ಮೈಸೂರು: ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ. ಎಲ್ಲರನ್ನು ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆ ಸ್ವೀಕರಿಸಿ ಎಂದು ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.
ಮುಂದೆಯಾದರು ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವರಾಜ್ ಅರಸು ಅವರಂತೆ ಎಲ್ಲರನ್ನು ಗೌರವಿಸುವುದನ್ನು ಕಲಿಯಿರಿ ಎಂದು ಹಳ್ಳಿಹಕ್ಕಿ ಹುಲಿಯನಿಗೆ ಸಲಹೆ ನೀಡಿದರು.
‘ಯೋಗೇಶ್ವರ್, ಸಂತೋಷ್ ಸಿಎಂ ಕೊಟ್ಟ ಹಣ ಎತ್ತಿಕೊಂಡು ಹೋದರು’
ಉಪಚುನಾವಣೆ ಸಮಯದಲ್ಲಿ ಯೋಗೇಶ್ವರ್ ಮತ್ತು ಸಂತೋಷ್ ಸಿಎಂ ಕೊಟ್ಟ ಹಣ ಎತ್ತಿಕೊಂಡು ಹೋದರು ಎಂದು ಈ ವೇಳೆ H.ವಿಶ್ವನಾಥ್ ಹೇಳಿದ್ದಾರೆ.
ಹೌದು, ನಾನು ಹೇಳಿದ್ದು ಸತ್ಯ. ನಾನು ಹೇಳಿದ ದೊಡ್ಡ ಮೊತ್ತ 5 ಲಕ್ಷ ರೂಪಾಯಿ. ಅವರಿಬ್ಬರು 5 ಲಕ್ಷ ರೂಪಾಯಿ ಹಣ ಎತ್ತಿಕೊಂಡು ಹೋದರು ಎಂದು ಆರೋಪಿಸಿದೆ. ನನಗೆ ಅದೇ ದೊಡ್ಡ ಮೊತ್ತ. ಸಿಎಂ ಆಗಿದ್ದ ನಿಮಗೆ ಅದು ಕೋಟಿ ಕೋಟಿ ಇರಬಹುದು. ಆದರೆ, ಅದು 5 ಲಕ್ಷ ರೂಪಾಯಿ ಎಂದು ವಿಶ್ವನಾಥ್ ಹೇಳಿದರು.
‘ಹಳೆಯದೆಲ್ಲವನ್ನು ಮರೆತು ಮುಂದೆ ಸಾಗೋಣ ಬನ್ನಿ’
ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟಕ್ಕೆ ನಾವು ಬರುತ್ತೇವೆ. ಹಳೆಯದೆಲ್ಲವನ್ನು ಮರೆತು ಮುಂದೆ ಸಾಗೋಣ ಬನ್ನಿ ಎಂದು ಹೇಳಿದ ವಿಶ್ವನಾಥ್ ಸಿದ್ದರಾಮಯ್ಯರನ್ನು ಹೋರಾಟಕ್ಕೆ ಆಹ್ವಾನಿಸಿದರು.
‘ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇ ಸಿದ್ದು ಸಿಎಂ ಆಗಿದ್ದು’
ಕುರುಬ ಎಸ್.ಟಿ.ಹೋರಾಟಕ್ಕೆ ಸಿದ್ದರಾಮಯ್ಯನವರೇ ಮುಂದೆ ನಿಂತುಕೊಳ್ಳಲಿ. ಅವರ ಹಿಂದೆ ನಾವೇಲ್ಲ ಹೋಗುತ್ತೇವೆ. ಅವರ ನೇತೃತ್ವದಲ್ಲಿ ಹೋರಾಟ ಮಾಡುವುದಕ್ಕೆ ನಮಗೇನು ಅಭ್ಯಂತರ ಇಲ್ಲ. ಇದು ರಾಜಕೀಯ ಹೋರಾಟ ಅಲ್ಲ ನಾವೇನು ಸಿದ್ದರಾಮಯ್ಯನವರಿಗೆ ಮತ್ತೆ ಸಿಎಂ ಮಾಡೋಕೆ ಜೈ ಅನ್ನೋಲ್ಲ. ಸಮಯದಾಯದ ಅಭಿವೃದ್ಧಿಗೆ ಕರೆಯುತ್ತಿದ್ದೇವೆ. ಅವರು ಬಂದರೆ ನಾವು ನಾಯಕತ್ವ ತ್ಯಾಗ ಮಾಡುತ್ತೇವೆ. ಅಷ್ಟೇ ಯಾಕೆ ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇ ಸಿದ್ದು ಸಿಎಂ ಆಗಿದ್ದು ಎಂದು ಹೆಚ್.ವಿಶ್ವನಾಥ್ ಹೇಳಿದರು.
ದೇಶದಲ್ಲಿ ಯಾರು ಮಾಡದ ಸಾಹಸಕ್ಕೆ ನೀವು ಕೈ ಹಾಕಿದ್ದಿರಿ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದೀರಿ. ಆ ಸಮಿಕ್ಷೆ ವರದಿ ಚರ್ಚೆಗೆ ಬಂದಿದ್ದರೆ ನೀವು ಮತ್ತೆ ಸಿಎಂ ಆಗುತ್ತಿದ್ದರೇನೋ? ಇರಲಿ ಅದೆಲ್ಲವೂ ಈಗ ಮುಗಿದಿದೆ. ಆದರೆ ಕುರುಬ ಸಮುದಾಯ ಎಸ್.ಟಿ.ಗೆ ಸೇರುವ ಹೋರಾಟ ಇನ್ನು ಕಠಿಣವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ಬಹಿರಂಗವಾಗಿ ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಆಹ್ವಾನ ನೀಡಿದರು.
ಹಳ್ಳಿಹಕ್ಕಿ ಹಿತವಚನಕ್ಕೆ ಹುಲಿಯಾ ತಿರುಗೇಟು
ಇತ್ತ, ಹಳ್ಳಿಹಕ್ಕಿಯ ಹೇಳಿಕೆಗೆ ತಿರುಗೇಟು ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವನಾಥ್ ಎಷ್ಟು ಸಲ ಏಕವಚನದಲ್ಲಿ ಮಾತನಾಡಿದ್ದಾನೆ ಅಂತಾ ತೋರಿಸಲಾ? ಕೆ.ಆರ್.ನಗರ ಶಾಸಕನ ಬಗ್ಗೆ ಎಷ್ಟು ಮಾತನಾಡಿದ್ದಾನೆ ತೋರಿಸ್ಲಾ? ಎಂದು ಪ್ರಶ್ನಿಸಿದರು. ನನ್ನದು ಹಳ್ಳಿ ಭಾಷೆ. ಹಾಗಾಗಿ, ಅದು ಏಕವಚನ ಅನ್ನಿಸುತ್ತದೆ. ನಾನು ಉದ್ದೇಶಪೂರಕವಾಗಿ ಏಕವಚನ ಬಳಸಲ್ಲ. ಅದು ತಾನಾಗಿಯೇ ಬರೋದು ಎಂದು ಹೇಳಿದರು.
‘ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ’
ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಯಾವ ದೇವರನ್ನಾದರೂ ಬಹುವಚನದಲ್ಲಿ ಕರೆದಿರೋದು ನೋಡಿದ್ದೀರಾ? ಮಹದೇಶ್ವರರು ಅಂತಾ ನಾವು ಕರೆಯಲ್ಲ. ಮಹದೇಶ್ವರ ಅಂತಾ ಕರೆಯುತ್ತೇವೆ. ಹಾಗಾಗಿ, ವಿಶ್ವನಾಥ್‌ರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಜೊತೆಗೆ, ನನಗೆ ಯಾರೂ ನಾಯಕತ್ವವನ್ನು ಬಿಟ್ಟುಕೊಟ್ಟಿಲ್ಲವೆಂದು ಟಾಂಗ್ ಕೊಟ್ಟರು. ನಾನು ಕಾಂಗ್ರೆಸ್ ಸೇರಲು ರಾಜ್ಯದ ‘ಕೈ’ ನಾಯಕರು ಕಾರಣರಲ್ಲ. ಬೆಂಗಳೂರಿನ ನನ್ನ ಸ್ನೇಹಿತ ಅಹ್ಮದ್ ಪಟೇಲ್ ಜೊತೆ ಚರ್ಚಿಸಿದ್ರು. ಬಳಿಕ ಸೋನಿಯಾಗಾಂಧಿ ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರು ಎಂದು ಹೇಳಿದರು. ಸ್ಪಷ್ಟವಾಗಿ ಹೇಳ್ತೇನೆ, ರಾಜ್ಯದ ಯಾವ ನಾಯಕರು ಕಾರಣರಲ್ಲ ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್‌ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಜಾತಿ ಕೇಳಿ ಹುಟ್ಟುವುದಾಗಿದ್ರೇ.. ನಾನು ಮೇಲ್ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕ್ತಿದ್ದೆ: ಸಿದ್ದರಾಮಯ್ಯ
ಆರ್ಎಸ್ಎಸ್ಗೆ ಕುರುಬ ಸಮುದಾಯವನ್ನು ಒಡೆಯಲು ಈಶ್ವರಪ್ಪನೇ ಅಸ್ತ್ರ: ಸಿದ್ದರಾಮಯ್ಯ ಆರೋಪ
ಎಲ್ರೂ ಭ್ರಷ್ಟಾಚಾರ ಮುಕ್ತ ಮಾಡುತ್ತೇವೆಂದು ಹೊಸ ಪಕ್ಷ ಕಟ್ಟುತ್ತಾರೆ -ರಜನಿ ರಂಗಪ್ರವೇಶಕ್ಕೆ ಸಿದ್ದರಾಮಯ್ಯ ರಿಯಾಕ್ಷನ್
Published On - 1:12 pm, Fri, 4 December 20