಸಲು ಎಂತಹ ತ್ಯಾಗವನ್ನೂ ಮಾಡಬಲ್ಲ ಇವರು ಒಮ್ಮೆ ನಿಮ್ಮನ್ನು ಒಪ್ಪಿಕೊಂಡರೆಂದರೆ ಯಾವ ಸಂದರ್ಭದಲ್ಲೂ ಬಿಟ್ಟುಕೊಡುವುದಿಲ್ಲ. ತಮ್ಮ ಕೆಲಸದ ಬಗ್ಗೆ ಅತಿ ಹೆಚ್ಚಿನ ನಿಷ್ಠೆ ಹೊಂದಿರುವ ಇವರು ಏಕಕಾಲಕ್ಕೆ ಕೆಲಸವನ್ನೂ, ಪ್ರೀತಿಯನ್ನೂ ನಿಭಾಯಿಸಬಲ್ಲರು.

ವೃಶ್ಚಿಕ ರಾಶಿ: ರೊಮ್ಯಾಂಟಿಕ್​ ಸ್ವಭಾವದವರಾದ ಇವರು ಬಲುಬೇಗನೆ ಹುಡುಗಿಯರನ್ನು ಆಕರ್ಷಿಸುತ್ತಾರೆ. ಇದೇ ಕಾರಣಕ್ಕಾಗಿ ಕೆಲವೊಮ್ಮೆ ಸಂಗಾತಿಯ ಕೆಂಗಣ್ಣಿಗೂ ಗುರಿಯಾಗುತ್ತಾರೆ. ಆದರೆ, ಮೇಲ್ನೋಟಕ್ಕೆ ಎಲ್ಲರನ್ನೂ ಮರುಳು ಮಾಡುವಂತೆ ಕಾಣುವ ಇವರು ಆಂತರಿಕವಾಗಿ ತಮ್ಮ ಪ್ರೇಯಸಿಗೆ ಬದ್ಧರಾಗಿರುತ್ತಾರೆ. ಸದಾ ಪ್ರೀತಿಯನ್ನೇ ಧ್ಯಾನಿಸುವ ಇವರಿಗೆ ಸಂಗಾತಿ ಬೇಸರ ಮಾಡಿಕೊಂಡರೆ ಚಡಪಡಿಕೆ ಆರಂಭವಾಗುತ್ತದೆ. ಆದ್ದರಿಂದ ಯಾವಾಗಲೂ ತನ್ನ ಜೊತೆಗಿರುವವರನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ: ಈ 4 ರಾಶಿಯ ಹುಡುಗಿಯರು ಅಷ್ಟು ಸುಲಭಕ್ಕೆ ಪ್ರೀತಿಯಲ್ಲಿ ಬೀಳುವುದಿಲ್ಲ!

ಮಕರ ರಾಶಿ: ಈ ರಾಶಿಯ ಹುಡುಗರು ಎಲ್ಲರಂತಲ್ಲ. ಎದೆಯಲ್ಲಿ ಎಷ್ಟೇ ಪ್ರೀತಿ ಇದ್ದರೂ ಅದನ್ನು ಪದೇಪದೇ ವ್ಯಕ್ತಪಡಿಸಲು ಹೋಗುವುದಿಲ್ಲ. ಈಗಿನ ಕಾಲಕ್ಕೆ ಔಟ್​ಡೇಟೆಡ್ ರೀತಿಯಲ್ಲಿ ಕಾಣುತ್ತರಾದರೂ ಎಲ್ಲರಿಗಿಂತ ಹೆಚ್ಚು ಪ್ರೀತಿಯುಳ್ಳವರಾಗಿರುತ್ತಾರೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಸ್ವಭಾವದವರಾದ ಇವರು ತಾನಿಷ್ಟಪಟ್ಟವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಯಾವುದೇ ಸಂದರ್ಭದಲ್ಲಿ ಆತುರಕ್ಕೆ ಬಿದ್ದು, ದುಡುಕಿ ನಿರ್ಧಾರ ತೆಗೆದುಕೊಳ್ಳದೇ ತಮ್ಮ ಸಂಗಾತಿಯ ದೃಷ್ಟಿಕೋನದಲ್ಲಿ ನಿಂತು ಯೋಚಿಸುವಷ್ಟು ವ್ಯವಧಾನ ತೋರಿಸುತ್ತಾರೆ. ಬಾಯ್ಬಿಟ್ಟು ಪ್ರೀತಿಯನ್ನು ಹೇಳಿಕೊಳ್ಳುವುದಕ್ಕಿಂತ ತಮ್ಮ ಕಾಳಜಿಯ ಮೂಲಕವೇ ಅದನ್ನು ವ್ಯಕ್ತಪಡಿಸುವ ಈ ರಾಶಿಯ ಹುಡುಗರನ್ನು ವರಿಸುವವರು ನಿಜಕ್ಕೂ ಅದೃಷ್ಟವಂತರು.

Published On - 2:53 pm, Thu, 11 February 21