Love Tips: ಹುಡುಗಿಯರಿಗೆ ನೀವು ಪರ್ಫೆಕ್ಟ್ ಅನಿಸಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ..
Valentine's Day: ಸಾಮಾನ್ಯವಾಗಿ ಕೆಲ ಗುಣಗಳು ಹುಡಗರಲ್ಲಿದ್ದರೆ ಹುಡುಗಿಯರಿಗೆ ಹತ್ತಿರವಾಗಿ ಬಿಡುತ್ತಾರಂತೆ. ಹಾಗಾದರೆ, ಯಾವುದು ಆ ಗುಣಗಳು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ನನ್ನ ಬಳಿ ಹಣ ಇದೆ. ನೋಡೋಕು ಸ್ಮಾರ್ಟ್ ಆಗಿದ್ದೀನಿ. ಆದರೆ, ನನಗೆ ಯಾವ ಹುಡುಗಿಯೂ ಒಲಿಯುತ್ತಿಲ್ಲ. ಆದರೆ, ನನ್ನ ಗೆಳೆಯ ನೋಡೋಕೆ ಸುಮಾರಾಗಿದ್ದಾನೆ. ಆತನಿಗೆ ಮಾತ್ರ ಹುಡುಗಿಯರು ಬೀಳ್ತಾರೆ… ಹೀಗೆ ಯಾರಾದರೂ ಹೇಳುವುದನ್ನು ನೀವು ಕೇಳಿರುತ್ತೀರಾ. ಅಂದರೆ, ಹಣ ಇದ್ದು, ನೋಡೋಕೆ ಚೆನ್ನಾಗಿದ್ದರೆ ಮಾತ್ರ ನೀವು ಹುಡುಗಿಯರಿಗೆ ಪರ್ಫೆಕ್ಟ್ ಅನಿಸಲೇಬೇಕು ಎನ್ನುವ ನಿಯಮವೇನು ಇಲ್ಲ. ಹುಡುಗಿಯರು ಲೈಫ್ ಪಾರ್ಟ್ನರ್ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿರುತ್ತಾರೆ. ಅಂಥವರು ಸಿಕ್ಕರೆ ಮಾತ್ರ ಅವರಿಗೆ ಒಲಿಯುತ್ತಾರೆ. ಇನ್ನು, ಸಾಮಾನ್ಯವಾಗಿ ಕೆಲ ಗುಣಗಳು ಹುಡಗರಲ್ಲಿದ್ದರೆ ಹುಡುಗಿಯರು ಅವರಾಗಿಯೇ ಹತ್ತಿರವಾಗಿ ಬಿಡುತ್ತಾರಂತೆ. ಹಾಗಾದರೆ, ಯಾವುದು ಆ ಗುಣಗಳು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಬೆಸ್ಟ್ ಫ್ರೆಂಡ್ ಎನಿಸಿಕೊಳ್ಳಬೇಕು ಹುಡುಗಿಯರು ಸಾಮಾನ್ಯವಾಗಿ ಎಲ್ಲಾ ಗುಟ್ಟುಗಳನ್ನು ತಮ್ಮ ಬೆಸ್ಟ್ ಫ್ರೆಂಡ್ ಬಳಿ ಮಾತ್ರ ಹೇಳಿಕೊಳ್ಳುತ್ತಾರೆ. ಹೀಗಾಗಿ, ನೀವು ಅವರಿಗೆ ಬೆಸ್ಟ್ ಫ್ರೆಂಡ್ ಆಗಬೇಕು! ಅಂದರೆ, ನೀವು ಅವರು ಹೇಳುವ ಪ್ರತಿ ಸೀಕ್ರೆಟ್ ಅನ್ನು ಕಾಯ್ದಿಟ್ಟುಕೊಳ್ಳಬೇಕು. ಅವರ ಬೆಸ್ಟ್ ಫ್ರೆಂಡ್ ರೀತಿಯಲ್ಲೇ ನಡೆದುಕೊಂಡರೆ ನೀವು ಅವರ ಲವರ್ ಆಗೋಕೆ ಅರ್ಹರು ಎಂದೇ ಅರ್ಥ. ಬೆಸ್ಟ್ ಫ್ರೆಂಡ್ ಇದ್ದವರು ಲವರ್ ಆಗಿದ್ದಕ್ಕೆ ಸಾಕಷ್ಟು ಉದಾಹರಣೆ ಇವೆ. ಇದಕ್ಕೆಲ್ಲವೂ ಈ ಗುಣವೇ ಕಾರಣ.
ನೀವು ಸದಾ ಅವಳನ್ನೇ ಚೂಸ್ ಮಾಡಬೇಕು ನಿಮ್ಮ ನಡುವೆ ಒಮ್ಮೊಮ್ಮೆ ಜಗಳ ಏರ್ಪಡಬಹುದು. ಇನ್ನು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ನೀವಿಬ್ಬರೂ ತಲುಪಬಹುದು. ಅಂಥ ಸಂದರ್ಭದಲ್ಲೂ ನೀವು ಅವಳನ್ನೇ ಚೂಸ್ ಮಾಡಬೇಕು. ನೀವು ಎಂಥ ಕಷ್ಟದ ಸಂದರ್ಭ ಬಂದರೂ ಅವಳ ಪರವಾಗಿಯೇ ನಿಲ್ಲಬೇಕು. ಈ ಗುಣ ನಿಮ್ಮಲ್ಲಿದ್ದರೆ ಹುಡುಗಿಗೆ ನಿಮ್ಮ ಜೊತೆಗೆ ಬಾಳ್ವೆ ಮಾಡಬಹುದೆಂಬ ನಂಬಿಕೆ ಹುಟ್ಟುತ್ತದೆ.
ಆಕೆಗೆ ನಂಬಿಕಸ್ಥನಾಗಿರಬೇಕು ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ, ನೀವು ಇಷ್ಟ ಪಡುವ ಹುಡುಗಿಯ ಬಳಿ ಅದೆಷ್ಟೇ ಕಹಿ ಸತ್ಯವಿದ್ದರೂ ಅದನ್ನು ಹೇಳಿ ಬಿಡಬೇಕು. ಆ ಕ್ಷಣಕ್ಕೆ ಅವರಿಗೆ ಬೇಸರ ಅನಿಸಿದರೂ ನಂತರ ಅವರು ಸರಿಯಾಗುತ್ತಾರೆ. ಒಂದೊಮ್ಮೆ ನೀವು ಹೇಳದೆ ಮುಚ್ಚಿಟ್ಟ ವಿಚಾರ ಬೇರೆಯವರಿಂದ ಗೊತ್ತಾದರೆ ಅವರಿಗೆ ಹೆಚ್ಚು ಬೇಸರ ಅನಿಸಬಹುದು.
ಅವರಿಗೆ ಆದ್ಯತೆ ನೀಡಬೇಕು ನಾನು ಇಷ್ಟ ಪಡುವ ಹುಡುಗ ನನಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಹೀಗಾಗಿ, ನೀವು ಅವರಿಗೆ ಸದಾ ಆದ್ಯತೆ ನೀಡಬೇಕು. ಹಾಗಿದ್ದಾಗ ಸಹಜವಾಗಿಯೇ ಹುಡುಗಿಯರು ನಿಮ್ಮನ್ನು ಹೆಚ್ಚು ಇಷ್ಟಪಡುತ್ತಾರೆ.
ಸರ್ಪ್ರೈಸ್ ಕೊಡೋಕೆ ಮರೆಯಬೇಡಿ ಹುಡುಗಿಯರು ಎಲ್ಲರಿಂದಲೂ ಸರ್ಪ್ರೈಸ್ ಬಯಸುತ್ತಾರೆ. ಹೀಗಾಗಿ, ಅವರಿಗೆ ನೀವು ಸರ್ಪ್ರೈಸ್ ಕೊಟ್ಟಷ್ಟೂ ಇಷ್ಟವಾಗುತ್ತಾ ಹೋಗುತ್ತೀರಿ. ಆಗ ನೀವು ಪರ್ಫೆಕ್ಟ್ ಎನ್ನುವ ಭಾವನೆ ಅವರಲ್ಲಿ ಮೂಡುತ್ತದೆ. ಅಲ್ಲದೇ ನಿಮ್ಮ ಬರುವಿಕೆಗಾಗಿ ಅವರು ಸದಾ ಕಾಯುತ್ತಲೇ ಇರುತ್ತಾರೆ.
ಇದನ್ನೂ ಓದಿ: ಪ್ರೀತಿಯಲ್ಲಿದ್ದಾಗಲೇ ಅನಾಮಿಕನಿಗೆ ಮುತ್ತಿಟ್ಟೆ.. ಈ ವಿಷಯವನ್ನು ನನ್ನ ಹುಡುಗನಿಗೆ ಹೇಳಲೇ..?
Published On - 3:58 pm, Thu, 11 February 21