‘ಚಾಕು ಇದ್ದಿದ್ರೆ ಸಿದ್ದರಾಮಯ್ಯ-ಕುಮಾರಸ್ವಾಮಿ ಪರಸ್ಪರ ಚುಚ್ಚಿಕೊಳ್ತಿದ್ದರು’

|

Updated on: Nov 21, 2019 | 4:10 PM

ಮೈಸೂರು: ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪ ಆಗಾಗ ತಾರಕಕ್ಕೇರುತ್ತಿದೆ. ಈ ವಿಚಾರವಾಗಿ ಹುಣಸೂರಿನ ಹನಸೋಗೆಯಲ್ಲಿ ಅನರ್ಹ ಶಾಸಕ ಎಚ್ ವಿಶ್ವನಾಥ್ ಒಂದು ಮಾತು ಹೇಳಿದ್ದು, ಚಾಕು ಇದ್ದಿದ್ದರೆ ಅವರಿಬ್ಬರೂ ಪರಸ್ಪರ ಚುಚ್ಚಿಕೊಳ್ಳುತ್ತಿದ್ದರು ಎಂದಿದ್ದಾರೆ. ಈಗ ಬೈ ಎಲೆಕ್ಷನ್​ ಟೈಮ್​ನಲ್ಲಿ ಕುಮಾರಸ್ವಾಮಿ ಸಿದ್ದರಾಮಯ್ಯ ಒಟ್ಟಿಗೆ ಅನರ್ಹರನ್ನು ಸೋಲಿಸಲು ಪಣ ತೊಟ್ಟಿದ್ದಾರಂತೆ. ಈ ಹೊಂದಾಣಿಕೆ ಮೊದಲೇ ಇದ್ದಿದ್ದರೆ ಸರ್ಕಾರ ಏಕೆ ಬೀಳುತ್ತಾ ಇತ್ತು? ನೀವೇ ಮುಷ್ಠಿಯುದ್ಧ ಮಾಡಿ ಸರ್ಕಾರ ಕೆಡವಿದವರು. ಈಗ […]

‘ಚಾಕು ಇದ್ದಿದ್ರೆ  ಸಿದ್ದರಾಮಯ್ಯ-ಕುಮಾರಸ್ವಾಮಿ ಪರಸ್ಪರ ಚುಚ್ಚಿಕೊಳ್ತಿದ್ದರು’
Follow us on

ಮೈಸೂರು: ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪ ಆಗಾಗ ತಾರಕಕ್ಕೇರುತ್ತಿದೆ. ಈ ವಿಚಾರವಾಗಿ ಹುಣಸೂರಿನ ಹನಸೋಗೆಯಲ್ಲಿ ಅನರ್ಹ ಶಾಸಕ ಎಚ್ ವಿಶ್ವನಾಥ್ ಒಂದು ಮಾತು ಹೇಳಿದ್ದು, ಚಾಕು ಇದ್ದಿದ್ದರೆ ಅವರಿಬ್ಬರೂ ಪರಸ್ಪರ ಚುಚ್ಚಿಕೊಳ್ಳುತ್ತಿದ್ದರು ಎಂದಿದ್ದಾರೆ.

ಈಗ ಬೈ ಎಲೆಕ್ಷನ್​ ಟೈಮ್​ನಲ್ಲಿ ಕುಮಾರಸ್ವಾಮಿ ಸಿದ್ದರಾಮಯ್ಯ ಒಟ್ಟಿಗೆ ಅನರ್ಹರನ್ನು ಸೋಲಿಸಲು ಪಣ ತೊಟ್ಟಿದ್ದಾರಂತೆ. ಈ ಹೊಂದಾಣಿಕೆ ಮೊದಲೇ ಇದ್ದಿದ್ದರೆ ಸರ್ಕಾರ ಏಕೆ ಬೀಳುತ್ತಾ ಇತ್ತು? ನೀವೇ ಮುಷ್ಠಿಯುದ್ಧ ಮಾಡಿ ಸರ್ಕಾರ ಕೆಡವಿದವರು. ಈಗ ಗಿಣಿಗಳಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

Published On - 4:10 pm, Thu, 21 November 19